ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲ್ ಬೀರ್ ಸಿಂಗ್ ಸುಹಾಗ್ ಹೊಸ ಭೂಸೇನಾ ಮುಖ್ಯಸ್ಥ

By Mahesh
|
Google Oneindia Kannada News

ನವದೆಹಲಿ, ಜು.31: ಭಾರತೀಯ ಭೂಸೇನೆ ಪಡೆಯ 26ನೇ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ದಲ್‌ಬೀರ್ ಸಿಂಗ್‌ ಸುಹಾಗ್ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಸುಬೇದಾರ್ (ಪದಾತಿ) ಪುತ್ರನೊಬ್ಬ ದೇಶದ ಸೈನ್ಯವನ್ನು ಮುನ್ನಡೆಸುವ ಹೊಣೆ ಹೊತ್ತಿರುವ ಐತಿಹಾಸಿಕ ದಿನ ಇದಾಗಿದೆ.

ಹಾಲಿ ಸೇನಾಪಡೆ ಮುಖ್ಯಸ್ಥರಾಗಿದ್ದ ಜನರಲ್ ಬಿಕ್ರಮ್‌ಸಿಂಗ್ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಪಸೇನಾ ಮುಖ್ಯಸ್ಥ ದಲ್‌ಬೀರ್ ಸಿಂಗ್ ಸುಹಾಗ್‌ಗೆ ಅಧಿಕಾರ ಹಸ್ತಾಂತರ ಮಾಡಿದರು. ಭಾರತದ 26ನೇ ಸೇನಾ ಮುಖ್ಯಸ್ಥರಾಗಿರುವ ಸುಹಾಗ್ ಅವರು ಈ ಹಿಂದೆ ಅನೇಕ ಕಠಿಣ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು.

59 ವರ್ಷದ ಸುಹಾಗ್ ಅವರು 1987ರಲ್ಲಿ ಶ್ರೀಲಂಕಾದಲ್ಲಿ ನಡೆದ ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆ IPKFನಲ್ಲಿ ಪಾಲ್ಗೊಂಡು ಪ್ರಶಂಸೆಗೆ ಪಾತ್ರರಾಗಿದ್ದರು. ಸುಮಾರು 1.3 ಮಿಲಿಯನ್ ಸೇನಾ ಪಡೆಯನ್ನು ಹೊಂದಿರುವ ಭಾರತದ ಸೇನಾ ಪಡೆಯ ಮುಖ್ಯಸ್ಥರಾಗಿ ನೇಮಕವಾಗಿರುವುದು ಅವರ ಕರ್ತವ್ಯನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ 30 ತಿಂಗಳುಗಳ ಕಾಲ ಅವರು ಅಧಿಕಾರದಲ್ಲಿರುತ್ತಾರೆ.[ಭಾರತದ ಸೇನಾ ಮುಖ್ಯಸ್ಥರ ಆಯ್ಕೆ ವಿವಾದ]

ಕಳೆದ ಮೇ ತಿಂಗಳಿನಲ್ಲಿ ಯುಪಿಎ ಸರ್ಕಾರ ಇವರನ್ನೇ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಆದರೆ ಇದನ್ನು ವಿವಾದಕ್ಕೆ ತಿರುಗಿದ್ದರಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್ ಷಾ ನಂತರ ಗೋರ್ಖಾ ರೈಫಲ್ಸ್ ಪಡೆಯಿಂದ ಆರ್ಮಿ ಮುಖ್ಯಸ್ಥನ ಸ್ಥಾನಕ್ಕೇರಿದ ಕೀರ್ತಿ ಸುಹಾಗ್ ಅವರಿಗೆ ಸಲ್ಲುತ್ತದೆ. ಸುಹಾಗ್ ಸೋದರ ಹಾಗೂ ಅವರ ಕುಟುಂಬದ ಅನೇಕ ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸುಬೇದಾರ್ ಪುತ್ರ ಈಗ ಭೂಸೇನಾ ಮುಖ್ಯಸ್ಥ

ಸುಬೇದಾರ್ ಪುತ್ರ ಈಗ ಭೂಸೇನಾ ಮುಖ್ಯಸ್ಥ

ಸೇನೆಯಲ್ಲಿ Cavalry ರೆಜಿಮೆಂಟಿನ ಮುಖ್ಯ ಸುಬೇದಾರ್ ಆಗಿ ನಿವೃತ್ತಿ ಹೊಂದಿದ ರಾಮ್ ಪಾಲ್ ಸಿಂಗ್ ಸುಹಾಗ್ ಅವರು ಹೊಸ ಭೂಸೇನಾ ಮುಖ್ಯಸ್ಥ ದಲ್ ಬೀರ್ ಅವರ ತಂದೆ.

ದೇಶ ಸೇವೆಗೆ ಮುಡಿಪಾದ ಕುಟುಂಬ

ದೇಶ ಸೇವೆಗೆ ಮುಡಿಪಾದ ಕುಟುಂಬ

ಸುಹಾಗ್ ಕುಟುಂಬ ಈ ಹಿಂದೆ ಕೂಡಾ ಜ್ಯೂನಿಯರ್ ಶ್ರೇಣಿಯ ಅಧಿಕಾರಿಗಳನ್ನು ಕಂಡಿದೆ. ದಲ್ ಬೀರ್ ಅವರು ದೆಹಲಿ ವಿವಿಯಲ್ಲಿ ರಾಜ್ಯಶಾಸ್ತ್ರ ಓದಿರುವ ನಮಿತಾ ಅವರನ್ನು ವರಿಸಿದ್ದಾರೆ.

ಜಾತ್ ಕುಟುಂಬದಿಂದ ಬಂದಿರುವ ಸುಹಾಗ್

ಜಾತ್ ಕುಟುಂಬದಿಂದ ಬಂದಿರುವ ಸುಹಾಗ್

ಹರ್ಯಾಣದ ಜಜ್ ಹಾರ್ ಜಿಲ್ಲೆಯ ಬಿಷನ್ ಗ್ರಾಮದ ಜಾತ್ ಕುಟುಂಬದಿಂದ ಸುಹಾಗ್ ಬಂದವರಾಗಿದ್ದಾರೆ.

ಆರ್ಮಿ ಸ್ಕೂಲ್ ನಲ್ಲಿ ಶಿಕ್ಷಣ

ಆರ್ಮಿ ಸ್ಕೂಲ್ ನಲ್ಲಿ ಶಿಕ್ಷಣ

ಬಿಷನ್ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದುಕೊಂಡ ಸುಹಾಗ್ ಅವರು ರಾಜಸ್ಥಾನದ ಚಿತ್ತೋರ್ ಘರ್ ಜಿಲ್ಲೆಯ ಆರ್ಮಿ ಸ್ಕೂಲ್ ನಲ್ಲಿ ನಂತರ ವಿದ್ಯಾಭ್ಯಾಸ ಮುಂದುವರೆಸಿದರು.

ಡಿಫೆನ್ಸ್ ಅಕಾಡೆಮಿಯ ಸದಸ್ಯರಾದರು

ಡಿಫೆನ್ಸ್ ಅಕಾಡೆಮಿಯ ಸದಸ್ಯರಾದರು

1970ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದರು. 1974ರಲ್ಲಿ 5 ಗೋರ್ಖಾ ರೈಫಲ್ಸ್ ನ 5ನೇ ಬೆಟಾಲಿಯನ್ ನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ದಲ್ ಬೀರ್ ಸಿಂಗ್ ಪ್ರಮುಖ ಸಾಧನೆಗಳು

ದಲ್ ಬೀರ್ ಸಿಂಗ್ ಪ್ರಮುಖ ಸಾಧನೆಗಳು

ಸುಹಾಗ್ ಅವರು ಶ್ರೀಲಂಕಾದಲ್ಲಿ ನಡೆದ ಆಪರೇಷನ್ ಪವನ್ ನ ಕಂಪನಿ ಕಮ್ಯಾಂಡರ್ ಅಗಿದ್ದರು. 53 ಇನ್ಫ್ರಾಂಟ್ರಿ ಬ್ರಿಗೇಡ್ ಮುನ್ನಡೆಸಿದ್ದರು.

ಶ್ರಮ ಜೀವಿ, ಖಡಕ್ ಅಧಿಕಾರಿ ಸುಹಾಗ್

ಶ್ರಮ ಜೀವಿ, ಖಡಕ್ ಅಧಿಕಾರಿ ಸುಹಾಗ್

ಸುಹಾಗ್ ಅವರು ದೈಹಿಕ ಕ್ಷಮತೆ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಾರೆ. ಪ್ರತಿ ನಿತ್ಯ ತಪ್ಪದೇ 10 ಕಿ.ಮೀ ಓಡುತ್ತಾರೆ. ಬಿಡುವಿದ್ದಾಗ ಗಾಲ್ಫ್ ಆಡುತ್ತಾರೆ. 6 ಅಡಿ 1 ಇಂಚಿರುವ ಸುಹಾಗ್ ಅವರ ತೂಕ 75 ಕೆಜಿ.

ದೇಶಿ ತುಪ್ಪ, ಮನೆಯಲ್ಲಿ ಮಾಡಿದ ಅಡುಗೆ ಇಷ್ಟಪಡುತ್ತಾನೆ ಎಂದು ಸುಹಾಗ್ ಅವರ ತಾಯಿ ಇಶ್ರಿ ದೇವಿ ಹೇಳಿದ್ದಾರೆ.

English summary
Lt. Gen Dalbir Singh Suhag, whose appointment as Army Chief had kicked up a row, on Thursday took over as the head of the 1.3 million strong force succeeding Gen Bikram Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X