ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಶಾಕ್! ಡೀಸೆಲ್ ಬೆಲೆ ಏರಿಕೆ

By Mahesh
|
Google Oneindia Kannada News

OMCs increase diesel prices by 50 paise
ನವದೆಹಲಿ, ಡಿ.1: ನಿರೀಕ್ಷೆಯಂತೆ ಡೀಸೆಲ್ ಬೆಲೆ ಏರಿಕೆಯಾಗಿದೆ. ತೈಲ ಮಾರುಕಟ್ಟೆ ಸಂಸ್ಥೆಗಳು ಪ್ರತಿ ಲೀಟರ್ ಡೀಸೆಲ್ ಬೆಲೆ 50 ಪೈಸೆ ಹೆಚ್ಚು ಮಾಡಿದ್ದಾರೆ. ಪರಿಷ್ಕೃತ ದರ ಪಟ್ಟಿ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಪ್ರತಿ ತಿಂಗಳು ಡೀಸೆಲ್ ದರ ಪರಿಷ್ಕರಣೆಗೆ ಒಳಪಡಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್‌ ಬೆಲೆಯ ತಂಟೆಗೆ ಹೋಗಿಲ್ಲ. ಆದರೆ, ಜನವರಿ 17, 2013ರ ಸರ್ಕಾರ ಆದೇಶದ ಅನ್ವಯ ಡೀಸೆಲ್ ದರ ಏರಿಕೆ ಮಾಡಲಾಗಿದೆ.

ಕಳೆದ ತಿಂಗಳ ಕೊನೆಯಲ್ಲೂ ಡೀಸೆಲ್ ಬೆಲೆಯನ್ನು ಲೀ.50 ಪೈಸೆ ಹೆಚ್ಚಿಸುವ ಮೂಲಕ ಜನರಿಗೆ ಸಾರ್ವಜನಿಕರಿಗೆ ಹೊರೆ ಉಂಟುಮಾಡಲಾಗಿತ್ತು. ಕಳೆದ 6 ತಿಂಗಳಿಂದ ಅಂದರೆ, ಮೇ 1ರ ಬಳಿಕ ಪೆಟ್ರೋಲ್‌ ಸುಮಾರು 15 ರೂ. ಏರಿಕೆಯಾಗಿತ್ತು.

ನವದೆಹಲಿಯಲ್ಲಿ ಪ್ರತಿ ಲೀಟರ್ ಗೆ ಡೀಸೆಲ್ 53.67 ರು ನಷ್ಟಿದ್ದರೆ, ಮುಂಬೈನಲ್ಲಿ ಇದೇ ದರ 60.7 ರು ನಷ್ಟಾಗುತ್ತದೆ. ಪ್ರತಿ ರಾಜ್ಯದ ಸ್ಥಳೀಯ ತೆರಿಗೆ ಸೇರಿಸಿದರೆ ಬೆಲೆ ಇನ್ನಷ್ಟು ಏರಿಕೆ ಕಾಣುತ್ತದೆ.

English summary
Oil marketing companies (OMCs) have increased the price of diesel by 50 paise a litre with effect from the midnight of Saturday(Nov.30).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X