ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯರಿಗೆ ನರೇಂದ್ರ ಮೋದಿ ಅಭಯ

|
Google Oneindia Kannada News

ನ್ಯೂ ಯಾರ್ಕ್‌, ಸೆ. 29 : ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ನರೇಂದ್ರ ಮೋದಿ ಅಭಯ ನೀಡಿದ್ದಾರೆ. ತವರಿಗೆ ಮರಳಲು ಇದ್ದ ಎಲ್ಲ ರೀತಿಯ ವೀಸಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಇಲ್ಲಿನ ಮ್ಯಾನ್‌ಹಟನ್‌ನಲ್ಲಿರುವ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 20 ಸಾವಿರಕ್ಕೂ ಅಧಿಕ ಎನ್ನಾರೈಗಳನ್ನು ಉದ್ದೇಶಿಸಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ಈ ಭರವಸೆ ನೀಡಿದ್ದಾರೆ.(ಅರ್ಜಿ ಹಾಕದೆ ಅಮೆರಿಕ ವೀಸಾ ಪಡೆದ ಮೋದಿ!)

modi

ಅಮೆರಿಕದಿಂದ ತವರಿಗೆ ಆಗಮಿಸುವವರಿಗೆ ಯಾವುದೇ ತಾಪತ್ರಯ ಉಂಟಾಗುವುದಿಲ್ಲ. ಶಾಶ್ವತ ವೀಸಾ ನೀಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಅಲ್ಲದೇ ಈಗ ಇರುವ ಕೇವಲ 30 ದಿನದ ವೀಸಾ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸುವ ಯೋಚನೆಯಿದೆ ಎಂದು ಹೇಳಿದ್ದಾರೆ.

ಅಲ್ಲದೇ ಅಮೆರಿಕದ ಪ್ರವಾಸಿಗರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ವೀಸಾ ನೀಡುವ ವ್ಯವಸ್ಥೆ ಬಗ್ಗೆಯೂ ಚಿಂತಿಸಲಾಗುತ್ತಿದೆ. ಭಾರತೀಯ ಮೂಲದ ಅಮೆರಿಕನ್ನರಿಗೂ ಈ ಯೋಜನೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. (ಇನ್ನು ಬೆಂಗಳೂರಿನಲ್ಲಿ ಸಿಗಲಿದೆ ಇಸ್ರೇಲ್ ವೀಸಾ)

ಒಂದು ವೇಳೇ ವೀಸಾ ಮುಗಿದರೂ ಅಂದರೆ 180 ದಿನಕ್ಕೂ ಮೀರಿ ಪ್ರವಾಸಿಗರು ಭಾರತದಲ್ಲೇ ಉಳಿದರೆ 30 ದಿನದೊಳಗೆ ಸಮೀಪದ ಪೊಲೀಸ್‌ ಠಾಣೆಗೋ ಅಥವಾ ಅಧಿಕಾರಿಗಳಿಗೋ ಮಾಹಿತಿ ನೀಡಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಅಳವಡಿಸಿಕೊಳ್ಳಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಮ್ಮೆ ಭಾರತದ ಪ್ರಜೆಯಾಗಿದ್ದವರಿಗೆ ಒವರ್‌ಸೀಸ್‌ ಸಿಟಿಜನ್‌ ಶಿಪ್‌ ಕಾರ್ಡ್‌(ಒಸಿಐ) ನೀಡಲಾಗುವುದು. ಇವರು ಸಹ ಎಲ್ಲ ಉಚಿತ ವೀಸಾ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಆದರೆ ಕೆಲಮ ನಿರ್ಬಂಧಗಳಿವೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ತಮ್ಮ ಭಾಷಣದಲ್ಲಿ ಮೋದಿ ಭಾರತೀಯ ಸಂಜಾತರ ಕಾರ್ಡ್‌(ಪಿಐಒ೦) ಮತ್ತು ಒಮ್ಮೆ ಭಾರತದ ಪ್ರಜೆಯಾಗಿದ್ದವರಿಗೆ ಒಸಿಐ ನೀಡುವ ಚಿಂತನೆ ಹರಿಯಬಿಟ್ಟರು. ಅಲ್ಲದೇ ಇದರ ಸಾಧಕ ಮತ್ತು ಸೌಲಭ್ಯ ಬಳಸಿಕೊಳ್ಳುವ ರೀತಿಯನ್ನು ವಿವರಿಸಿದರು.

English summary
Amid cheers from thousands of Indian-Americans, Prime Minister Narendra Modi announced several measures to ease travel to their motherland including life-long visas. In addition the Indian missions in the US would grant long-term visas to US citizens and US tourists would get visa on arrival in India. Online visas would be introduced and Visa outsourcing services expanded to reduce current problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X