ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಮ್ಮಪ್ಪನ ದರ್ಶನಕ್ಕೆ ನೂತನ ಸುಗಮ ವ್ಯವಸ್ಥೆ

By Srinath
|
Google Oneindia Kannada News

ತಿರುಪತಿ, ಮೇ 31- ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಜನ ದಿನೇ ದಿನೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದು, ಎಲ್ಲ ಭಕ್ತರಿಗೂ ಸುಗಮವಾಗಿ ದರ್ಶನ ಭಾಗ್ಯ ಕಲ್ಪಿಸಲು ಟಿಟಿಡಿ ಆಡಳಿತ ಮಂಡಳಿಯು ನೂತನ ವ್ಯವಸ್ಥೆ ಜಾರಿಗೆ ತಂದಿದೆ.

2-ಹಂತದ ವಿಶೇಷ ಏರ್ಪಾಟು:
ಲಕ್ಷಾಂತರ ಮಂದಿ ಭಕ್ತರಿಗೆ ಸುಗಮ ದರ್ಶನ ವ್ಯವಸ್ಥೆ ಕಲ್ಪಿಸಲು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ನಾನಾ ವ್ಯವಸ್ಥೆಗಳ ಬಗ್ಗೆ ಆಲೋಚಿಸಿ, ಕೊನೆಗೆ ಎರಡು ಹಂತದ ವಿಶೇಷ ಏರ್ಪಾಟು ಕಲ್ಪಿಸಲು ನಿರ್ಧರಿಸಿದೆ.

ಬೆಟ್ಟದ ಮೇಲಿನ ದೇವರನ್ನು ನೋಡಲು ಹರಸಾಹಸ ಪಡುವ ಭಕ್ತರು ದೇವರ ದರ್ಶನ ಪಡೆಯುವ ಹಂತದಲ್ಲಂತೂ ತಳ್ಳಾಟ ಜಾಸ್ತಿಯಾಗಿ ನೆಮ್ಮದಿಯಾಗಿ/ಸರಿಯಾಗಿ ದೇವರ ಮೂರ್ತಿಯನ್ನು ನೋಡಲೂ ಆಗದಂತಹ ಉಸಿರುಗಟ್ಟಿಸುವ ವಾತಾವರಣ ಇತ್ತೀಚೆಗೆ ಹೆಚ್ಚಾಗಿದೆ. ಇದರಿಂದ ಮುಕ್ತವಾಗಲು ಟಿಟಿಡಿ, ಬಹುಸ್ತರದ ದರ್ಶನ ಏರ್ಪಾಡು ಮಾಡಲು TTD ಕಾರ್ಯನಿರ್ವಹಕಾಧಿಕಾರಿ ಎಂಜಿ ಗೋಪಾಲ್ ನೂತನ ವ್ಯವಸ್ಥೆ ಬಗ್ಗೆ ಆಲೋಚಿಸಿದ್ದಾರೆ.

ಹೊಸ ವ್ಯವಸ್ಥೆಯ ಪ್ರಕಾರ ವೆಂಡಿ ವಾಕಿಲಿ ಬಳಿ (ಬೆಳ್ಳಿ ಬಾಗಿಲು ಬಳಿ) ಬಂದಾಗ 2 ಸಾಲುಗಳಲ್ಲಿ ಭಕ್ತರನ್ನು ಸರದಿಯಲ್ಲಿ ನಿಲ್ಲಿಸಲಾಗುವುದು. ಅಲ್ಲಿಂದ ಮುಂದಕ್ಕೆ, ಅನತಿ ದೂರದಲ್ಲಿರುವ (ಜಯ-ವಿಜಯ ದ್ವಾರದ ಬಳಿ) ಮಹಾಮೂರ್ತಿಯನ್ನು ನೋಡಲು 2 ಹಂತಗಳಲ್ಲಿ ಭಕ್ತರನ್ನು ಒಳಗೆ ಬಿಡಲಾಗುವುದು. ಇದಕ್ಕಾಗಿ ತುಸು ಎತ್ತರದಲ್ಲಿ, ಮರದಿಂದ ಮಾಡಿದ ವಿಶೇಷ ವೇದಿಕೆ (wooden ramp) ನಿರ್ಮಿಸಲಾಗುವುದು. ಅದರ ಮೇಲೆ ಒಂದು ಸಾಲಿನಲ್ಲಿರುವ ಭಕ್ತರನ್ನು ಬಿಟ್ಟು ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.

ಮತ್ತೊಂದು ಸಾಲಿನಲ್ಲಿರುವ ಭಕ್ತರನ್ನು ನೆಲದ ಮೇಲೆಯೇ ಮುಂದಕ್ಕೆ ಸಾಗಲು ಬಿಟ್ಟು, ದೇವರ ದರ್ಶನಕ್ಕೆ ದಾರಿ ಮಾಡಿಕೊಡಲಾಗುವುದು. ಆಡಳಿತ ಮಂಡಳಿಯು ಈ ನೂತನ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಭಾರಿ ಚಿಂತನೆ ನಡೆಸಿದೆ. ಆದರೆ ಹೊಸ ವ್ಯವಸ್ಥೆಯ ಸಾಧ್ಯಾಸಾಧ್ಯತೆ ಇನ್ನಷ್ಟೇ ಸಾಬೀತಾಗಬೇಕಿದೆ.

tirupati-temple-of-lord-venkateswara-ttd
English summary
New two-tier darshan system in Tirupati temple of Lord Venkateswara- TTD. According to the new application, devotees will be allowed in two lines for darshan from the silver gate (Vendi Vakili) into the sanctum sanctorum through the Bangaru Vakili. While one row of devotees will be allowed to walk on the high-rise wooden ramps specially designed to suit the purpose, the second row of devotees will be allowed to pass through the floor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X