ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಕಳ್ಳತನ ತಡೆಯಲು ಹೊಸ ಮಾದರಿಯ ಯಂತ್ರ

By Ashwath
|
Google Oneindia Kannada News

ಕೊಯಂಬತ್ತೂರು, ಜು.15: ಎಟಿಎಂ ಕಳ್ಳತನ ತಡೆಗಟ್ಟಲು ತಮಿಳುನಾಡಿನ ಕಂಪೆನಿಯೊಂದು ನವೀನ ತಂತ್ರಜ್ಞಾನ ಬಳಸಿ ನೂತನ ಎಟಿಎಂ ಯಂತ್ರವನ್ನು ಅಭಿವೃದ್ಧಿಪಡಿಸಿದೆ.

ನಗರದ ಸಿಂಟಾ ಸಿಸ್ಟಂ ಸಂಸ್ಥೆ ಹೊಸ ಎಟಿಎಂನ್ನು ಅಭಿವೃದ್ಧಿಪಡಿಸಿದ್ದು, ಕಳ್ಳರು ಹಣ ಕದಿಯಲು ಎಟಿಎಂ ಯಂತ್ರ ಒಡೆಯಲು ಮುಂದಾದ ಕೂಡಲೇ ಯಂತ್ರ ಸಮೀಪದ ಪೊಲೀಸ್‌‌‌ ಠಾಣೆಗೆ ಮತ್ತು ಹಣಕಾಸು ಸಂಸ್ಥೆಗೆ ಎಚ್ಚರಿಕೆ ಸಂದೇಶವನ್ನು ಆಟೋಮ್ಯಾಟಿಕ್‌ ಆಗಿ ಕಳುಹಿಸುತ್ತದೆ.

ಸಾಧಾರಣವಾಗಿ ಕಳ್ಳರು ಮೊದಲು ಸಿಸಿ ಕ್ಯಾಮೆರಾವನ್ನು ಒಡೆದು, ಬಳಿಕ ಎಟಿಎಂ ಕೊಠಡಿಯ ಶಟರ್‌ನ್ನು ಕೆಳಗೆ ಹಾಕಿ ಯಂತ್ರವನ್ನು ಒಡೆದು ಒಳಗಡೆ ಇರುವ ಹಣವನ್ನು ಕದಿಯುತ್ತಾರೆ. ಈ ರೀತಿ ಕಳ್ಳತನ ಆಗದಂತೆ ತಡೆಯಲು ಎಟಿಎಂ ಕೇಂದ್ರಕ್ಕೆ ಜಿಎಸ್‌ಎಂ ಮೊಡೆಮ್‌ನ್ನು ಕಂಪೆನಿ ಅಳವಡಿಸಿದೆ.

atm
ಕಳ್ಳರು ಎಟಿಎಂ ಯಂತ್ರಕ್ಕೆ ಹಾನಿ ಮಾಡಿದ ಕೂಡಲೇ ಈ ಯಂತ್ರ ಎಚ್ಚರಿಕೆ ಸಂದೇಶ ರವಾನಿಸುವುದರ ಜೊತೆಗೆ ಈ ಎಟಿಎಂ ಯಂತ್ರದ ಕೊಠಡಿಯ ಶಟರ್‌ ಸ್ವಯಂಚಾಲಿತವಾಗಿ ಮುಚ್ಚುವಂತೆ ರೂಪಿಸಲಾಗಿದೆ. ಅಷ್ಟೇ ಅಲ್ಲದೇ ಕೊಠಡಿಯಲ್ಲಿರುವ ಸೈರನ್‌ ಸಹ ಮೊಳಗಿ ಆ ಎಟಿಎಂ ವ್ಯಾಪ್ತಿಯಲ್ಲಿರುವ ಪ್ರದೇಶದ ಜನರನ್ನು ಎಚ್ಚರಿಸುತ್ತದೆ. [ಎಟಿಎಂ ಹಂತಕನ ತಲೆಗೆ 5 ಲಕ್ಷ ಬಹುಮಾನ]

ಇದರಲ್ಲಿರುವ ತಂತ್ರಜ್ಞಾನ ಶಟರ್‌ನ್ನು ತಾನಾಗಿ ಎಳೆದುಕೊಳ್ಳುವುದರಿಂದ ಕಳ್ಳರು ಎಟಿಎಂ ಕೊಠಡಿಯಲ್ಲೇ ಸಿಕ್ಕಿ ಬೀಳುವುದರಿಂದ ಕಳ್ಳರನ್ನು ಸುಲಭವಾಗಿ ಹಿಡಿಯಬಹುದು. ಹೀಗಾಗಿ ಇದನ್ನು ಎಲ್ಲಾ ಕಡೆ ಅಳವಡಿಸಿದರೆ ಬಹಳ ಪ್ರಯೋಜನವಾಗಲಿದೆ ಎಂದು ಕಂಪೆನಿ ತನ್ನ ಉತ್ಪನ್ನದ ಬಗ್ಗೆ ಬೆನ್ನು ತಟ್ಟಿಕೊಂಡಿದೆ. ಹೊಸ ಮಾದರಿಯ ಎಟಿಎಂ ಯಂತ್ರಕ್ಕೆ 1.50 ಲಕ್ಷ ವೆಚ್ಚ ತಗಲುತ್ತದೆ ಎಂದು ಸಿಂಟಾ ಸಿಸ್ಟಂ ಹೇಳಿದೆ.

English summary
Coimbatore, Sinta Systems launched a system, which, it said, alerts bank personnel, police and the public besides trapping the culprit, who enters an ATM kiosk to break open the machine and take money.The cost of the device is Rs.1.50 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X