ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಲೆಂಜ್! ಈ ಮೂರೂ ಗ್ರಾಮಗಳಲ್ಲಿ ಮೋದಿಗೇ ಮತ

By Srinath
|
Google Oneindia Kannada News

ಅಹಮದಾಬಾದ್, ಏ. 29: ಹಾಲಿ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ದೇಶದಾದ್ಯಂತ ಬಿಜೆಪಿಯ ದಿಗ್ವಿಜಯಕ್ಕೆ ಹರಸಾಹಸ ಪಡುತ್ತಿದ್ದಾರೆ. ನಾಳೆ ಬುಧವಾರ ಗುಜರಾತಿನಲ್ಲಿ ನಡೆಯುವ ಚುನಾವಣೆ ಮೋದಿಗೆ ಮಹತ್ವದ್ದಾಗಿದೆ. ಸ್ವಂತ ರಾಜ್ಯದಲ್ಲಿ ತಮ್ಮ ಬಲ ಪರೀಕ್ಷೆಗೆ ಇಳಿಯಲಿದ್ದಾರೆ. ಅವರದೇ ನಾಡಿನಲ್ಲಿ ಮತಬೇಟೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ...

ಗುಜರಾತಿನಲ್ಲಿ ರಾಜ್​ ಸಮಧಿಯಲಾ, ವಲ್ಲಿ ಹಾಗೂ ವಾಲಸ್​ಪುರ ಹೆಸರಿನ ಮೂರು ಗ್ರಾಮಗಳಿವೆ. ಇಲ್ಲಿ ಪ್ರತಿಬಾರಿಯೂ ನೂರಕ್ಕೆ ನೂರು ಮತದಾನವಾಗುತ್ತದೆ.

modi-get-total-support-from-raj-samadhiyala-valli-wallacepur-villagers

ರಾಜ್​ ಸಮಧಿಯಲಾದಲ್ಲಿ (Raj Samadhiyala) 960ಕ್ಕೂ ಹೆಚ್ಚು ಮತದಾರರಿದ್ದು, ಅವರೆಲ್ಲಾ ಏಪ್ರಿಲ್​ 30 ನಡೆಯುವ ಮತದಾನದಲ್ಲಿ ದಾಖಲೆ ನಿರ್ಮಿಸಲಿದ್ದಾರೆ. ಜ್ಞಾಪಕಾ ಬಂತಾ, ಏಲ್ಲೋ ಓದಿದ ನೆನಪು. ಗುಜರಾತಿನ ಸೌರಾಷ್ಟ್ರ ಭಾಗದಲ್ಲಿ ರಾಜ್​ ಸಮಧಿಯಲಾ ಅಂತ ಒಂದು ಗ್ರಾಮವಿದೆ. ಇಲ್ಲಿ ಗ್ರಾಮಸ್ಥರು ಯಾವುದೇ ಮನೆಗೂ ಬೀಗವನ್ನೇ ಹಾಕುವುದಿಲ್ಲ. ಏಕೆಂದರೆ ಇ್ಲಲಿ ಕಳ್ಳತನವೇ ನಡೆಯುವುದಿಲ್ಲ.

Teetotalism: ಏಕೆಂದರೆ ಅಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಇಲ್ಲವಾದಲ್ಲಿ ಇಲ್ಲಿನ ಪಂಚಾಯತ್​ 500 ರೂಪಾಯಿ ದಂಡ ವಿಧಿಸುತ್ತದೆ. ಇಲ್ಲಿನ ಜನರಿಗೆ ಮೋದಿ ಬಗ್ಗೆ ಅಷ್ಟೊಂದು ಒಲವಿದೆ. ಮೋದಿ ಗುಟ್ಕಾ ನಿಷೇಧ ಮಾಡಿದ್ದಾರೆ, ಅದಕ್ಕೆ ನಮ್ಮ ಮತ ಅವರಿಗೇ ಅನ್ನುತ್ತಾರೆ ಗ್ರಾಮಸ್ಥರು. ಈ ಹಳ್ಳಿಯಲ್ಲಿರುವ 1,700 ಜನರಲ್ಲಿ ಯಾರೊಬ್ಬರೂ ಮದ್ಯ ಸೇವನೆಯಾಗಲಿ, ಸಿಗರೇಟು ಸೇವನೆಯಾಗಲಿ ಅಥವಾ ತಂಬಾಕು ಅಗೆಯುವುದನ್ನಾಗಲಿ ಮಾಡುವುದಿಲ್ಲ.

ಈ ಹಳ್ಳಿಯು 15 ವರ್ಷಗಳ ಹಿಂದೆ ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಾ ಇತ್ತು. ಆದರೆ ಅಂದಿನ ಸರಪಂಚ್​ ಹರದೇವ್ ಸಿಂಗ್ ​ಜಿ ಜಡೆಜಾ (Hardevsinhji Jadeja) ಅವರ ಪರಿಶ್ರಮದಿಂದ ಹಳ್ಳಿ ಪ್ರಗತಿಯತ್ತ ಮುಖಮಾಡಿತು. ಅವತ್ತಿನಿಂದ ಇಲ್ಲಿಯ ಜನರು ಮತದಾನದ ತಮ್ಮ ಹಕ್ಕನ್ನು ಕರ್ತವ್ಯದಂತೆ ಪಾಲಿಸಿಕೊಂಡು ಬಂದಿದ್ದಾರೆ.

ಮತದಾನ ಮಾಡಲು ಈಜಿಕೊಂಡು ಬರುವ Valli ಗ್ರಾಮಸ್ಥರು: ಗುಜರಾತಿನ ಆನಂದ್ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರದಿಂದ 40 ಕಿಮೀ ದೂರದಲ್ಲಿರುವ ವಲ್ಲಿ (Valli) ಎಂಬ ಗ್ರಾಮವು ಸುತ್ತಲೂ ನೀರಿನಿಂದ ಆವೃತವಾಗಿದೆ. ಮೊಬೈಲಿಗೆ ರಿಚಾರ್ಜ್​ ಮಾಡ್ಬೇಕು ಅಂದ್ರೆ 20 ನಿಮಿಷ ದೋಣಿಯಲ್ಲಿ ಪ್ರಯಾಣ ಮಾಡಿ ಸಮೀಪದ ನಗರಕ್ಕೆ ಹೋಗಿಬರಬೇಕು. ಗ್ರಾಮದಲ್ಲಿ ಕನಿಷ್ಟ ವಿದ್ಯುತ್​ ಸೌಲಭ್ಯವೂ ಇಲ್ಲಿಲ್ಲ.

ಆದರೆ ಇಲ್ಲಿನ ಜನರು ಕಳೆದ ನಾಲ್ಕು ವರ್ಷದಿಂದ ನೂರಕ್ಕೆ ನೂರರಷ್ಟು ಮತ ಚಲಾವಣೆ ಮಾಡುತ್ತಿದ್ದಾರೆ. ಮತದಾನದ ದಿನ Kanewal ಸರೋವರದಲ್ಲಿ ಈಜಿಕೊಂಡು ಸಮೀಪದ ಮತಗಟ್ಟೆಗೆ ತೆರಳುತ್ತಾರೆ. ಮತದಾನ ಮಾಡದಿದ್ದರೆ ನಿಮಗೆ ದೂಷಿಸುವ ಹಕ್ಕು ಇರುವುದಿಲ್ಲ ಎಂಬುದು ಇಲ್ಲಿನ ಹಿರಿಯರ ಮಾತು.

ಸಂಪೂರ್ಣ ಕ್ರಿಶ್ಚಿಯನ್​ ಹಳ್ಳಿ Wallacepur: ಸೌರಾಷ್ಟ್ರ ಭಾಗದ ಭಾವ್ ನಗರ ಜಿಲ್ಲೆಯಲ್ಲಿರುವ ಕುಗ್ರಾಮ ವಾಲಸ್​ಪುರ (Wallacepur). ಇದು ಸಂಪೂರ್ಣವಾಗಿ ಕ್ರಿಶ್ಚಿಯನ್ನರಿಂದ ಕೂಡಿದ ಹಳ್ಳಿ. ಪ್ರತಿಬಾರಿಯೂ ನೂರು ಪ್ರತಿಶತ (en bloc) ಮತದಾನ ದಾಖಲಿಸುವ ಈ ಹಳ್ಳಿಯು ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಆದರೆ ಕ್ರಮೇಣ ಬಿಜೆಪಿಯ ಕಡೆಗೆ ವಾಲಿದೆ. ಕಳೆದ 5 ಬಾರಿಯಿಂದಲೂ ಬಿಜೆಪಿಯ ರಾಜೇಂದ್ರ ಸಿನ್ಹಾ ರಾಣಾ ಭಾವ್ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹಾಗಾಗಿ ಇದು ಬಿಜೆಪಿಯ ಭದ್ರ ನೆಲೆಯಾಗಿದೆ.

1840ರಲ್ಲಿ ಬ್ರಿಟನ್ನಿನ ಪಾದ್ರಿ ರೆವರೆಂಡ್ ವಾಲಸ್ ಎಂಬುವವರು ಈ ಗ್ರಾಮವನ್ನು ರಚಿಸಿದರೆಂದೂ ಅವರ ಸ್ಮರಣೆಯಲ್ಲಿ ಈ ಗ್ರಾಮಕ್ಕೆ ವಾಲಸ್​ಪುರ ಹೆಸರು ಬಂತೆಂದೂ ಪ್ರತೀತಿಯಿದೆ. 1871ರಲ್ಲಿ ಪಾದ್ರಿ ವಾಲಸ್ ನೇತೃತ್ವದಲ್ಲಿ ನಿರ್ಮಿತವಾದ ಬೃಹದಾದ ಚರ್ಚೊಂದು ಇಲ್ಲಿದೆ.

English summary
Lok Sabha polls 2014 - Narendra Modi to get total support from Raj Samadhiyala Valli Wallacepur villagers. How everyone votes in these three villages in Gujarat maintain a perfect turnout. read out here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X