ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.29: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಮೇ.29: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.45 : ಬಹುಕೋಟಿ ಶಾರದಾ ಚಿಟ್ ಫಂಟ್ ವಂಚನೆ ಪ್ರಕರಣದ ಆರೋಪಿ ಸುದಿಪ್ತ ಸೇನ್ ಹಾಗೂ ಅವರ ಮಗನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
6.30: ರಾಜಸ್ಥಾನ ಅಸೆಂಬ್ಲಿಯಿಂದ ನಾಲ್ವರು ಬಿಜೆಪಿ ಶಾಸಕರು ರಾಜೀನಾಮೆ ನೀಡಿದ್ದಾರೆ.
6.15: ನೈಜಿರಿಯಾದ ಬೊಕೊ ಹರಾಮ್ ಅವರು ನಾಲ್ವರು ಹುಡುಗಿಯರನ್ನು ಬಿಡುಗಡೆಗೊಳಿಸಿದ್ದಾರೆ.
5.30: ಏರ್ ಏಷ್ಯಾ ಇಂಡಿಯಾ ಜೂ .12ರಿಂದ ತನ್ನ ಯಾನ ಆರಂಭಿಸಲಿದ್ದು, ಟಿಕೆಟ್ ಮಾರಾಟ ಮೇ.30 ರಿಂದ ಅರಂಭಗೊಳ್ಳಲಿದೆ.
5.00: ಜಲಗಾಂವ್ ನ ರೈಲಿನಿಂದ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನು ಚಲಿಸುವ ರೈಲಿನಿಂದ ದೂಡಿದ ಟಿಕೆಟ್ ಕಲೆಕ್ಟರ್, ಮಹಿಳೆ ಮೃತಪಟ್ಟಿದ್ದು, ಟಿಸಿಯನ್ನು ಬಂಧಿಸಲಾಗಿದೆ.
4.00 : ಕೋಮು ಭಾವನೆ ಕೆರಳಿಸಿದ ಭಾಷಣ ಆರೋಪದ ಮೇಲೆ ಪ್ರಮೋದ್ ಮುತಾಲಿಕ್ ಅವರ ಮೇಲೆ ಗೋವಾದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
2.30: ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಲಿ ಕೆಗ್ಯೂಯಾಂಗ್ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.


12.40 : ಸೂರತ್ ನ ಸಹಾರ ದರ್ವಾಜಾ ಪ್ರದೇಶದ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 10 ಅಗ್ನಿ ಶಾಮಕದಳಗಳು 100ಕ್ಕೂ ಅಧಿಕ ಮಳಿಗೆಗೆ ತಗುಲಿರುವ ಬೆಂಕಿ ನಂದಿಸುತ್ತಿದ್ದಾರೆ.

11.05: ಮೋದಿ ಸಚಿವ ಸಂಪುಟದ ಎರಡನೇ ಸಭೆ ಗುರುವಾರ ನಡೆಯಲಿದ್ದು, ಮುರಳಿ ಮನೋಹರ್ ಜೋಶಿ ಅವರಿಗೆ ರಕ್ಷಣಾ ಖಾತೆ ನೀಡುವ ಸಾಧ್ಯತೆ ಹೆಚ್ಚಿದೆ.

News in brief on May 29

10.45: ಉತ್ತರಪ್ರದೇಶದ ಗ್ಯಾಂಗ್ ರೇಪ್, ಕೊಲೆ ಪ್ರಕರಣದಲ್ಲಿ ಒಬ್ಬ ಕಾನ್ಸ್ ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
10.30: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಸೀಟು ಉಳಿಸಿಕೊಂಡು ವಡೋದರಾ ಸಂಸತ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
10.15: ಪ್ರಕಾಶ್ ಜಾವಡೇಕರ್ ಅವರು ಪರಿಸರ ಖಾತೆ ಸಚಿವರಾಗಿ ಪ್ರಮಾಣ ವಚನರಾಗಿದ್ದಾರೆ.
News in brief on May 29

10.00 : ಜಪಾನ್ ಓಪನ್ ಟೂರ್ನಿಯಿಂದ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಿಂದೆ ಸರಿದಿದ್ದಾರೆ.
9.45 : ನಾಗರಿಕ ವಿಮಾನಯಾನ ಸಚಿವರಾಗಿ ಅಶೋಕ್ ಗಣಪತಿ ರಾಜು ಹಾಗೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ನಿತಿನ್ ಗಡ್ಕರಿ ಅಧಿಕಾರ ಸ್ವೀಕಾರ
9.40 : ಯುಎಸ್ ಪ್ರಧಾನ ಕಾರ್ಯದರ್ಶಿ ಜಾನ್ ಕೆರಿ ಅವರು ಸುಷ್ಮಾ ಸ್ವರಾಜ್ ಅವರಿಗೆ ಅಭಿನಂದನೆ ಸಲ್ಲಿಸಿ ಉಭಯ ದೇಶಗಳ ಜತೆ ಮಾತುಕತೆಗೆ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ.
9.30: ತೆಲಂಗಾಣದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪೊಲಾವರಂ ಯೋಜನೆ ಅನುಷ್ಠಾನದ ವಿರುದ್ಧ ಕೆಸಿಆರ್ ಅವರು ಬಂದ್ ಗೆ ಕರೆ ನೀಡಿದ್ದರು.
9.00: ಜಂಟಿ ಕಾರ್ಯಾಚರಣೆಯೊಂದರಲ್ಲಿ ಅಸ್ಸಾಂ ರೈಫ‌ಲ್ಸ್‌ ಮತ್ತು ಪೊಲೀಸ್‌ ಸಿಬಂದಿಗಳು ಬವಾಂಗ್‌ಕಾನ್‌ ಪ್ರದೇಶದಲ್ಲಿ 40,000 ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸ್ಫೋಟಕಗಳನ್ನು ಮ್ಯಾನ್‌ಮಾರ್‌ನಿಂದ ಕಳ್ಳಸಾಗಣೆ ಮಾಡಿ ತರಲಾಗಿದೆ.
English summary
Top news in brief for the day: MM Joshi may get Defence Ministry, Narendra Modi Cabinet to meet today.Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X