ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಪತ್ನಿ ಬಗ್ಗೆ ಕುತೂಹಲದ ಪ್ರಶ್ನೆ

By Mahesh
|
Google Oneindia Kannada News

ಪಣಜಿ, ಏ.9: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬುಧವಾರ ವಡೋದರಾದಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಅವರ ಆಸ್ತಿ ಘೋಷಣೆಯಾಗಲಿದೆ. ಮೋದಿ ಅವರ ಆಸ್ತಿ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲೂ ಇದ್ದರೆ, ಗೋವಾ ಕಾಂಗ್ರೆಸ್ಸಿಗರಿಗೆ ಮೋದಿ ಅವರು ತಮ್ಮ ಪತ್ನಿ ಬಗ್ಗೆ ಏನು ಹೇಳಿಕೊಳ್ಳುತ್ತಾರೆ ಎಂಬ ಕಾತುರವಿದೆಯಂತೆ.

ವಡೋದರಾದಲ್ಲಿ ಮೋದಿ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ವೈವಾಹಿಕ ಸ್ಥಿತಿ ಬಗ್ಗೆ ಬಹಿರಂಗಪಡಿಸಬೇಕು. ನಾಮಪತ್ರ ಅರ್ಜಿ ತುಂಬುವ ಮೊದಲು ಈ ವಿಷಯದ ಬಗ್ಗೆ ಜನರಿಗೆ ತಿಳಿಯಲಿ ಎಂದು ಗೋವಾ ಕಾಂಗ್ರೆಸ್ ಹೇಳಿದೆ.

ಮೋದಿ ಅವರು martial status ಸ್ಥಳವನ್ನು ಏನೆಂದು ಭರ್ತಿ ಮಾಡುತ್ತಾರೆ. ಅದನ್ನು ಖಾಲಿ ಬಿಡುವುದು ಸರಿಯೇ ಎಂದು ಗೋವಾ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಶಾಂತರಾಮ್ ನಾಯಕ್ ಪ್ರಶ್ನಿಸಿದ್ದಾರೆ. ಮೋದಿ ಅವರು ಈ ಸ್ಥಳವನ್ನು ಖಾಲಿ ಬಿಡುವ ಮೂಲಕ ಮತ್ತೊಂದು ಲಾಭ ಪಡೆಯಲಿದ್ದಾರೆ. [ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ನಾಮಪತ್ರ ಸಲ್ಲಿಕೆ]

Narendra Modi should come clean on his marital status: Congress' Shantaram Naik

ಮೋದಿ ಅವರು ಮದುವೆಯಾಗಿದ್ದು ತಮ್ಮ ಪತ್ನಿಯನ್ನು ತೊರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ನಾವೇನು ಹೊಸದಾಗಿ ಹೇಳಬೇಕಾಗಿಲ್ಲ. ಆದರೆ, ನಾಮಪತ್ರ ಅರ್ಜಿಯಲ್ಲಿ ತಮ್ಮ ಪತ್ನಿ ಹೆಸರು ನಮೂದಿಸದಿದ್ದರೆ, ಪತ್ನಿ ಹೊಂದಿರುವ ಆಸ್ತಿಯ ಬಗ್ಗೆ ಕೂಡಾ ವಿವರಗಳು ಬಹಿರಂಗಗೊಳ್ಳುವುದಿಲ್ಲ. ಮೋದಿ ಆಸ್ತಿಯ ಬಗ್ಗೆ ಸರಿಯಾದ ಚಿತ್ರಣ ಸಿಗುವುದೇ ಇಲ್ಲ ಎಂದು ನಾಯಕ್ ಹೇಳಿದ್ದಾರೆ.

ಇತ್ತೀಚಿನ ಸುಪ್ರೀಂಕೋರ್ಟ್ ನಿಯಮದ ಪ್ರಕಾರ ನಾಮಪತ್ರ ಅರ್ಜಿಯಲ್ಲಿ ಎಲ್ಲಾ ಕಲಂಗಳನ್ನು ತುಂಬಲೇಬೇಕಾಗುತ್ತದೆ. ರಿಟರ್ನಿಂಗ್ ಅಫೀಸರ್ ಈ ಬಗ್ಗೆ ಅಭ್ಯರ್ಥಿಯನ್ನು ಪ್ರಶ್ನಿಸಬಹುದಾಗಿದ್ದು, ಖಾಲಿ ಬಿಟ್ಟ ಸ್ಥಳ ತುಂಬದಿದ್ದರೆ ಅಭ್ಯರ್ಥಿಯನ್ನು ಅನರ್ಹ ಎಂದು ಘೋಷಿಸಬಹುದಾಗಿದೆ.

English summary
Goa Congress said BJP's prime ministerial candidate Narendra Modi should come clean on his marital status before filing nomination papers for the Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X