ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆಬಾಳುವ ಹಳೇ ಬೈಕ್ ಖರೀದಿಸಿದ ಕ್ಯಾಪ್ಟನ್ ಧೋನಿ

By Srinath
|
Google Oneindia Kannada News

ತ್ರಿಶೂರ್, ಏ. 29: ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಎಂಎಸ್ ಧೋನಿ ಅವರಿಗಿರುವ ಅತೀವ ಬೈಕ್ ಬಯಕೆ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ - ಹಳೆಯ ಬೈಕುಗಳನ್ನು ಖರೀದಿಸುವುದು ಅದಕ್ಕೆ ಹೊಸ ಸ್ವರೂಪ ಕೊಡುವುದು ಅದಕ್ಕಾಗಿ ಲಕ್ಷಾಂತರ ರೂಪಾಯಿ ಸುರಿಯುವುದು. ಇಲ್ಲಾಂದ್ರೆ ದುಬಾರಿ ಹೊಚ್ಚ ಹೊಸ ಬೈಕ್ ಖರೀದಿಸುವುದು ಧೋನಿ ಬೆಳಸಿಕೊಂಡು ಬಂದಿರುವ ಖಯಾಲಿ.

ನಮ್ಮ ಸ್ಟೈಲಿಶ್ ಧೋನಿ ಕಣ್ಣು ಇದೀಗ ಕೇರಳದಲ್ಲಿರುವ ಹಳೆಯ ಯಮಾಹಾ ಬೈಕ್ ಮೇಲೆ ಬಿದ್ದಿದೆ. 1985 ಮಾಡಲ್ ಯಮಾಹಾ ಆರ್‌ಡಿ 350 ಬೈಕ್‌ ಇದು. ಈಗಾಗಲೇ 2 ಲಕ್ಷ ರೂ ನೀಡಿ, ಅದನ್ನು ಧೋನಿ ತಮ್ಮದಾಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಆಲಪ್ಪಿ-ಧನಬಾದ್ ಎಕ್ಸ್‌ ಪ್ರೆಸ್‌ ಟ್ರೈನಿನಲ್ಲಿ ಈ ಬೈಕ್ ತ್ರಿಶೂರಿನಿಂದ ರಾಂಚಿಗೆ ತಲುಪಲಿದೆ.

ಇಷ್ಟಾಗಿ ಕೊನೆಯ ಘಳಿಗೆಯವರೆಗೂ ಬೈಕ್ ಮಾಲೀಕ ಅಶ್ವಿನ್ ಎಸ್ ಮೆನನ್ ಅವರಿಗೆ ಬೈಕ್ ಖರೀದಿಸುತ್ತಿರುವುದು ಇಂಡಿಯಾ ಟೀಂ ಕ್ಯಾಪ್ಟನ್ ಅಂತ ಗೊತ್ತಾಗಿಲ್ಲ ಎಂಬುದೇ ಇಲ್ಲಿನ ಸ್ವಾರಸ್ಯ. (ಇ ಕಾಮರ್ಸ್)

Mahendra Singh Dhoni buys Yamaha RD 350 from Thrissur for Rs two lakhs


ಎರ್ನಾಕುಳಂನಲ್ಲಿ ಕ್ಯಾಮರಾ ಮಾರಾಟ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅಶ್ವಿನ್, 2010ರಲ್ಲಿ ಹೈದರಾಬಾದಿನಿಂದ ಒಂದೂವರೆ ಲಕ್ಷ ರೂ. ಗೆ ಈ ಬೈಕನ್ನು ಖರೀದಿಸಿದ್ದರಂತೆ! ಅದಿನ್ನೂ ಆಂಧ್ರ ರಿಜಿಸ್ಟ್ರೇಶನ್ (ಎಪಿ 10 ಎಎಂ 1479) ನಲ್ಲಿಯೇ ಇದೆ.

ಏನಾಯಿತೆಂದರೆ ಆನ್‌ ಲೈನ್‌ ನಲ್ಲಿ ಬೈಕನ್ನು ನೋಡಿದ ಧೋನಿಗೆ ಅದನ್ನು ಖರೀದಿಸುವಷ್ಟು ಇಷ್ಟವಾಗಿದೆ. ತಡಮಾಡದೆ ತಮ್ಮ ಏಜೆಂಟ್ ಸಂಜಯ್ ಪಾಂಡೆ ಮೂಲಕ ಅಶ್ವಿನ್‌ ಗೆ ಕರೆ ಮಾಡಿ, ವ್ಯವಹಾರ ಕುದುರಿಸಿದ್ದಾರೆ.

2 ಲಕ್ಷ ರೂ. ಗೆ ಸೆಟ್ಲ್ ಆದಮೇಲೆ ಬೈಕನ್ನು ಎಲ್ಲಿಗೆ ಕಳುಹಿಸಬೇಕು ಎಂದು ವಿಳಾಸವನ್ನು ಕೇಳಿದಾಗ ಅದು ರಾಂಚಿ ಅಡ್ರೆಸ್ ಗೆ ತಲುಪುತ್ತಿದೆ ಎಂಬುದು ಅಶ್ವಿನ್‌ ಅರಿವಿಗೆ ಬಂದಿದೆ. ತಕ್ಷಣ, ಇದು ನಮ್ಮ ಇಂಡಿಯನ್ ಕ್ರಿಕೆಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಊರಲ್ಲವೇ? ಎಂದು ಸಂಜಯ್ ಪಾಂಡೆಯನ್ನು ಕೇಳಲಾಗಿ ಆತ, ಯಸ್. ಈ ಬೈಕನ್ನು ಕ್ಯಾಪ್ಟನ್‌ ಧೋನಿಗಾಗಿಯೇ ಖರೀದಿಸಿದ್ದು ಎಂದು ಹೇಳಿದರಂತೆ.

ಪಾಂಡೆ ಮಾತಿನ ಮೇಲೆ ಅಶ್ವಿನ್‌ ಗೆ ಆಗಲೂ ನಂಬಿಕೆ ಬಂದಿಲ್ಲ. ಪಾಂಡೆ ತಮಾಷೆ ಮಾಡ್ತಿದ್ದಾರೆ ಎಂದೇ ಅಶ್ವಿನ್ ಭಾವಿಸಿದ್ದರು. ಆದರೆ 'ನಿಮ್ಮ ಖಾತೆಗೆ ಕ್ಯಾಪ್ಟನ್‌ ಧೋನಿ ಬ್ಯಾಂಕ್ ಖಾತೆಯಿಂದ ಹಣ ವರ್ಗವಾಗಲಿದೆ. ಆಗ ನಿಮಗೆ ಸತ್ಯ ಗೊತ್ತಾಗಲಿದೆ' ಎಂದು ಪಾಂಡೆ ಹೇಳಿದ್ದಾರೆ. ಅದರಂತೆ ಅಶ್ವಿನ್‌ನ ಖಾತೆಗೆ ಕಳೆದ ಶುಕ್ರವಾರ ಎಂಎಸ್ ಧೋನಿ ಹೆಸರಿನ ಖಾತೆಯಿಂದ ಎರಡು ಲಕ್ಷ ರೂ. ಜಮಾ ಆಗಿದೆ.

ಅಂದಹಾಗೆ ಯಮಾಹಾ ಆರ್‌ಡಿ 350 ಬೈಕ್‌ ಧೋನಿ ತಮ್ಮ ಜೀವನದಲ್ಲಿ ಖರೀದಿಸಿದ ಮೊದಲ ಬೈಕ್‌. ಕ್ರಿಕೆಟ್ ಮೈದಾನಕ್ಕೆ ಪ್ರಾಕ್ಟೀಸ್ ಮಾಡಲು ಅವರು ಅದೇ ಬೈಕಿನಲ್ಲಿ ತೆರಳುತ್ತಿದ್ದರಂತೆ. ಹಾಗಾಗಿ ಯಮಾಹಾ ಆರ್‌ಡಿ 350 ಬೈಕ್‌ ಮೇಲೆ ಧೋನಿಗೆ ವಿಶೇಷ ವ್ಯಾಮೋಹ. ಧೋನಿಯ ಬಳಿ 30 ಕ್ಕೂ ಹೆಚ್ಚು ಯಮಾಹಾ ಬೈಕುಗಳ ಸಂಗ್ರಹವಿದೆ ಎನ್ನುತ್ತಾರೆ ಧೋನಿ ಏಜೆಂಟ್ ಸಂಜಯ್.

English summary
Mahendra Singh Dhoni who has a penchant for bikes buys a 1985 model Yamaha RD 350 from Thrissur for Rs two lakhs from Ashwin S Menon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X