ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಯತ್ರಿ ಮಂತ್ರದೊಂದಿಗೆ ಸಂಸತ್ ಕಲಾಪ ಆರಂಭವಾಲಿ

|
Google Oneindia Kannada News

ಬೆಂಗಳೂರು, ಜು 28: ಗಾಯತ್ರಿ ಮಂತ್ರದೊಂದಿಗೆ ಸಂಸತ್ತು ಮತ್ತು ವಿಧಾನಸಭೆಯ ಕಲಾಪ ಆರಂಭಿಸಿದರೆ ದೇಶ ಅಭಿವೃದ್ದಿ ಪಥದತ್ತ ಸಾಗುತ್ತದೆ. ಹಾಗಾಗಿ, ಗಾಯತ್ರಿ ಮಂತ್ರದೊಂದಿಗೆ ಕಲಾಪ ಆರಂಭಿಸುವುದಕ್ಕೆ ನನ್ನ ಸಹಮತವಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಗಾಯತ್ರಿ ಮಂತ್ರದೊಂದಿಗೆ ಸಂಸತ್ ಕಲಾಪ ಆರಂಭವಾಗಲಿ ಎಂದು ಸಲಹೆ ನೀಡಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. (ಬಿಪಶಾ ಬಸು ಜೀವ ಉಳಿಸಿದ ಗಾಯತ್ರಿ ಮಂತ್ರ)

ನಗರದಲ್ಲಿ ಭಾನುವಾರ (ಜು 27) ದಕ್ಷಿಣಕನ್ನಡ ಕೂಟ ಬ್ರಾಹ್ಮಣರ ಒಕ್ಕೂಟದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅನಂತ್, ಗಾಯತ್ರಿ ಮಂತ್ರದೊಂದಿಗೆ ಕಲಾಪ ಆರಂಭಿಸಿದರೆ ದೇಶ ಉನ್ನತಿಯತ್ತ ಸಾಗುತ್ತದೆ ಎಂದು ನಂಬಿದವರಲ್ಲಿ ನಾನೂ ಒಬ್ಬ ಎಂದು ಸಭೆಯಲ್ಲಿ ತಿಳಿಸಿದ್ದಾರೆ. (ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ)

ವಿಧಾನಸಭೆ ಮತ್ತು ಲೋಕಸಭೆಯ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಶ್ರದ್ದಾಂಜಲಿ ಅರ್ಪಿಸಿ ಕಲಾಪ ಆರಂಭಿಸಲಾಗುತ್ತದೆ. ಇದರಿಂದ ಮೊದಲ ದಿನವೇ ಸದನದಲ್ಲಿ ಸೂತಕದ ಛಾಯೆ ಆವರಿಸುತ್ತದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.

ಬ್ರಾಹ್ಮಣರಿಗೂ ಮೀಸಲು. ಮುಂದೆ ಓದಿ..

ವಿದೇಶದಲ್ಲಿ ಆಯಾಯ ಧರ್ಮದ ಮೂಲಕ ಕಲಾಪ ಆರಂಭ

ವಿದೇಶದಲ್ಲಿ ಆಯಾಯ ಧರ್ಮದ ಮೂಲಕ ಕಲಾಪ ಆರಂಭ

ಇಸ್ಲಾಂ ಮತ್ತು ಕ್ರೈಸ್ತಧರ್ಮದ ರಾಷ್ಟ್ರಗಳಲ್ಲಿ ಖುರಾನ್ ಅಥವಾ ಬೈಬಲ್ ಪಠಿಸಿ ಕಲಾಪವನ್ನು ಆರಂಭಿಸಲಾಗುತ್ತದೆ. ನಮ್ಮದು ಹಿಂದೂ ರಾಷ್ಟ್ರವಾದರೂ ಜಾತ್ಯಾತೀತ ರಾಷ್ಟ್ರ. ಅಟಲ್ ಅಂದು ಸಲ್ಲಿಸಿದ್ದ ಪ್ರಸ್ತಾವನೆಗೆ ನನ್ನ ಬೆಂಬಲವಿದೆ - ಅನಂತ್ ಕುಮಾರ್

ದಿನೇಶ್ ಗುಂಡೂರಾವ್ ಹೇಳಿದ್ದು

ದಿನೇಶ್ ಗುಂಡೂರಾವ್ ಹೇಳಿದ್ದು

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ರಾಜ್ಯ ಸಚಿವ ದಿನೇಶ್, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಮತ್ತು ವೈಶ್ಯರಿಗೂ ಮೀಸಲಾತಿ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಯುವ ಪೀಳಿಗೆ ನಮ್ಮ ಸಂಸ್ಕೃತಿ ಅನುಸರಿಸುತ್ತಿಲ್ಲ

ಯುವ ಪೀಳಿಗೆ ನಮ್ಮ ಸಂಸ್ಕೃತಿ ಅನುಸರಿಸುತ್ತಿಲ್ಲ

ದೇಶದ ಯುವ ಪೀಳಿಗೆ ನಮ್ಮ ಆಚಾರ, ವಿಚಾರ ಮತ್ತು ಸಂಸ್ಕೃತಿ ಅನುಸರಿಸುತ್ತಿಲ್ಲ. ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ - ಅನಂತ್ ಕುಮಾರ್

ಸಂಸದರ ನಿಧಿಯಿಂದ ಅನುದಾನ

ಸಂಸದರ ನಿಧಿಯಿಂದ ಅನುದಾನ

ಡಾ.ಶಿವರಾಮ ಕಾರಂತ ಸಭಾಂಗಣ ನಿರ್ಮಿಸಲು ಸಂಸದರ ನಿಧಿಯಿಂದ 25 ಲಕ್ಷ ಅನುದಾನ ನೀಡುವುದಾಗಿ ಸಚಿವ ಅನಂತ್ ಕುಮಾರ್ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಜೈನ ಸಮುದಾಯದವರಿಗೆ ಕಲ್ಪಿಸಲಾಗಿದೆ

ಜೈನ ಸಮುದಾಯದವರಿಗೆ ಕಲ್ಪಿಸಲಾಗಿದೆ

ಮೀಸಲಾತಿ ಸೌಲಭ್ಯದಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು ವಂಚಿತರಾಗಿದ್ದಾರೆ. ಜೈನ ಸಮುದಾಯದವರಿಗೆ ಮೀಸಲಾತಿ ಸೌಲಭ್ಯವನ್ನು ಈಗಾಗಲೇ ಕಲ್ಪಿಸಲಾಗಿದೆ. ಬ್ರಾಹ್ಮಣ ಮತ್ತು ವೈಶ್ಯ ಸಮುದಾಯವನ್ನೂ ಮೀಸಲಾತಿ ಸೌಲಭ್ಯದಡಿ ತರಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

English summary
Parliament proceedings should start with Gayathri Mantra, Union Minister Ananth Kumar suggestion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X