ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ ಮೋದಿ ದೇಣಿಗೆ

By Ashwath
|
Google Oneindia Kannada News

ನವದೆಹಲಿ. ಮೇ.23: ಗುಜರಾತ್‌ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರು ಚಾಲಕರು ಮತ್ತು ಜವಾನರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಟ್ವಿಟ್ಟರ್‌‌ನಲ್ಲಿ ಈ ಸುದ್ದಿಯನ್ನು ನರೇಂದ್ರ ಮೋದಿ ತಿಳಿಸಿದ್ದು ತಮ್ಮ ಈ ಚಿಕ್ಕ ಕೊಡುಗೆ ಹೆಣ್ಣುಮಕ್ಕಳ ಸಬಲೀಕರಣಕ್ಕೆ ನೆರವಾಗಲಿದೆ ಎನ್ನುವ ಆಶಾಭಾವ ಹೊಂದಿರುವುದಾಗಿ ಹೇಳಿದ್ದಾರೆ.

ತಮ್ಮ ಸಂಪಾದನೆಯಲ್ಲಿ ಉಳಿಸಿದ ಹಣವನ್ನು ಈ ಮೂಲಕ ನೀಡಿರುವುದಾಗಿ ಅವರು ಹೇಳಿದ್ದಾರೆ. ಗುಜರಾತ್‌ನ ನೂತನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್‌ ನೂತನ ಶಾಶ್ವತ ನಿಧಿಯನ್ನು ಸ್ಥಾಪಿಸಲಿದ್ದು ಈ ನಿಧಿಯ ಮೂಲಕ ಈ ಹಣ ವಿನಿಯೋಗವಾಗಲಿದೆ.ನರೇಂದ್ರ ಮೋದಿ ಪಟ್ಟಾಭಿಷೇಕಕ್ಕೆ ಇವರೇ ವಿಶೇಷ ಅತಿಥಿ]

narendra modi

ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭ‌ದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕನ್ಯಾ ಕೆಲವಾನಿ (Kanya Kelavani) ನಿಧಿ ಯೋಜನೆಯನ್ನು ಆರಂಭಿಸಿದ್ದರು. ಮುಖ್ಯಮಂತ್ರಿ ಅವಧಿಯಲ್ಲಿ ತಮಗೆ ಸಿಕ್ಕಿದ ಉಡುಗೊರೆಯನ್ನು ಹರಾಜು ಹಾಕಿ 19 ಕೋಟಿ ರೂಪಾಯಿಯನ್ನು ಈ ಯೋಜನೆಗೆ ದೇಣಿಗೆ ನೀಡಿದ್ದರು.

English summary
As a parting gift to the cause of girl education in his home state, Prime Minister-designate Narendra Modi has donated Rs. 21 lakh from his personal savings to create a corpus fund for educating daughters of drivers and peons working with the Gujarat government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X