ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ಮೋದಿಯ ಮದ್ವೆ ಬಗ್ಗೆ ಅಣ್ಣ ಸೋಮಭಾಯ್ ವಿವರಣೆ

By Srinath
|
Google Oneindia Kannada News

ವಡೋದರಾ, ಏ.10: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಡೋದರಾದಲ್ಲಿ ನಿನ್ನೆ ಸಲ್ಲಿಸಿದ್ದ ನಾಮಪತ್ರದಲ್ಲಿ 'ತಾನು ಮದುವೆಯಾಗಿದ್ದು, ಪತ್ನಿಯ ಹೆಸರು ಜಶೋದಾಬೆನ್' ಎಂದು ಘೋಷಿಸಿದ್ದರು. ಆ ಬಗ್ಗೆ ಇಂದು ಬೆಳಗ್ಗೆಯಿಂದ ವ್ಯಾಪಕ ಚರ್ಚೆ/ಟೀಕೆಗಳೂ ಕೇಳಿಬಂದಿದ್ದವು.

ಈ ಮಧ್ಯೆ, ನರೇಂದ್ರ ಮೋದಿ ಅವರ ಅಣ್ಣ ಸೋಮಭಾಯ್ ದಾಮೋದರದಾಸ್ ಮೋದಿ ಅವರು ಜಶೋದಾಬೆನ್ ಜತೆಗಿನ ವಿವಾಹದ ಬಗ್ಗೆ ಸ್ಪಷ್ಡನೆ ನೀಡಿದ್ದಾರೆ:

modi-married-to-jashodaben-brother-somabhai-issues-clarification
ನನ್ನ ತಮ್ಮ ನರೇಂದ್ರ ಮೋದಿ, ಜಶೋದಾಬೆನ್ ಅವರ ಜತೆ ಮದುವೆ ಆಗಿರೋದು ನಿಜ. 45 ವರ್ಷಗಳ ಹಿಂದೆ ಆಗಿರುವ ಮದುವೆ ಅದು. ಆಗ ಅವರಿಬ್ಬರೂ ಅಪ್ರಾಪ್ತ ವಯಸ್ಸಿನವರು. 17 ವರ್ಷದ ಹುಡುಗನಾಗಿದ್ದ ಮೋದಿಗೆ ನಮ್ಮ ಅವಿದ್ಯಾವಂತ ಮತ್ತು ಬಡ ಕುಟುಂಬದ ಹಿರಿಯರು ಮದುವೆ ಮಾಡಿದ್ದರು.

'ಕಾಲಾಂತರದಲ್ಲಿ ಮೋದಿ ದೇಶ ಸೇವೆಗಾಗಿ ತಮ್ಮ ಕುಟುಂಬವನ್ನೇ ಬಿಟ್ಟು ಬಂದರು. ಈ 40-45 ವರ್ಷಗಳಲ್ಲಿ ನನ್ನ ತಮ್ಮ ಪರಿವಾರದಿಂದ ಅಲಿಪ್ತನಾಗಿ ಉಳಿದುಬಿಟ್ಟ. ಆಕೆ ಜಶೋದಾಬೆನ್ ಅವರು ತಮ್ಮ ತಂದೆಯ ಮನೆಯಲ್ಲಿದ್ದುಕೊಂಡು, ಶಿಕ್ಷಣ ಪಡೆದು, ಶಿಕ್ಷಕಿಯಾಗಿ ಜೀವನ ರೂಪಿಸಿಕೊಂಡರು. ಈಗ ಮೋದಿ ಮಾಡಿದ್ದು ಸರಿಯೇ, ತಪ್ಪೇ? ಎನ್ನುವುದರ ಬಗ್ಗೆ ದೇಶದ ಜನರೇ ನಿರ್ಧರಿಸಲಿ' ಎಂದೂ ಸೋಮಭಾಯ್ ಮೋದಿ ಹೇಳಿದ್ದಾರೆ.

ಮೋದಿ ಒಬ್ಬ ಸನ್ಯಾಸಿ; ಪೂಜನೀಯ: ಈ ಮಧ್ಯೆ, 'ನರೇಂದ್ರ ಮೋದಿ ಅವರು ಒಬ್ಬ ಸನ್ಯಾಸಿ. ಜೀವನದುದ್ದಕ್ಕೂ ಅವರು ಬ್ರಹ್ಮಚರ್ಯ ಪಾಲಿಸಿಕೊಂಡು ಬಂದಿದ್ದಾರೆ. ಅವರ ಪೂಜೆ ಮಾಡಬೇಕು' ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

English summary
Lok Sabha polls 2014 - BJP Prime Minister candidate Narendra Modi declared he is married to Jashodaben. In an affidavit submitted along with his nomination papers filed Wednesday for Vadodara Lok Sabha seat, Bharatiya Janata Party's prime ministerial nominee Narendra Modi declared himself as a married man and revealed that his wife's name is Jashodaben. Somabhai Damodardas Modi has issued a clarification on his marriage saying Modi was married to Jashodaben over 45 years back when he was a minor and the family was poor and uneducated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X