ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಕಟ್ಟಡ ಕುಸಿತ: 40 ಮಂದಿಗಾಗಿ ಹುಡುಕಾಟ

By Mahesh
|
Google Oneindia Kannada News

ಪಣಜಿ, ಜ. 5: ಗೋವಾದ ಕ್ಯಾನಾಕೋನಾ ಪಟ್ಟಣದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದ್ದು, ಈ ದುರ್ಘಟನೆಗೆ 14 ಮಂದಿ ಬಲಿಯಾಗಿದ್ದಾರೆ. ಸುಮಾರು 40ಕ್ಕೂ ಅಧಿಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ದುರ್ಘಟನೆ ನಿನ್ನೆ ಮಧ್ಯಾಹ್ನ 3 ಗಂಟೆಗೆ ಸಂಭವಿಸಿತು ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶೇಖರ್ ಪ್ರಭುದೇಸಾಯಿ ಹೇಳಿದ್ದಾರೆ. ರಕ್ಷಣಾ ಕಾರ್ಯಗಳನ್ನು ಚುರಕುಗೊಳಿಸಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Multistoried building in Goa collapses, several dead

ಕಟ್ಟಡ ಕಾಮಗಾರಿಗಾಗಿ ಸುಮಾರು 50-75 ಮಂದಿ ಪ್ರತಿನಿತ್ಯ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. 2013ರಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ನಿರ್ಮಾಣ ಹಂತದ ಕಟ್ಟಡ ಹಾಗೂ ಪುರಾತನ ಕಟ್ಟಡಗಳ ಕುಸಿತ ಪ್ರಕರಣಗಳು ವರದಿಯಾಗಿತ್ತು. 2014ರಲ್ಲಿ ಗೋವಾ ಕಟ್ಟಡ ಕುಸಿತ ಮೊದಲ ಪ್ರಕರಣ ಎನಿಸಿದೆ.

English summary
A multistoried building collapsed in the Canacona region of South Goa on Saturday afternoon. Eight people are reported to have been killed. Many are said to have been injured too.40 people are yet to be traced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X