ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್‌ ಉಗ್ರರ ಜೊತೆ ಬೆಂಗಳೂರು ಯುವಕ!

By Ashwath
|
Google Oneindia Kannada News

ನವದೆಹಲಿ, ಜು. 14: ಇರಾಕ್‌ನಲ್ಲಿ ಭಾರೀ ಹೋರಾಟ ನಡೆಸುತ್ತಿರುವ ಐಎಸ್‌‌ಐಎಸ್‌(ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಅಂಡ್‌ ಸಿರಿಯಾ) ಉಗ್ರರ ಗುಂಪಿನಲ್ಲಿ ಬೆಂಗಳೂರು ಮೂಲದ ಯುವಕ ಸೇರಿದಂತೆ 17 ಮಂದಿ ಭಾರತೀಯರು ಸಕ್ರಿಯವಾಗಿ ಭಾಗಿಯಾಗಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವ ಬಯಕೆ ಹೊಂದಿರುವ ಐಎಸ್‌‌ಐಎಸ್‌ ಉಗ್ರರ ಮತೀಯವಾದಕ್ಕೆ ಬಲಿಬಿದ್ದ ದಕ್ಷಿಣ ಭಾರತದ 18 ಮಂದಿ ಯುವಕರು, ಧರ್ಮಯುದ್ಧಕ್ಕಾಗಿ ಇರಾಕ್‌ನಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಕೇಂದ್ರ ಗುಪ್ತಪರ ಪಡೆ ಮೂಲಗಳು ತಿಳಿಸಿವೆ.[ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ]

ಪುಣೆಯಲ್ಲಿ ಬಾಂಬ್ ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಠಾಣೆಯ ಸಮೀಪದ ಇಬ್ಬರು ಯುವಕರು ನಾಪತ್ತೆಯಾಗಿರುವ ವಿಚಾರ ಕಂಡು ಬಂದಿದೆ. ನಾಪತ್ತೆಯಾದ ಯುವಕರ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಈ ಇಬ್ಬರು ಯುವಕರು 16 ಭಾರತೀಯರೊಂದಿಗೆ ಇರಾಕ್‌ ಉಗ್ರರ ಜೊತೆ ಕೈಜೋಡಿಸಿರುವ ಅಂಶ ಬೆಳಕಿಗೆ ಬಂದಿದೆ.[ವಿವಾದ ಸೃಷ್ಟಿಸಿರುವ ಪ್ರತಾಪ್, ಉಗ್ರ ಹಫೀಜ್ ಭೇಟಿ]

iraq

ಐಎಸ್‌‌ಐಎಸ್‌ ಗುಂಪು ಸೇರಿರುವ ಯುವಕರಲ್ಲಿ ಬಹುತೇಕ ಜನ, ಕರ್ನಾಟಕ ಮತ್ತು ತಮಿಳುನಾಡಿನ ಗ್ರಾಮೀಣ ಭಾಗದ ನಿವಾಸಿಗಳಾಗಿದ್ದು, ಈ ಪೈಕಿ ಬೆಂಗಳೂರು ಮೂಲದ ವ್ಯಕ್ತಿಯೂ ಸೇರಿದ್ದಾನೆ ಎಂದು ಮೂಲಗಳು ತಿಳಿಸಿದೆ.

ಆನ್‌ಲೈನ್‌ನಲ್ಲಿ ಲಭ್ಯವಿರುವ ವಿಡಿಯೋಗಳಿಂದ 18 ಯುವಕರು ಪ್ರಭಾವಿತರಾಗಿ ಉಗ್ರ ಸಂಘಟನೆಗೆ ಸೇರಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇಷ್ಟು ಜನ ಉಗ್ರ ಸಂಘಟನೆಗೆ ಸೇರಿದ್ದರೂ ದುಬೈ ಸೇರಿದಂತೆ ಇತರ ಗಲ್ಫ್‌ ದೇಶಗಳಲ್ಲಿ ಉದ್ಯೋಗ ಮಾಡುತ್ತಿರುವ ಮತ್ತಷ್ಟು ಯುವಕರು ಉಗ್ರ ಸಂಘಟನೆಯ ಜೊತೆ ಕೈ ಜೋಡಿಸಿರಬಹುದು ಎಂದು ಶಂಕೆಯನ್ನುಕೇಂದ್ರ ಗುಪ್ತಚರ ಪಡೆ ವ್ಯಕ್ತಪಡಿಸಿದೆ.

ಈ 18 ಯುವಕರು ಯಾವುದೇ ಗುಂಪಿಗೆ ಸೇರಿಲ್ಲ. ಇವರ ಪೈಕಿ ಪೈಕಿ 6 ಜನ, ಉಗ್ರ ನಾಯಕರ ವರ್ತ‌ನೆಗೆ ಬೇಸತ್ತು ಇರಾಕ್‌ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.

English summary
As investigations into Thursday's Pune blast progress, agencies are worried about two youths from Thane (near Mumbai) who are reported to have left for Iraq to fight along ISIS about a year ago, Indian media quoting officials reported on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X