ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

60 ಲಕ್ಷ ನೋಟಾ, ನೀಲಗಿರಿಯಲ್ಲೇ ಅಧಿಕ

By Mahesh
|
Google Oneindia Kannada News

ಬೆಂಗಳೂರು, ಮೇ.18: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಚಯಿಸಲಾಗಿದ್ದ ನೋಟಾಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಸುಮಾರು 60 ಲಕ್ಷ ಮತದಾರರು 'ನೋಟಾ' (ಈ ಮೇಲಿನ ಯಾವುದೇ ಅಭ್ಯರ್ಥಿಗಳಲ್ಲ) ಆಯ್ಕೆ ಮಾಡಿಕೊಂಡಿದ್ದಾರೆ. ಇದು 21 ರಾಜಕೀಯ ಪಕ್ಷಗಳು ಗಳಿಸಿರುವ ಮತಕ್ಕಿಂತ ಹೆಚ್ಚು ಎಂಬುದು ಗಮನಾರ್ಹ ಸಂಗತಿಯಾಗಿದೆ. ತಮಿಳುನಾಡಿನ ನೀಲಗಿರಿಯಲ್ಲಿ ಅತ್ಯಧಿಕ ನೋಟಾ ಮತಗಳು ದಾಖಲಾಗಿವೆ.

ಮಾಜಿ ಕೇಂದ್ರ ಸಚಿವ ಎ.ರಾಜಾ ಸ್ಪರ್ಧಿಸಿದ್ದ ನೀಲಗಿರಿ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿ ನೋಟಾ ಬಂದಿದೆ. 46,559 ಮತಗಳು ನೋಟಾಗೆ ಬಿದ್ದಿದೆ. ಎಐಎಡಿಎಂಕೆಯ ಗೋಪಾಲಕೃಷ್ಣನ್ 4 ಲಕ್ಷ ಮತಗಳು, ಡಿಎಂಕೆಯ ರಾಜಾ 3.5 ಲಕ್ಷ ಮತಗಳನ್ನು ಪಡೆದು ಮೊದಲೆರಡು ಸ್ಥಾನ ಗಳಿಸಿದ್ದಾರೆ. ನೋಟಾ ಮೂರನೇ ಸ್ಥಾನ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಗಾಂಧಿಗೆ 37,702 ಮತಗಳು ಬಿದ್ದಿವೆ.

Over 60 lakh NOTA votes polled

'ನೋಟಾ'ವನ್ನು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಳಸಲಾಗಿತ್ತು. 59,97,054 ಮತದಾರರು ಇವಿಎಂ ಮತಯಂತ್ರದಲ್ಲಿ 'ನೋಟಾ' ಬಟನ್ ಒತ್ತಿದ್ದಾರೆ. 543 ಲೋಕಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಕ್ಕೆ ಹೋಲಿಸಿದರೆ ಇದು ಶೇಕಡ 1.1ರಷ್ಟಾಗುತ್ತದೆ. [ಏನಿದು ನಕಾರಾತ್ಮಕ ಮತದಾನ(NOTA)?]

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಯು, ಸಿಪಿಐ, ಜೆಡಿಎಸ್ ಮತತು ಎಸ್‌ಎಡಿ ಸೇರಿದಂತೆ 21 ರಾಜಕೀಯ ಪಕ್ಷಗಳು ಪಡೆದಿರುವ ಮತಗಳಿಗೆ ಹೋಲಿಸಿದರೆ 'ನೋಟಾ' ಅಡಿಯಲ್ಲಿ ಅಧಿಕ ಮತಗಳು ದಾಖಲಾಗಿವೆ.

ಉಳಿದಂತೆ ಪಾಂಡಿಚೇರಿಯಲ್ಲಿ ಅತ್ಯಧಿಕ ಮತಗಳು ಬಿದ್ದಿವೆ. 22,268 ಮತಗಳು (ಶೇ.3) ಬಿದ್ದಿವೆ. ಇದರ ನಂತರ ಮೇಘಾಲಯ (ಶೇ.2.8), ಗುಜರಾತ್ (ಶೇ.1.8), ಛತ್ತೀಸ್‌ಗಡ (ಶೇ.1.8), ದಾದ್ರಾ-ನಗರ್‌ಹವೇಲಿ (ಶೇ.1.8) ಇವೆ. ಉಳಿದಂತೆ ಬಿಹಾರ, ಒಡಿಶಾ, ಮಿಜೋರಾಂ, ಜಾರ್ಖಂಡ್, ದಮನ್ ಮತ್ತು ದಿಯುಗಳಲ್ಲೂ ಸಾಕಷ್ಟು 'ನೋಟಾ' ಮತಗಳು ದಾಖಲಾಗಿವೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ನ ಮಧುಸೂದನ್ ಮಿಸ್ತ್ರಿ ಸ್ಪರ್ಧಿಸಿದ್ದ ಗುಜರಾತ್‌ನ ವಡೋದರ ಕ್ಷೇತ್ರದಲ್ಲಿ 18,053 'ನೋಟಾ' ಮತಗಳು ಬಿದ್ದಿವೆ ಎಂಬುದು ಗಮನಾರ್ಹ ವಿಚಾರವಾಗಿದೆ. ಕರ್ನಾಟಕದ ಬಳ್ಳಾರಿಯಲ್ಲಿ ಬಿಜೆಪಿ .ಶ್ರೀರಾಮುಲು ಪ್ರಥಮ, ಕಾಂಗ್ರೆಸ್ಸಿನ ಹನುಮಂತಪ್ಪ ಎರಡನೇ ಸ್ಥಾನ ಪಡೆದರೆ ನೋಟಾ(11320 ಮತಗಳು) ನಾಲ್ಕನೇ ಸ್ಥಾನ ಪಡೆದಿದೆ. ಜೆಡಿಎಸ್ ನ ಅಭ್ಯರ್ಥಿ ರವಿ ನಾಯಕಗೆ 12613 ಮತಗಳು ಬಂದಿವೆ.ಹಲವೆಡೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಪಡೆದ ಮತಗಳಿಗೆ ನೋಟಾ ಪೈಪೋಟಿ ನೀಡಿದೆ.(ಪಿಟಿಐ)

English summary
Over 60 lakh None Of The Above (NOTA) votes were cast in the 16th Lok Sabha elections, the first time that this option was given, Election Commission data shows. This accounts for 1.1 per cent of all the votes cast. The disproportionately high use of NOTA in reserved constituencies continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X