ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ವಿರುದ್ಧ ಎಫ್ಐಆರ್ ದಾಖಲು

By Mahesh
|
Google Oneindia Kannada News

ವಡೋದರಾ, ಏ.30: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಜೈಲು ಸೇರುವ ಭೀತಿ ಎದುರಿಸಬೇಕಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವಡೋದರಾದ ಅಭ್ಯರ್ಥಿಯಾಗಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮತದಾನದ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದು ಸಾಬೀತಾದರೆ ಜೈಲುವಾಸ ಅನುಭವಿಸಬೇಕಾಗುತ್ತದೆ.

ವಡೋದರಾದ ಮತಗಟ್ಟೆಯಲ್ಲಿ ಮತದಾನ ಸಂದರ್ಭದಲ್ಲಿ ಹಾಗೂ ಮತದಾನದ ನಂತರ ಬಿಜೆಪಿ ಚಿನ್ಹೆ ಹಿಡಿದುಕೊಂಡು ಸೆಲ್ಫಿ ಫೋಟೊ ತೆಗೆದುಕೊಂಡಿದ್ದರು. ಈ ಚಿತ್ರವನ್ನು ಟ್ವೀಟ್ ಕೂಡಾ ಮಾಡಿದ್ದರು. ನಂತರ ಚುಟುಕು ಸುದ್ದಿಗೋಷ್ಠಿನಡೆಸಿ ವಿಕ್ಟರಿ ಸಿಂಬಲ್ ತೋರುತ್ತಾ ಬಿಜೆಪಿ ಚಿನ್ಹೆಯನ್ನು ನೆರೆದಿದ್ದವರತ್ತ ಪ್ರದರ್ಶಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಮತದಾನ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಅಭ್ಯರ್ಥಿ ಅಥವಾ ಪಕ್ಷದ ಪ್ರತಿನಿಧಿಯೊಬ್ಬರು ಮತದಾರರ ಮುಂದೆ ಈ ರೀತಿ ಪ್ರದರ್ಶನ ಮಾಡಿ ಪ್ರಲೋಭನೆಗೆ ಒಳಪಡಿಸುವುದು ಕಾನೂನು ಬಾಹಿರ. ತಕ್ಷಣವೇ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಮೋದಿ ಅವರನ್ನು ಬಂಧಿಸಬೇಕು ಹಾಗೂ ಅವರ ಅಭ್ಯರ್ಥಿತನವನ್ನು ಅನರ್ಹ ಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.

ಈ ಬಗ್ಗೆ ಕ್ರಮ ಕೈಗೊಂಡಿರುವ ಗುಜರಾತ್ ಡಿಜಿಪಿ ಹಾಗೂ ಮುಖ್ಯ ಕಾರ್ಯದರ್ಶಿಗಳು ಮೋದಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಕ್ರಮ ಜರುಗಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ. ಸುದ್ದ್ಗಿಗೋಷ್ಠಿ ಚಿತ್ರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ವಡೋದರಾ ಹಾಗೂ ವಾರಣಾಸಿಯಲ್ಲಿ ಮೋದಿ ಅವರು ಸ್ಪರ್ಧಿಸುತ್ತಿದ್ದು, ಎರಡೂ ಕಡೆ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಮೀಮ್ ಅಫ್ಜಲ್ ಆಗ್ರಹಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಜೈಲು ಸೇರುವ ಭೀತಿ ಎದುರಿಸಬೇಕಾಗಿದೆ.

ನೀತಿ ಸಂಹಿತೆ ಉಲ್ಲಂಘಿಸಿದ್ದು ಸಾಬೀತಾದರೆ

ನೀತಿ ಸಂಹಿತೆ ಉಲ್ಲಂಘಿಸಿದ್ದು ಸಾಬೀತಾದರೆ

ವಡೋದರಾದ ಅಭ್ಯರ್ಥಿಯಾಗಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮತದಾನದ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದು ಸಾಬೀತಾದರೆ ಜೈಲುವಾಸ ಅನುಭವಿಸಬೇಕಾಗುತ್ತದೆ.

ವಡೋದರಾದ ಮತಗಟ್ಟೆಯಲ್ಲಿ ಮತದಾನ

ವಡೋದರಾದ ಮತಗಟ್ಟೆಯಲ್ಲಿ ಮತದಾನ

ವಡೋದರಾದ ಮತಗಟ್ಟೆಯಲ್ಲಿ ಮತದಾನ ಸಂದರ್ಭದಲ್ಲಿ ಹಾಗೂ ಮತದಾನದ ನಂತರ ಬಿಜೆಪಿ ಚಿನ್ಹೆ ಹಿಡಿದುಕೊಂಡು ಸೆಲ್ಫಿ ಫೋಟೊ ತೆಗೆದುಕೊಂಡಿದ್ದರು.

ಮೋದಿ ಪಕ್ಷದ ಚಿನ್ಹೆ ತೋರಿಸಿದ್ದು ತಪ್ಪೇ?

ಮೋದಿ ಪಕ್ಷದ ಚಿನ್ಹೆ ತೋರಿಸಿದ್ದು ತಪ್ಪೇ?

ಮತದಾನ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಅಭ್ಯರ್ಥಿ ಅಥವಾ ಪಕ್ಷದ ಪ್ರತಿನಿಧಿಯೊಬ್ಬರು ಮತದಾರರ ಮುಂದೆ ಈ ರೀತಿ ಪ್ರದರ್ಶನ ಮಾಡಿ ಪ್ರಲೋಭನೆಗೆ ಒಳಪಡಿಸುವುದು ಕಾನೂನು ಬಾಹಿರ.

ಮತದಾನ ನಂತರ ಸುದ್ದಿಗೋಷ್ಠಿ

ಮತದಾನ ನಂತರ ಸುದ್ದಿಗೋಷ್ಠಿ

ಮತದಾನ ನಂತರ ಸುದ್ದಿಗೋಷ್ಠಿ ನಡೆಸಿದ ಗುಜರಾತ್ ಸಿಎಂ ಮೋದಿ ಅವರು ಮತ್ತೊಮ್ಮೆ ಪಕ್ಷದ ಚಿನ್ಹೆ ಪ್ರದರ್ಶಿಸಿದ್ದಾರೆ. ವಿಕ್ಟರಿ ಸಿಂಬಲ್ ತೋರಿಸುವುದು ಮಾಮೂಲಿ ಆದರೆ, ಕಮಲ ಚಿನ್ಹೆ ಕೈಯಲ್ಲಿ ಹಿಡಿದಿದ್ದು ಕಾಂಗ್ರೆಸ್ ಆಕ್ಷೇಪಕ್ಕೆ ಕಾರಣ

ಮೋದಿ ಸೆಲ್ಫಿ ಫೋಟೊ ಜನಪ್ರಿಯತೆ

ಮೋದಿ ಸೆಲ್ಫಿ ಫೋಟೊ ಜನಪ್ರಿಯತೆ

ಮೋದಿ ಸೆಲ್ಫಿ ಫೋಟೊ ಜನಪ್ರಿಯತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬುತ್ತಿದೆ

ನರೇಂದ್ರ ಮೋದಿ ಸೆಲ್ಫಿ ಫೋಟೊ

ನರೇಂದ್ರ ಮೋದಿ ಸೆಲ್ಫಿ ಫೋಟೊ

ನರೇಂದ್ರ ಮೋದಿ ಸೆಲ್ಫಿ ಫೋಟೊ ಜನಪ್ರಿಯತೆ ಹೆಚ್ಚುತ್ತಿದೆ. ನರೇಂದ್ರ ಮೋದಿ ಸೆಲ್ಫಿ ಫೋಟೊ ಜನಪ್ರಿಯತೆ ಹೆಚ್ಚುತ್ತಿದೆ. 2427 ರೀಟ್ವೀಟ್ ಹಾಗೂ 1882 ಜನ ಫೇವರೀಟ್ ಮಾಡಿಕೊಂಡಿದ್ದಾರೆ.

ಗುಜರಾತ್ ಜನತೆ ಕ್ಷಮೆಯಾಚನೆ

ನಾನು ಕೇವಲ 18 ಗಂಟೆಗಳ ಕಾಲ ಮಾತ್ರ ಚುನಾವಣಾ ಪ್ರಚಾರ ನಿರತನಾಗಿದ್ದೆ. ಹೆಚ್ಚು ಸಮಯ ಕಳೆಯಲು ಆಗಲಿಲ್ಲ ಎಂದು ಗುಜರಾತ್ ಜನತೆಯಲ್ಲಿ ಮೋದಿ ಕ್ಷಮೆಯಾಚನೆ

ಸೆಲ್ಫಿ ಫೋಟೋ ವಿವಾದದ ನಂತರ

ಸೆಲ್ಫಿ ಫೋಟೋ ವಿವಾದದ ನಂತರವೂ ಮೋದಿ ಅವರು ಟ್ವೀಟ್ ಮಾಡಿ ನಿಮ್ಮ ಸೆಲ್ಫಿ ಫೋಟೊ ಹಂಚಿಕೊಳ್ಳಿ ಎಂದಿದ್ದಾರೆ.

ಮೋದಿ ವಿರುದ್ಧ ಕ್ರಮಕ್ಕೆ ಸೂಚನೆ

ಮೋದಿ ವಿರುದ್ಧ ಕ್ರಮಕ್ಕೆ ಸೂಚನೆ

ಗುಜರಾತ್ ಡಿಜಿಪಿ ಹಾಗೂ ಮುಖ್ಯ ಕಾರ್ಯದರ್ಶಿಗಳು ಮೋದಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಕ್ರಮ ಜರುಗಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ.

English summary
The Election Commission of India (EC) on Wednesday, April 30 asked BJP to send tape of Narendra Modi's press conference near Vadodara polling booth. The Gujarat Chief Minister may face disqualification as Congress moved the EC expressing its displeasure over Modi's selfie outside polling booth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X