ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಸ್ವಾವಲಂಬಿಗಳಾಗಬೇಕು

|
Google Oneindia Kannada News

ಪಣಜಿ, ಜೂ.14 : ದೇಶದ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಯುದ್ಧನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶಕ್ಕೆ ಸಮರ್ಪಿಸಿದ್ದಾರೆ. ದೇಶಿಯವಾಗಿ ರಕ್ಷಣಾ ಉಪಕರಣ ಹಾಗೂ ಶಸ್ತ್ರಾಸ್ತ್ರಗಳನ್ನು ತಯಾರಿಸುವುದರ ಮೂಲಕ ನಾವೇಕೆ ಸ್ವಾವಲಂಬಿಗಳಾಗಬಾರದು? ಎಂದು ಮೋದಿ ಪ್ರಶ್ನಿಸಿದ್ದಾರೆ.

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಶನಿವಾರ ಗೋವಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್.ಆರ್.ಧೂವನ್ ಅವರು ಸ್ವಾಗತಿಸಿದರು. ಬಳಿಕ ಐಎನ್‌ಎಸ್ ಹಂಸಾ ಹೆಲಿಕಾಪ್ಟರ್ ಮೂಲಕ ವಿಕ್ರಮಾದಿತ್ಯ ನೌಕೆಯ ಮೇಲೆ ಮೋದಿ ಬಂದಿಳಿದರು.

ಯುದ್ಧನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ದೇಶಕ್ಕೆ ಸಮರ್ಪಣೆ ಮಾಡಿದ ನಂತರ ಮಾತನಾಡಿದ ಮೋದಿ, ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸುವ ಭರವಸೆ ನೀಡಿದರು. ನಮ್ಮ ಸರ್ಕಾರ ದೇಶದ ರಕ್ಷಣಾವಲಯವನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ ಎಂದರು. ಚಿತ್ರಗಳಲ್ಲಿ ಮೋದಿ ಭೇಟಿ [ಪಿಟಿಐ ಚಿತ್ರಗಳು]

ವಿಕ್ರಮಾದಿತ್ಯ ಸಮರ್ಪಣೆ ಮಾಡಿದ ಮೋದಿ

ವಿಕ್ರಮಾದಿತ್ಯ ಸಮರ್ಪಣೆ ಮಾಡಿದ ಮೋದಿ

ದೇಶದ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಯುದ್ಧನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶಕ್ಕೆ ಸಮರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಮೋದಿ, ಕೇವಲ ಭರವಸೆಗಳನ್ನು ಮಾತ್ರ ನೀಡುವುದು ನಮ್ಮ ಸರ್ಕಾರದ ಕೆಲಸವಲ್ಲ, ನಾವು ಭರವಸೆಗಳ ಈಡೇರಿಕೆಯ ಸದುದ್ದೇಶದಿಂದ ಅಧಿಕಾರಕ್ಕೆ ಬಂದಿದ್ದೇವೆ ಎಂದರು.

ಮೊದಲ ಬಾರಿ ಗೋವಾಕ್ಕೆ ಬಂದಿದ್ದ ಪ್ರಧಾನಿ

ಮೊದಲ ಬಾರಿ ಗೋವಾಕ್ಕೆ ಬಂದಿದ್ದ ಪ್ರಧಾನಿ

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಶನಿವಾರ ಗೋವಾಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್.ಆರ್.ಧೂವನ್ ಅವರು ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಐಎನ್‌ಎಸ್ ಹಂಸಾ ಹೆಲಿಕಾಪ್ಟರ್ ಮೂಲಕ ವಿಕ್ರಮಾದಿತ್ಯ ನೌಕೆಯ ಮೇಲೆ ಮೋದಿ ಬಂದಿಳಿದರು.

ಸೇನಾಪಡೆಗಳಿಂದ ಗೌರವ ವಂದನೆ

ಸೇನಾಪಡೆಗಳಿಂದ ಗೌರವ ವಂದನೆ

ವಿಕ್ರಮಾದಿತ್ಯ ನೌಕಾನೆಲೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಬ್ಬಂದಿ ಗೌರವ ವಂದನೆ ಅರ್ಪಿಸಿದರು. ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶಿಯವಾಗಿ ರಕ್ಷಣಾ ಉಪಕರಣ ಹಾಗೂ ಶಸ್ತ್ರಾಸ್ತ್ರಗಳನ್ನು ತಯಾರಿಸುವುದರ ಮೂಲಕ ನಾವೇಕೆ ಸ್ವಾವಲಂಬಿಗಳಾಗಬಾರದು? ಎಂದು ಪ್ರಶ್ನಿಸಿದರು.

ರಫ್ತುಮಾಡುವ ಸಾಮರ್ಥ್ಯ ಬರಬೇಕು

ರಫ್ತುಮಾಡುವ ಸಾಮರ್ಥ್ಯ ಬರಬೇಕು

ಪ್ರಧಾನಿ ನರೇಂದ್ರ ಮೋದಿ ದೇಶಿಯವಾಗಿ ರಕ್ಷಣಾ ಉಪಕರಣ ಹಾಗೂ ಶಸ್ತ್ರಾಸ್ತ್ರಗಳನ್ನು ತಯಾರಿಸಿ ನಾವು ಸ್ವಾವಲಂಬಿಗಳಾಗುವು ಜೊತೆಗೆ, ರಕ್ಷಣಾ ಉಪಕರಣಗಳನ್ನು ವಿದೇಶಕ್ಕೆ ರಫ್ತು ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ವಿಮಾನದ ಮಾಹಿತಿ ಪಡೆದ ಪಿಎಂ

ವಿಮಾನದ ಮಾಹಿತಿ ಪಡೆದ ಪಿಎಂ

ವಿಕ್ರಮಾದಿತ್ಯ ನೌಕೆಯಲ್ಲಿರುವ ಮಿಗ್‌ 29ಕೆ ವಿಮಾನದ ಪೈಲಟ್‌ ಸೀಟಿನಲ್ಲಿ ಕುಳಿತು ಮೋದಿ ವಿಮಾನದ ಕಾರ್ಯನಿರ್ವಹಣೆಯ ಬಗ್ಗೆ ವಿವರಗಳನ್ನು ಪಡೆದರು. ನೌಕಾಪಡೆಯ ಅಧಿಕಾರಿಗಳು ವಿಕ್ರಮಾದಿತ್ಯದ ನೌಕೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರಧಾನಿಗೆ ವಿವಿರಗಳನ್ನು ನೀಡಿದರು.

ಗೋವಾಕ್ಕೆ ಹೋಗಿದ್ದಾನೆ ವಿಕ್ರಮಾದಿತ್ಯ

ಗೋವಾಕ್ಕೆ ಹೋಗಿದ್ದಾನೆ ವಿಕ್ರಮಾದಿತ್ಯ

ಕರ್ನಾಟಕ ಕಾರವಾರದಲ್ಲಿ ನೆಲೆ ಹೊಂದಿರುವ ವಿಕ್ರಮಾದಿತ್ಯ ಸದ್ಯ ಪಕ್ಕದ ಗೋವಾ ಕರಾವಳಿಯಲ್ಲಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಕ್ರಮಾದಿತ್ಯ ನೌಕೆಯಲ್ಲಿ ಕಾಲ ಕಳೆದ ಪ್ರಧಾನಿ ಮಿಗ್‌ 29ಕೆ, ಸೀ ಹಾರಿಯರ್, ಪಿ 8ಐ ವಿಮಾನಗಳು, ಟಿಯು 142 ಎಂ ಮತ್ತು ಐಎಲ್‌ 38ಎಸ್‌ಡಿ ಕರಾವಳಿ ವಿಮಾನಗಳು, ಕಾಮೋವ್‌ ಮತ್ತು ಸೀ ಕಿಂಗ್‌ ಹೆಲಿಕಾಪ್ಟರ್‌ಗಳ ಸಾಹಸವನ್ನು ವೀಕ್ಷಿಸಿದರು.

ಒನ್ ರ‌್ಯಾಂಕ್ ಒನ್ ಪೆನ್ಷನ್

ಒನ್ ರ‌್ಯಾಂಕ್ ಒನ್ ಪೆನ್ಷನ್

ಯೋಧರೊಂದಿಗೆ ಸಂವಾದ ನಡೆಸಿದ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ದೇಶದ ಸುರಕ್ಷತೆ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಸೇನಾ ಸಿಬ್ಬಂದಿಗಾಗಿ ಶೀಘ್ರದಲ್ಲೇ 'ಒನ್ ರ‌್ಯಾಂಕ್ ಒನ್ ಪೆನ್ಷನ್‌ ಜಾರಿಗೊಳಿಸಲಾಗುವುದು ಎಂದರು.

ಸೇನಾಧಿಕಾರಿಗಳೊಂದಿಗೆ ಸಂವಾದ

ಸೇನಾಧಿಕಾರಿಗಳೊಂದಿಗೆ ಸಂವಾದ

ಐಎನ್‌ಎಸ್‌ ವಿಕ್ರಮಾದಿತ್ಯವನ್ನು ದೇಶಕ್ಕೆ ಸಮರ್ಪಿಸಿದ ನಂತರ ಮೋದಿ ಸೇನಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

English summary
Prime Minister Narendra Modi on Saturday arrived in Goa to visit INS Vikramaditya, the latest and the largest aircraft carrier of the Indian Navy. In his speech PM Modi stresses on indigenous production of defense equipments and weaponry, says Why should we import defense equipment?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X