ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕಿನ ದಾಖಲೆ ಹಂಚಿಕೊಂಡಿಲ್ಲ: ಜೇಟ್ಲಿ

By Mahesh
|
Google Oneindia Kannada News

ನವದೆಹಲಿ, ಜು.9: 'ತನ್ನ ದೇಶದ ಬ್ಯಾಂಕ್ ಗಳಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ವಿವರ ನೀಡಲು ಸ್ವಿಟ್ಜರ್ಲೆಂಡ್ ಸರ್ಕಾರ ಒಪ್ಪಿಗೆ ಸೂಚಿಸಿದೆ' ಎಂಬ ಸುದ್ದಿಗೆ ತದ್ವಿರುದ್ಧವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ರಾಜ್ಯಸಭೆಯಲ್ಲಿ ಬುಧವಾರ ಹೇಳಿಕೆ ನೀಡಿದ್ದಾರೆ.

ಭಾರತ ಸರ್ಕಾರ ಕೋರಿಕೆ ಮೇರೆಗೆ ಸ್ವಿಸ್ ಸರ್ಕಾರ ತನ್ನ ದೇಶದಲ್ಲಿರುವ ಬ್ಯಾಂಕುಗಳಲ್ಲಿನ ಖಾತೆದಾರರ ವಿವರ ಹಂಚಿಕೊಳ್ಳುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿಲ್ಲ.

ಸ್ವಿಸ್ ಬ್ಯಾಂಕ್​ನಲ್ಲಿ ಭಾರತೀಯರ ಅಕೌಂಟೇ ಇಲ್ಲ. ಕಪ್ಪು ಹಣದ ಬಗ್ಗೆ ಮಾಹಿತಿ ಕೇಳಿ, ನಮ್ಮ ಸರ್ಕಾರ ಸ್ವಿಸ್​ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿತ್ತು. ಈ ಬಗ್ಗೆ ಜುಲೈ 4, 2014 ರಂದು ಸ್ವಿಸ್ ಬ್ಯಾಂಕ್​ನಿಂದ ಉತ್ತರ ಕೂಡ ಬಂದಿದ್ದು, ಸ್ವಿಸ್ ಬ್ಯಾಂಕ್​ನಲ್ಲಿ ಸ್ವಂತ ಹೆಸರಿನಲ್ಲಿ ಹಣ ಹೂಡಿಕೆ ಮಾಡಿರುವ ಭಾರತದ ನಿವಾಸಿಗಳು ಯಾರೂ ಇಲ್ಲ ಎಂದು ತಿಳಿದು ಬಂದಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅರುಣ್ ಜೇಟ್ಲಿ ಹೇಳಿದ್ದಾರೆ.

No list of Indians holding money in Swiss banks: Finance Minister in Rajya Sabha

ಸ್ವಿಸ್ ಬ್ಯಾಂಕ್​ನಲ್ಲಿ ಭಾರತೀಯರ ಅಕೌಂಟೇ ಇಲ್ಲಎಂದು ಹೇಳಲಾಗುವುದಿಲ್ಲ.ಕಪ್ಪು ಹಣದ ಬಗ್ಗೆ ಮಾಹಿತಿ ಕೇಳಿ, ನಮ್ಮ ಸರ್ಕಾರ ಸ್ವಿಸ್​ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿತ್ತು. ಈ ಬಗ್ಗೆ ಜುಲೈ 4, 2014 ರಂದು ಸ್ವಿಸ್ ಬ್ಯಾಂಕ್​ನಿಂದ ಉತ್ತರ ಕೂಡ ಬಂದಿದ್ದು, ಸ್ವಿಸ್ ಬ್ಯಾಂಕ್​ನಲ್ಲಿ ಸ್ವಂತ ಹೆಸರಿನಲ್ಲಿ ಹಣ ಹೂಡಿಕೆ ಮಾಡಿರುವ ಭಾರತದ ನಿವಾಸಿಗಳು ಯಾರೂ ಇಲ್ಲ ಎಂದು ಹೇಳಿರುವುದಾಗಿ ಜೇಟ್ಲಿ ಹೇಳಿದ್ದಾರೆ.

ಆದರೆ, 2013 ರಲ್ಲಿ 14,100 ಕೋಟಿ ಭಾರತೀಯರ ಹಣ ಇರುವುದಾಗಿ ಸ್ವತಃ ಸ್ವಿಸ್ ಬ್ಯಾಂಕೇ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಸಿತ್ತು. ಆದರೆ, ಸ್ವಿಸ್ ಬ್ಯಾಂಕ್ ಈಗ ಯಾವುದೇ ಮಾಹಿತಿ ಹೊರಹಾಕಿಲ್ಲ ಎಂದಿದೆ.

ಕಪ್ಪುಹಣದ ವಾಪಸಾತಿಗಾಗಿ ಕಠಿಣ ಕ್ರಮ ಕೈಗೊಂಡಿದ್ದ ಎನ್ಡಿಎ ಸರ್ಕಾರ, ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರಚನೆ ಮಾಡಿತ್ತು. ಕಪ್ಪುಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರ ಎಸ್ಐಟಿ ರಚನೆ ಮಾಡಲಾಗಿತ್ತು. ವಿಶೇಷ ತನಿಖಾ ತಂಡದ ಸತತ ಪ್ರಯತ್ನದಿಂದಾಗಿ ಸ್ವಿಸ್ ಸರ್ಕಾರ ಕಪ್ಪುಹಣ ಹೊಂದಿರುವ ಭಾರತೀಯರ ವಿವರ ನೀಡಲು ಮುಂದಾಗಿದೆ ಎಂಬ ಸುದ್ದಿ ಕಳೆದ ತಿಂಗಳು ಸಿಕ್ಕಿತ್ತು. [ಇಲ್ಲಿ ಓದಿರುತ್ತೀರಿ]

ಸ್ವಿಸ್ ಬ್ಯಾಂಕ್ ಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಪ್ಪುಹಣ ಇರಿಸಿರುವವರ ಪಟ್ಟಿಯಲ್ಲಿ ಭಾರತ 58ನೇ ಸ್ಥಾನದಲ್ಲಿದ್ದು, ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಹೊಂದಿರುವ ಕಪ್ಪುಹಣದ ಪ್ರಮಾಣ 14 ಸಾವಿರ ಕೋಟಿ ರು,(2.03 ಬಿಲಿಯನ್ ಸ್ವಿಸ್ ಫ್ರಾಂಕ್)ಗಳಿಗೂ ಅಧಿಕ ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು.

ಆದರೆ, ಈಗ ರಾಜ್ಯಸಭೆಯಲ್ಲಿ ಶಾಂತರಾಮ್ ನಾಯ್ಕ್ ಅವರ ಪ್ರಶ್ನೆಗೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾರತ ಅನೇಕ ಬಾರಿ ಮನವಿ ಸಲ್ಲಿಸಿದೆ. ಕೆಲವು ವಿಷಯದಲ್ಲಿ ಸ್ವಿಸ್ ಸರ್ಕಾರ ಉತ್ತರ ನೀಡಿದ್ದರೂ ಬ್ಯಾಂಕ್ ಖಾತೆ ಹೊಂದಿರುವ ಭಾರತೀಯರ ವಿವರ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
India's efforts to elicit information on black money from Swiss authorities have hit a wall once again, with Switzerland saying that it has not compiled a list of Indian nationals holding assets in its banks. FInance Minister told Rajya Sabha today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X