ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಫ್‌ ಬಗ್ಗೆ ಎಲ್ಲಾ ಮಾಹಿತಿ ಆನ್‌ಲೈನ್‌ನಲ್ಲಿ ಸಿಗುತ್ತೆ

|
Google Oneindia Kannada News

ನವದೆಹಲಿ, ಅ.6 : ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಜಮೆಯಾಗಿದೆ, ನೀವು ಕೆಲಸ ಮಾಡುತ್ತಿರುವ ಕಂಪನಿ ನಿಮ್ಮ ಪಿಎಫ್ ಖಾತೆಗೆ ಎಷ್ಟು ಹಣ ಸಂದಾಯ ಮಾಡುತ್ತಿದೆ ಮುಂತಾದ ಮಾಹಿತಿಗಳನ್ನು ಇನ್ನುಮುಂದೆ ನೀವು ಆನ್‌ಲೈನ್‌ನಲ್ಲಿಯೂ ಪಡೆಯಬಹುದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಭವಿಷ್ಯ ನಿಧಿ ಮಂಡಳಿ ಹೊಸ ವೆಬ್‌ಸೈಟ್ ಆರಂಭಿಸಲಿದ್ದು ಎಲ್ಲಾ ಮಾಹಿತಿ ಅಲ್ಲಿ ಲಭ್ಯವಾಗಲಿದೆ.

ಭವಿಷ್ಯ ನಿಧಿ ಗ್ರಾಹಕರ ಅನುಕೂಲಕ್ಕಾಗಿ ಭವಿಷ್ಯ ನಿಧಿ ಮಂಡಳಿ ಹೊಸ ವೆಬ್‌ಸೈಟ್ ಆರಂಭಿಸಲಿದ್ದು ಅ.16ರಂದು ಈ ವೆಬ್‌ಸೈಟ್‌ ಲೋಕಾರ್ಪಣೆಯಾಗಲಿದೆ. ಇದರಿಂದ ನೀವು ಪಿಎಫ್ ಕಚೇರಿಗೆ ಅಲೆಯುವ ಕೆಲಸ ತಪ್ಪಲಿದ್ದು, ಕುಳಿತ ಸ್ಥಳದಿಂದಲೇ ಪಿಎಫ್‌ ಬಗ್ಗೆ ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Money

ಕೆಲಸ ಬದಲಾವಣೆ ಮಾಡಿದಾಗ ಹೊಸ ಕಂಪನಿಗೆ ಪಿಎಫ್ ಖಾತೆ ವರ್ಗಾವಣೆ ಮಾಡಿಕೊಳ್ಳಲು ಪರದಾಡಬೇಕಾಗಿಲ್ಲ. ಆನ್‌ಲೈನ್ ಮೂಲಕವೇ ಖಾತೆ ಬದಲಾವಣೆ ಮಾಡುವ ಸೌಲಭ್ಯವನ್ನು ಈ ವೆಬ್‌ಸೈಟ್‌ ಮೂಲಕ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 4 ಕೋಟಿ ಭವಿಷ್ಯ ನಿಧಿ ಗ್ರಾಹಕರ ಅನುಕೂಲಕ್ಕಾಗಿ ಈ ವೆಬ್‌ಸೈಟ್ ಆರಂಭಿಸಲಾಗುತ್ತಿದೆ.[ಆನ್ ಲೈನ್ ನಲ್ಲಿ ಪಿಎಫ್ ಮಾಹಿತಿ ಪಡೆಯುವುದು ಹೇಗೆ?]

ನಿಮ್ಮ ಪಿಎಫ್‌ ಖಾತೆಯಲ್ಲಿ ಎಷ್ಟು ಹಣ ಜಮಾವಣೆಯಾಗಿದೆ, ನಿಮ್ಮ ಕಂಪನಿ ಕಾಲಕಾಲಕ್ಕೆ ಎಷ್ಟು ಹಣ ಸಂದಾಯ ಮಾಡುತ್ತಿದೆ ಮುಂತಾದ ಮಾಹಿತಿಗಳನ್ನು ನೀವು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಸದಸ್ಯರ ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದು. [PF ಹಿಂಪಾವತಿ ಇನ್ನು ಆನ್ ಲೈನ್ ಮೂಲಕ!]

English summary
Subscribers of the Employees Provident Fund Organization (EPFO) would be able to access their PF accounts online. The Universal Account Number (UAN) members portal will help employers. The portal is likely to be launched on October 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X