ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾರಿಂದ ನರೇಂದ್ರ ಮೋದಿಗೆ ಅಧಿಕೃತ ಆಹ್ವಾನ

By Mahesh
|
Google Oneindia Kannada News

ನವದೆಹಲಿ, ಜು.11 : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ದ್ವಿಪಕ್ಷೀಯ ಮಾತುಕ್ತೆ ನಡೆಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ಕಳಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ಮೋದಿ ಜತೆ ಮಾತುಕತೆಗೆ ಒಬಾಮಾ ಉತ್ಸುಕರಾಗಿದ್ದಾರೆ ಎಂದು ಅಮೆರಿಕದ ಉಪ ಕಾರ್ಯದರ್ಶಿ ವಿಲಿಯಮ್ ಜೆ ಬರ್ನ್ಸ್ ಹೇಳಿದ್ದಾರೆ.

ಭಾರತ ಪ್ರವಾಸದಲ್ಲಿರುವ ವಿಲಿಯಂ ಅವರು ಅಧಿಕೃತ ಆಹ್ವಾನ ಪತ್ರವನ್ನು ಭಾರತ ಸರ್ಕರಕ್ಕೆ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.ಬರ್ನ್ಸ್ ಅವರು ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸೆಪ್ಟೆಂಬರ್ 26ರಂದು ವಿಶ್ವಸಂಸ್ಥೆಯ ಮಹಾ ಸಭೆಯನ್ನುದ್ದೇಶಿ ಮೋದಿ ಭಾಷಣ ಮಾಡಲಿದ್ದಾರೆ. ಅದಾದ ನಂತರ ಮೋದಿ-ಒಬಾಮಾ ಭೇಟಿ ನಡೆಯುವ ಸಾಧ್ಯತೆಯಿದೆ.

PM Narendra Modi gets formal invitation from Barack Obama

2002ರ ಗುಜರಾತ್ ಗಲಭೆಗಳ ಬಳಿಕ ಮೋದಿಗೆ ವೀಸಾ ನೀಡಬೇಕೇ, ಬೇಡವೇ? ಎಂಬ ಜಿಜ್ಞಾಸೆಯಲ್ಲಿದ್ದ ಅಮೆರಿಕ ಇದೀಗ ಮೋದಿ ಅವರಿಗೆ ಅಮೆರಿಕಕ್ಕೆ ಆಹ್ವಾನ ನೀಡುವ ಕುರಿತು ಸ್ಪಷ್ಟ ನಿರ್ಧಾರ ತೆಗದುಕೊಂಡಿದೆ. ಆದರೆ ಭೇಟಿ ದಿನಾಂಕಗಳಿನ್ನೂ ನಿಗದಿಯಾಗಿಲ್ಲ.

ಬೇಹುಗಾರಿಕೆ ಬಗ್ಗೆ ಮಾತುಕತೆ: ಬಿಜೆಪಿ ಮೇಲೆ ಅಮೆರಿಕದ ಎನ್ಎಸ್ಎ ಬೇಹುಗಾರಿಕೆ ನಡೆಸಿದ್ದರ ಬಗ್ಗೆ ವಿಲಿಯಂ ಬರ್ನ್ಸ್ ಅವರಲ್ಲಿ ಅರುಣ್ ಜೇಟ್ಲಿ ಅವರು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಉತ್ತರಿಸಿದ ಬರ್ನ್ಸ್, ವೃತ್ತಿಪರರಾಗಿ ಈ ಬಗ್ಗೆ ಗಮನ ಹರಿಸಿ ಪರಿಹಾರ ಕಂಡುಕೊಳ್ಳಲಾಗುವುದು ಇದರಿಂದ ದ್ವಿಪಕ್ಷೀಯ ಮಾತುಕತೆಗೆ ಅಡ್ಡಿ ಬರುವುದಿಲ್ಲ ಎಂದಿದ್ದಾರೆ.


ಬಿಜೆಪಿ ಸೇರಿ ಆರು ವಿದೇಶಿ ರಾಜಕೀಯ ಪಕ್ಷಗಳ ಕುರಿತು ಎನ್ಎಸ್‌ಎ ಕಣ್ಗಾವಲು ಇಟ್ಟಿತ್ತು. ಭಾರತ ಸೇರಿ 193 ರಾಷ್ಟ್ರಗಳ ಸರ್ಕಾರಗಳ ಕಾರ್ಯವೈಖರಿ ಕುರಿತು ಬೇಹುಗಾರಿಕೆ ನಡೆಸಿತ್ತು ಎಂಬ ಸ್ಫೋಟಕ ಮಾಹಿತಿ ಇತ್ತೀಚೆಗೆ ಹೊರಬಿದ್ದಿತ್ತು. [ವಿವರ ಇಲ್ಲಿ ಓದಿ]

English summary
US President Barack Obama formally invited Prime Minister Narendra Modi to visit the US. Deputy Secretary of State William Burns delivered the letter from Obama to Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X