ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯಿಂದ ಸಾರ್ವಜನಿಕರ ಸಂಪರ್ಕ 'ವೆಬ್ ತಾಣ'

By Mahesh
|
Google Oneindia Kannada News

ನವದೆಹಲಿ, ಜು.27: ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಜನರಿಗೆ ಹತ್ತಿರವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪ್ರತ್ಯೇಕ ವೆಬ್ ತಾಣ ವನ್ನು ಲೋಕಾರ್ಪಣೆ ಮಾಡಿದ್ದಾರೆ.

ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, ಪ್ರಜೆಗಳ ಸಮಸ್ಯೆಗಳಿಗೆ ಸ್ಪಂದಿಸುವ ವಿಶೇಷ ವೇದಿಕೆ ಒದಗಿಸಿದ್ದಾರೆ. mygov.nic.in ಎಂಬ ವೆಬ್‌ಸೈಟ್‌ಗೆ ಶನಿವಾರ ಚಾಲನೆ ನೀಡಿ ಇದು ತಾಂತ್ರಿಕ ಸೇತುವೆ ಎಂದು ಘೋಷಿಸಿದ್ದಾರೆ.

PM Modi launches portal for citizens to contribute in governance

ಸರ್ಕಾರದ ಮಹತ್ವದ ಯೋಜನೆಗಳ ಅನುಷ್ಠಾನಕ್ಕೆ ಜನರ ಸಲಹೆ, ಅನಿಸಿಕೆಗಳನ್ನು ಪಡೆಯಲು ನಿರ್ಧಾರ ಮಾಡಿದ್ದಾರೆ. ಮೋದಿ ಆಶಯದಂತೆ, ಈ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದೆ. ಗಂಗಾ ನದಿ ಶುದ್ಧೀಕರಣ, ಕೌಶಲ್ಯಾಭಿವೃದ್ಧಿ ಮುಂತಾದ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಜನರು ತಮ್ಮ ಅಭಿಪ್ರಾಯ, ಸಲಹೆಗಳನ್ನು ಈ ವೆಬ್‌ಸೈಟ್‌ನಲ್ಲಿ ದಾಖಲಿಸಬಹುದು. ಇದು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ನೆರವಾಗಲಿದೆ.

ವೆಬ್‌ಸೈಟ್ ಅನ್ನು ಸಮಾಜದ ವಿವಿಧ ಸ್ತರಗಳ ವ್ಯಕ್ತಿಗಳು ಉಪಯೋಗಿಸಲು ಅನುಕೂಲವಾಗುವಂತೆ, ವಿನ್ಯಾಸಗೊಳಿಸಲಾಗಿದೆ. ವೆಬ್‌ಸೈಟ್‌ನ ಮುಖಪುಟದಲ್ಲಿ, ಸಾರ್ವಜನಿಕರ ಅಭಿಪ್ರಾಯ, ಸಲಹೆ ದಾಖಲಿಸಲು, 'ಡೂ' ಹಾಗೂ 'ಡಿಸ್ಕಸ್‌' ಎಂಬ ಎರಡು ವಿಭಾಗಗಳನ್ನು ನೀಡಲಾಗಿದೆ. 'ಡೂ' ವಿಭಾಗದಲ್ಲಿ, ಯೋಜನೆಗಳ ಬಗ್ಗೆ ಜನರು ತಮ್ಮ ಅನಿಸಿಕೆಗಳನ್ನು ನೀಡಬಹುದು. 'ಡಿಸ್ಕಸ್‌'ನಲ್ಲಿ ತಮ್ಮ ವಿಚಾರಧಾರೆಗಳನ್ನು ಉಲ್ಲೇಖಿಸಿ, ಚರ್ಚೆಯಲ್ಲಿ ಭಾಗವಹಿಸಬಹುದು.

English summary
Prime Minister Narendra Modi on Saturday launched a website MyGov that aims to help citizens contribute in governance by giving their opinions and views on important issues like clean Ganga or skill development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X