ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ದೆಸೆಯಿಂದ ಮೀನುಗಾರರಿಗೆ ಬಿಡುಗಡೆ ಭಾಗ್ಯ

By Mahesh
|
Google Oneindia Kannada News

ಇಸ್ಲಾಮಾಬಾದ್/ ಕೊಲಂಬೋ, ಮೇ.25: ಪಾಕಿಸ್ತಾನದ ಕರಾವಳಿಯಲ್ಲಿ ಬಂಧನಕ್ಕೊಳಗಾಗಿದ್ದ 59 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಶ್ರೀಲಂಕಾ ಸರ್ಕಾರ ಕೂಡಾ ತನ್ನ ಸೆರೆಯಲ್ಲಿದ್ದ ಭಾರತೀಯ ಮೀನುಗಾರರ ಬಿಡುಗಡೆಗೆ ಆದೇಶಿಸಿದೆ. ಮೋಡಿ ಅವರ ಪ್ರಮಾಣ ವಚನ ಸ್ವೀಕರ ಸಮಾರಂಭ ಈ ಎರಡೂ ದೇಶದ ಪ್ರಧಾನಿಗಳಿಗೆ ಆಹ್ವಾನ ಸಿಕ್ಕಿದೆ.

ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನಲೆಯಲ್ಲಿ ಸಮಾರಂಭಕ್ಕೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ 59 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ. ಭಾರತ ಹಾಗೂ ಪಾಕಿಸ್ತಾನದ ವಾಘಾ ಗಡಿಯಲ್ಲಿ ಭಾರತೀಯ ಮೀನುಗಾರರ ಕುಟುಂಬದ ಸಂಭ್ರಮ ಮುಗಿಲು ಮುಟ್ಟಿದೆ.

Pakistan, Sri Lanka free Indian fishermen to mark Modi's swearing-in

ಪಾಕಿಸ್ತಾನ ಕರಾವಳಿ ತೀರದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು. ಬಂಹಿತರಲ್ಲಿ ಬಹುತೇಕರು ಗುಜರಾತಿಗಳಾಗಿದ್ದಾರೆ. ಇತ್ತ ಶ್ರೀಲಂಕಾದಲ್ಲಿ ಬಂಧಿತರಾಗಿದ್ದ ತಮಿಳುನಾಡು ಮೂಲಕ ಮೀನುಗಾರರಿಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಈ ಎರಡು ದೇಶಗಳು ಭಾರತದೊಂದಿಗೆ ಬಾಂಧವ್ಯ ವೃದ್ಧಿ ದೃಷ್ಟಿಯಿಂದ ಮೀನುಗಾರರನ್ನು ಬಿಡುಗಡೆ ಮಾಡುತ್ತಿರುವುದಾಗಿ ಪ್ರಕಟಿಸಿವೆ.

ಪಾಕಿಸ್ತಾನ ಒಟ್ಟಾರೆ 152 ಭಾರತೀಯ ಮೂಲದ ಬೆಸ್ತರನ್ನು ಬಿಡುಗಡೆ ಮಾಡಲಿದೆ. ಗುಜರಾತಿನಿಂದ ಒಂದು ತಂಡ ಈಗಾಗಲೇ ವಾಘಾ ಗಡಿಯಲ್ಲಿ ಬೀಡು ಬಿಟ್ಟಿದ್ದು, ಮೀನುಗಾರರನ್ನು ಸ್ವಾಗತಿಸಲು ಸಿದ್ಧವಾಗಿದೆ. ಗುಜರಾತ್ ಅಲ್ಲದೆ ಡಮನ್ ಮತ್ತು ಡಿಯು, ದಾದ್ರಾ ಮತ್ತು ನಗರ್ ಹವೇಲಿ ಮೂಲದ ಮೀನುಗಾರರು ಬಂಧಿತರಾಗಿದ್ದರು. ನವಾಜ್ ಷರೀಫ್ ಹಾಗೂ ಮೋದಿ ಅವರ ನಡೆಯನ್ನು ಪಾಕಿಸ್ತಾನದ ಸರ್ಕಾರೇತರ ಸಂಸ್ಥೆ ಪಾಕಿಸ್ತಾನಿ ಫಿಶ್ ಫೋರಮ್ ಸ್ವಾಗತಿಸಿದೆ. ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಇದು ಮೊದಲ ಮೆಟ್ಟಿಲು ಎಂದು ಸಂಸ್ಥೆಯ ಮಹಮ್ಮದ್ ಆಲಿ ಶಾ ಪಿಟಿಐಗೆ ಹೇಳಿದ್ದಾರೆ.

English summary
A day ahead of Prime Minister-designate Narendra Modi's swearing-in ceremony, both Sri Lanka and Pakistan have ordered the release of Indian fishermen in their custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X