ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ

By Mahesh
|
Google Oneindia Kannada News

ನವದೆಹಲಿ, ಜು.1: ಇರಾಕಿನ ಆಂತರಿಕ ಸಂಘರ್ಷದ ಬಿಸಿ ಭಾರತಕ್ಕೂ ತಟ್ಟಿದೆ. ಸಬ್ಸಿಡಿಯೇತರ ಎಲ್ಪಿಜಿ ಸಿಲಿಂಡರಿನ ಬೆಲೆಯನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. ನೂತನ ದರ ಪಟ್ಟಿಯಂತೆ ಪ್ರತಿ ಸಿಲಿಂಡರ್ ಗೆ 16.50 ರು ನಂತೆ ಏರಿಕೆ ಮಾಡಲಾಗಿದೆ.

ವಾರ್ಷಿಕ 12 ಸಿಲಿಂಡರುಗಳನ್ನು ಬಳಸುವ ಪ್ರತಿ 14.2 ಕೆಜಿ ತೂಗುವ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಕಳೆದ ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಸಿಲಿಂಡರ್ ಬೆಲೆ 906 ರು ನಿಂದ ಬೆಲೆ 922.50 ನಷ್ಟಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪ್ರಕಟಿಸಿದೆ.

ಕಳೆದ ತಿಂಗಳಷ್ಟೇ ಸಬ್ಸಿಡಿಯೇತರ ಸಿಲಿಂಡರಿನ ಬೆಲೆಯನ್ನು 23.50ರೂ. ನಷ್ಟು ಕಡಿಮೆ ಮಾಡಿದೆ. ದಿಲ್ಲಿಯಲ್ಲಿ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರಿನ ಬೆಲೆ ಈ ಹಿಂದೆ 928.50 ರೂ. ಇತ್ತು. ಅದೀಗ 905 ರೂ. ಗೆ ಲಭ್ಯವಾಗಲಿದೆ. ಅದೇ ವಾರ್ಷಿಕ 12 ಸಿಲಿಂಡರುಗಳ ಸಬ್ಸಿಡಿ ಗ್ಯಾಸಿನ ಬೆಲೆ ಸಿಲಿಂಡರಿಗೆ 414 ರೂ. ಇದೆ.

Non-subsidised LPG price hiked by ₹16.50 a cylinder; ATF by 0.6%

ಕಳೆದ ಜನವರಿಯಲ್ಲಿ ಐಒಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆಯಿಂದಾಗಿ ಸುಮಾರು 762.50 ಪ್ರತಿ ಸಿಲಿಂಡರ್ ಗೆ ಕಳೆದುಕೊಂಡಿವೆ.

ಇದರ ಜತೆಗೆ ವಿಮಾನ ಇಂಧನ(aviation turbine fuel (ATF))ದರದಲ್ಲೂ ಏರಿಕೆ ಮಾಡಲಾಗಿದ್ದು, ಎಟಿಎಫ್ ದರದಲ್ಲಿ ಶೇಕಡಾ 0.50 ರಷ್ಟು ಏರಿಕೆಯಾಗಿದೆ. ಸೋಮವಾರದಂದು ಪೆಟ್ರೋಲ್ ಬೆಲೆಯನ್ನು 1 ರೂಪಾಯಿ 69 ಪೈಸೆ ಹೆಚ್ಚಿಸಲಾಗಿತ್ತು. ಡೀಸೆಲ್ ಬೆಲೆಯಲ್ಲಿ 50 ಪೈಸೆಗಳ ಹೆಚ್ಚಳ ಮಾಡಲಾಗಿತ್ತು. ಇವತ್ತು ಅಡುಗೆ ಅನಿಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.(ಪಿಟಿಐ)

English summary
Price of non-subsidised cooking gas (LPG) was today hiked by ₹16.50 per cylinder and that of jet fuel by over half-a-per cent after international oil prices surged due to the ongoing Iraq crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X