ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಕಣ್ಣಾಲಿ ತುಂಬುವಂತೆ ಮಾಡಿದ ಮೋದಿ

By Mahesh
|
Google Oneindia Kannada News

ನವದೆಹಲಿ, ಮೇ.20: ದೇಶದ ಬಡ ಕುಟುಂಬದಿಂದ ಬಂದಿರುವ ವ್ಯಕ್ತಿ ಈ ದೇಶದ ಪ್ರಧಾನಿಯಾಗುತ್ತಿದ್ದಾನೆ. ಇಂದು ಒಬ್ಬ ಬಡ ವ್ಯಕ್ತಿ ಪ್ರಧಾನಿಯಾಗುವುದಕ್ಕೆ ಈ ದೇಶದ ಸಂವಿಧಾನ ಕಾರಣ. ಹೀಗಾಗಿ ನಾನು ಸಂವಿಧಾನವನ್ನು ಗೌರವಿಸುತ್ತೇನೆ ಎಂದು ಸಂಸತ್ತಿನ ಹೆಬ್ಬಾಗಿಲಿಗೆ ತಲೆ ಬಾಗಿ ನಮಸಿದ ಮೋದಿ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆದರು.

ಮೊಟ್ಟ ಮೊದಲ ಬಾರಿಗೆ ಸಂಸತ್ತಿನ ಸೆಂಟ್ರಲ್ ಹಾಲ್ ಪ್ರವೇಶಿಸಿದ ಗುಜರಾತಿನ ಆಧುನಿಕ ಲೋಹ ಪುರುಷನ ಕಣ್ಣಾಲಿಗಳು ಇಂದು ತುಂಬಿ ಬಂದಿತ್ತು. ಅಸಾಧ್ಯವಾದದ್ದು ಸಾಧಿಸಿದ ಖುಷಿ, ಜನ ಸಾಮಾನ್ಯನೊಬ್ಬ ಜನ ನಾಯಕನಾಗಿ 'ಜನ ಸೇವೆಗೆ ನನ್ನ ಜೀವನ ಮುಡಿಪು' ಎಂದು ಕೋಟ್ಯಂತರ ಜನರ ಮುಂದೆ ಹೇಳುವ ಆತ್ಮ ವಿಶ್ವಾಸದ ಸಂಕೇತವಾಗಿ ಮೋದಿ ಇಂದು ಜನತೆಗೆ ಕಾಣಿಸಿಕೊಂಡಿದ್ದಾರೆ.

ನರೇಂದ್ರ ಮೋದಿಯವರನ್ನು ಬಿಜೆಪಿ ಸಂಸದೀಯ ಪಕ್ಷದ ಮುಖಂಡನನ್ನಾಗಿ ಎಲ್.ಕೆ.ಆಡ್ವಾಣಿ ಸೂಚಿಸಿದ ಬೆನ್ನಲ್ಲೇ ಅಡ್ವಾಣಿ ಅವರ ಕಣ್ಣಾಲಿಗಳು ತುಂಬಿ ಬಂದಿತ್ತ್ತು. ನಂತರ ಅಡ್ವಾಣಿ ಅವರು ತಮ್ಮ ಬಗ್ಗೆ ಆಡಿದ ಹೊಗಳಿಕೆ ಮಾತುಗಳನ್ನು ನೆನದು ಮೋದಿ ಕೂಡಾ ಆನಂದ ಭಾಷ್ಪ ಸುರಿಸಿದರು. ಮತ್ತೊಮ್ಮೆ , 'ಭಾರತ ನನ್ನ ತಾಯಿ ಇದ್ದಂತೆ, ಭಾಜಪ ಕೂಡಾ ನನ್ನ ತಾಯಿ' ಎನ್ನುವಾಗ ಮೋದಿ ಮತ್ತೊಮ್ಮೆ ಕಂಬನಿ ಮಿಡಿದರು. ಮೋದಿ ಅವರ ಭಾಷಣ, ಅವರ ನಡೆ ನುಡಿ ಕಂಡು ಸಾಮಾಜಿಕ ಜಾಲ ತಾಣಗಳು ಕೂಡಾ ಕಣ್ತುಂಬಿಕೊಂಡಿದ್ದವು.. ಮೋದಿ ಪರ ಬಂದಿರುವ ಟ್ವೀಟ್ ಗಳನ್ನು ಇಲ್ಲಿ ನೋಡಿ...

ಪ್ರಜಾಪ್ರಭುತ್ವದ ಹೆಬ್ಬಾಗಿಲಿಗೆ ಮೋದಿ ನಮನ

ಪ್ರಜಾಪ್ರಭುತ್ವದ ಹೆಬ್ಬಾಗಿಲಿಗೆ ಮೋದಿ ನಮನ

ಸಂಸತ್ ಭವನ ಪ್ರವೇಶಿಸುತ್ತಿದ್ದಂತೆಯೇ ಬಿಜೆಪಿಯ ಹಿರಿಯ ಮುಖಂಡ ಆಡ್ವಾಣಿಯ ಕಾಲು ಮುಟ್ಟಿ ನಮಸ್ಕರಿಸಿ ಗೌರವ ಅರ್ಪಿಸಿದ ನರೇಂದ್ರ ಮೋದಿ ಸಂಸತ್ತಿನ ಹೆಬ್ಬಾಗಿಲಿಗೂ ನಮಿಸಿ ಒಳಪ್ರವೇಶಿಸಿದರು

ಸೆಂಟಲ್ ಹಾಲ್ ನಲ್ಲಿ ನಡೆದ ಸಮಾರಂಭ

ಸೆಂಟಲ್ ಹಾಲ್ ನಲ್ಲಿ ನಡೆದ ಸಮಾರಂಭ

ಸೆಂಟಲ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಎನ್ಡಿಎ ಅಧ್ಯಕ್ಷ ಪದವಿ ಪಡೆದ ಮೋದಿ ಮೊದಲಿಗೆ ನೆನಸಿಕೊಂಡಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ವಾಜಪೇಯಿ ಸಂದರ್ಭದಲ್ಲಿ ಅವರು ಉಪಸ್ಥಿತರಿದ್ದರೆ ಈ ಕ್ಷಣದ ಮೌಲ್ಯ ಇನ್ನೂ ಹೆಚ್ಚಾಗುತ್ತಿತ್ತು ಎಂದರು. ಹುದ್ದೆಯನ್ನು ಅಲಂಕರಿಸುವುದಕ್ಕಿಂತಲೂ ಹೆಚ್ಚಾಗಿ ಜವಾಬ್ದಾರಿ ನಿರ್ವಹಿಸುವುದು ಮುಖ್ಯ ಎಂದ ಮೋದಿ ಭಾವುಕರಾದರು.

ಮೊದಲ ಬಾರಿಗೆ ಮೋದಿ ಸಂಸತ್ ಪ್ರವೇಶ

ಮೊದಲ ಬಾರಿಗೆ ಮೋದಿ ಸಂಸತ್ ಪ್ರವೇಶ

ಗುಜರಾತ್ ಮುಖ್ಯಮಂತ್ರಿಯಾಗುವ ಮೂಲಕ ನಾನು ವಿಧಾನಸಭೆ ಪ್ರವೇಶ ಮಾಡಿದ್ದೇ, ಇದೀಗ ಪ್ರಧಾನಿಯಾಗುವ ಮೂಲಕ ಸಂಸತ್ ಪ್ರವೇಶ ಮಾಡಿದ್ದೇನೆ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಂಡರು.

ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ ಅಡ್ವಾಣಿ

ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ ಅಡ್ವಾಣಿ

ನರೇಂದ್ರ ಮೋದಿಯವರನ್ನು ಬಿಜೆಪಿ ಸಂಸದೀಯ ಪಕ್ಷದ ಮುಖಂಡನನ್ನಾಗಿ ಎಲ್.ಕೆ.ಆಡ್ವಾಣಿ ಸೂಚಿಸಿದ ಬೆನ್ನಲ್ಲೇ ಅಡ್ವಾಣಿ ಅವರ ಕಣ್ಣಾಲಿಗಳು ತುಂಬಿ ಬಂದಿತ್ತ್ತು. ನಂತರ ಅಡ್ವಾಣಿ ಅವರು ತಮ್ಮ ಬಗ್ಗೆ ಆಡಿದ ಹೊಗಳಿಕೆ ಮಾತುಗಳನ್ನು ನೆನದು ಮೋದಿ ಕೂಡಾ ಆನಂದ ಬಾಷ್ಪ ಸುರಿಸಿದರು.

ಭಾರತ, ಭಾಜಪ ನನ್ನ ತಾಯಿ ಎಂದ ಮೋದಿ

ಭಾರತ, ಭಾಜಪ ನನ್ನ ತಾಯಿ ಎಂದ ಮೋದಿ

ಭಾಷಣದ ನಡುವೆ ನಾನು ಈ ಸ್ಥಾನಕ್ಕೇರಲು ಹಿರಿಯ ನಾಯಕರೇ ಕಾರಣ. 'ಭಾರತ ನನ್ನ ತಾಯಿ ಇದ್ದಂತೆ, ಭಾಜಪ ಕೂಡಾ ನನ್ನ ತಾಯಿ' ಎಂದು ಮೋದಿ ಮತ್ತೊಮ್ಮೆ ಕಂಬನಿಗೆರೆದರು.

ಸುಮಾರು ಒಂದೂವರೆ ಗಂಟೆಗಳ ಕಾಲ ಭಾಷಣ

ಸುಮಾರು ಒಂದೂವರೆ ಗಂಟೆಗಳ ಕಾಲ ಭಾಷಣ

ಸುಮಾರು ಒಂದೂವರೆ ಗಂಟೆಗಳ ಕಾಲ ಭಾಷಣ ಮಾಡಿದ ಮೋದಿ ಭಾಷಣದುದ್ದಕ್ಕೂ ಭಾವುಕತೆ ಉಳಿಸಿಕೊಂಡಿದ್ದರು. ಅಡ್ವಾಣಿ ಅವರೇ ನನ್ನ ಬಗ್ಗೆ ಮಾತನಾಡುವಾಗ 'ಕೃಪೆ' ಪದ ಬಳಸಬೇಡಿ ನಾನು ಸಾಮಾನ್ಯ ಕಾರ್ಯಕರ್ತ ಎಂದರು.

ಯುಪಿಎ ಸಾಧನೆಗೂ ಬೆಲೆ ಕೊಟ್ಟ ಮೋದಿ

ಯುಪಿಎ ಮಾಡಿರುವ ಉತ್ತಮ ಸಾಧನೆಗಳಿಗೂ ಮನ್ನಣೆ ನೀಡಿದ ಮೋದಿ. ಕಳೆದ ಸರ್ಕಾರದ ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದರು.

ಮೋದಿ ಭಾಷಣದ ಬಗ್ಗೆ ವರದಿಗಳು

ಮೋದಿ ಭಾವುಕ ಭಾಷಣದ ಬಗ್ಗೆ ಹಲವಾರು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿದೆ

Array

ಮಿ. ಪ್ರೈಮ್ ಮಿನಿಸ್ಟರ್ ನಮ್ಮನ್ನು ಅಳಿಸಿಬಿಟ್ಟಿರಿ

ಮಿ. ಪ್ರೈಮ್ ಮಿನಿಸ್ಟರ್ ನಮ್ಮನ್ನು ಅಳಿಸಿಬಿಟ್ಟಿರಿ ಎಂದು ಟ್ವೀಟ್ ಮಾಡಿರುವ ಅಭಿಮಾನಿಗಳು

ಮೋದಿ ಭಾಷಣದ ಮೋಡಿಯಲ್ಲಿದ್ದೇವೆ: ಹೇಮಾ

ಹೊಸದಾಗಿ ಆಯ್ಕೆಯಾದ ಸಂಸದರ ಜತೆ ಭೋಜನದ ವೇಳೆಯಲ್ಲೂ ಎಲ್ಲರೂ ಮೋದಿ ಭಾಷಣದ ಮೋಡಿಯಲ್ಲಿದ್ದೇವೆ: ಎಂದು ಮಥುರಾ ಸಂಸದೆ, ನಟಿ ಹೇಮಾಮಾಲಿನಿ ಟ್ವೀಟ್

ಗುರು ಶಿಷ್ಯರ ಸಮಾಗಮಕ್ಕೆ ಸಂಸತ್ ಸಾಕ್ಷಿ

ಗುರು ಶಿಷ್ಯರ ಸಮಾಗಮಕ್ಕೆ ಸಂಸತ್ ಸಾಕ್ಷಿ

86 ವರ್ಷ ವಯಸ್ಸಿನ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರು ತಮ್ಮ ಶಿಷ್ಯ 63 ವರ್ಷದ ನರೇಂದ್ರ ಮೋದಿ ಅವರನ್ನು ಆಲಂಗಿಸಿ ಹರಿಸಿದ ಸುಂದರ ಕ್ಷಣಕ್ಕೆ ಸಂಸತ್ ಸಾಕ್ಷಿಯಾಯಿತು.

ಪ್ರಜೆಗಳೆ ಪ್ರಭುಗಳು, ಸಂಸತ್ತೇ ದೇಗುಲ

ಪ್ರಜೆಗಳೆ ಪ್ರಭುಗಳು, ಸಂಸತ್ತೇ ದೇಗುಲ

ಪ್ರಜೆಗಳೆ ಪ್ರಭುಗಳು, ಸಂಸತ್ತೇ ದೇಗುಲ ಎಂಬ ಮಾತುಗಳಿಗೆ ಅಕ್ಷರಶಃ ಬೆಲೆ ತಂದುಕೊಟ್ಟ ಕ್ಷಣ ಇದಾಗಿದೆ ಎಂದು ಅಭಿಮಾನಿಗಳು ಮೋದಿ ನಡೆ ನುಡಿಯನ್ನು ಬಣ್ಣಿಸಿದ್ದಾರೆ.

ಮೋದಿ ಮುಖದಲ್ಲಿ ಧನ್ಯತೆ, ಸಾರ್ಥಕತೆ

ಮೋದಿ ಮುಖದಲ್ಲಿ ಧನ್ಯತೆ, ಸಾರ್ಥಕತೆ

ಈ ಬಾರಿಯ ಚುನಾವಣೆಯಿಂದ ಜನರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೆಚ್ಚಾಗಿದೆ. ವಿಶೇಷವಾಗಿ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದು ಮೋದಿ ಹೇಳಿದ್ದಾರೆ.

ಆಶಾವಾದಿ ವ್ಯಕ್ತಿ ಮಾತ್ರ ದೇಶ ಮುನ್ನಡೆಸಬಲ್ಲ

ಆಶಾವಾದಿ ವ್ಯಕ್ತಿ ಮಾತ್ರ ದೇಶ ಮುನ್ನಡೆಸಬಲ್ಲ

ನಾನು ಆಶಾವಾದಿ, ಆಶಾವಾದಿ ವ್ಯಕ್ತಿ ಮಾತ್ರ ದೇಶದಲ್ಲಿ ಆಶಾವಾದವನ್ನು ತರಲು ಸಾಧ್ಯ ಎಂದ ಮೋದಿ ಅವರು ಅರ್ಧ ನೀರು ತುಂಬಿದ ಲೋಟ ಬಗ್ಗೆ ಆಶಾವಾದಿ, ನಿರಾಶಾವಾದಿ ಏನು ಹೇಳುತ್ತಾರೆ ಎಂಬುದನ್ನು ನಿರೂಪಿಸಿದರು.

ಮೋದಿ ಅವರ ಭಾಷಣದ ವಿಡಿಯೋ

ಮೋದಿ ಅವರ ಭಾಷಣದ ವಿಡಿಯೋ ರಾಜ್ಯಸಭಾ ಟಿವಿ ಮೂಲಕ ವೀಕ್ಷಿಸಿ.. ಭಾಷಣ ಮುಖ್ಯಾಂಶಗಳನ್ನು ಇಲ್ಲಿ ಓದಿ

ಲೋಕಸಭೆ ರಾಜ್ಯಸಭಾ ಟಿವಿಗೆ ಶುಕ್ರದೆಸೆ

ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಎನ್ಡಿಎ ಸಂಸದೀಯ ಮಂಡಳಿ ಸಭೆಯನ್ನು ನೇರ ಪ್ರಸಾರ ಮಾಡಿದ ರಾಜ್ಯ ಸಭೆ ಟಿವಿ ಟಿಆರ್ ಪಿ ಗಣನೀಯವಾಗಿ ಏರುವುದರಲ್ಲಿ ಸಂಶಯವಿಲ್ಲ: ಬಿ.ಜಿ ಮಹೇಶ್, ಎಂ.ಡಿ, ಒನ್ ಇಂಡಿಯಾ

English summary
Narendra Modi. The PM-designate became emotional and cried in front of all BJP MPs and leaders during the Parliamentarian meeting at the Central Hall of Parliament on Tuesday, May 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X