ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಆನ್ಲೈನ್ ವಿವಾಹ ನೋಂದಣಿಗೆ ಹೆಲ್ಪ್ ಲೈನ್

By Mahesh
|
Google Oneindia Kannada News

ನವದೆಹಲಿ, ಆ.17- ನೂತನ ದಾಂಪತ್ಯಕ್ಕೆ ಕಾಲಿಡುವ ನವ ಜೋಡಿಗಳು ಇನ್ನು ಮುಂದೆ ಕಡ್ಡಾಯವಾಗಿ ವಿವಾಹವನ್ನು ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ಸರ್ಕಾರಿ ನಿಯಮ ಎಲ್ಲರಿಗೂ ತಿಳಿದೇ ಇದೆ. ತಿಳಿದಿಲ್ಲವೆಂದರೂ ಚಿಂತೆಯಿಲ್ಲ, ಈ ಯೋಜನೆ ಜಾರಿ ಇನ್ನೂ ಎರಡು ತಿಂಗಳು ಹಿಡಿಯಲಿದೆ. ಅಷ್ಟರಲ್ಲಿ ಆನ್ ಲೈನ್ ನಲ್ಲಿ ಪಾಸ್ ಪೋರ್ಟ್ ಅರ್ಜಿ ಹಾಕಿ ಪಡೆಯುವ ಮಾದರಿಯಲ್ಲೇ ವಿವಾಹ ನೋಂದಣಿಯನ್ನು ಮಾಡಿಕೊಳ್ಳಬಹುದು.

ಮದುವೆಯಾದ 60 ದಿನದೊಳಗೆ ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಇನ್ನೆರಡು ತಿಂಗಳೊಳಗೆ ಜಾರಿಗೆ ಬರಲಿದೆ. ಈ ಬಗ್ಗೆ ಸಹಾಯವಾಣಿ ಕೂಡಾ ಆರಂಭಿಸುವ ಚಿಂತನೆ ನಡೆದಿದೆ.[ನೋಟರಿಗಳು ವಿವಾಹ ಪ್ರಮಾಣ ಪತ್ರ ನೀಡುವಂತಿಲ್ಲ]

ಇನ್ನು ಮುಂದೆ ಮದುವೆಯಾಗುವವರು ಕಡ್ಡಾಯವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ದೇಶಾದ್ಯಂತ ಈ ವ್ಯವಸ್ಥೆ ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಜಾರಿಯಾಗುವ ಸಾಧ್ಯತೆಯಿದೆ.

ಆನ್ ಲೈನ್ ನಲ್ಲಿ ವಿವಾಹ ನೋಂದಣಿ ಅರ್ಜಿ ಪ್ರಕ್ರಿಯೆ ಪಾಸ್ ಪೋರ್ಟ್ ಪಡೆಯುವ ಮಾದರಿಯಲ್ಲೇ ಇರಲಿದೆ. ಅರ್ಜಿ ಹಾಕಿದ ಮೇಲೆ ದಂಪತಿಗಳು ನೋಂದಣಾಧಿಕಾರಿಗಳು ಸೂಚಿಸಿದ ಸಂದರ್ಶನ ದಿನಾಂಕದಂದು ರಿಜಿಸ್ಟ್ರೇಷನ್ ಕಚೇರಿಗೆ ಬಂದು ಪ್ರಕ್ರಿಯೆ ಪೂರ್ಣಗೊಳಿಸಬಹುದು.

Marriage registrations to go online from next month

ವೆಬ್ ತಾಣ ಇನ್ನೂ ಬಹಿರಂಗವಾಗಿಲ್ಲ: ವೆಬ್ ತಾಣ ನಿರ್ಮಾಣ ಕಾರ್ಯ ಜಾರಿಯಲ್ಲಿದೆ. ಯೋಜನೆ ಪ್ರಗತಿಯಲ್ಲಿದ್ದು ಮುಂದಿನ ತಿಂಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಆನ್ ಲೈನ್ ನೋಂದಣಿ ಜೊತೆಗೆ ಡಿಜಿಟಲ್ ಸಹಿಯುಳ್ಳ ಪ್ರಮಾಣ ಪತ್ರ ವಿತರಣೆ ಗುರಿಯನ್ನು ಸರ್ಕಾರ ಹೊಂದಿದೆ ಇದು ತಾಲೂಕು ಮಟ್ಟದಲ್ಲೂ ಲಭ್ಯವಾಗಲಿದೆ.ಇ-ಡಿಸ್ಟ್ರಿಕ್ ಮೂಲಕ ಇಂಟರ್ನೆಟ್, ಐವಿಆರ್ ಎಸ್ ಅಥವಾ ಮೊಬೈಲ್ ಫೋನ್ ಮೂಲಕ ಅರ್ಜಿಯ ಸ್ಥಿತಿಗತಿ ವಿವರ ಸುಲಭವಾಗಿ ಪಡೆಯಬಹುದು ಎಂದು ದೆಹಲಿ ವಿಭಾಗದ ಆಯುಕ್ತ ಧರ್ಮಪಾಲ್ ಹೇಳಿದ್ದಾರೆ.[ಮದ್ವೆ ತೆರಿಗೆ: ಸಿದ್ದು ಸರಕಾರಕ್ಕೆ ಹಿನ್ನಡೆ]

ಇ-ಡಿಸ್ಟ್ರಿಕ್ ಯೋಜನೆಯಡಿ ಜಾರಿಗೆ ಬರಲಿರುವ ಇದು ಮೊದಲ ಹಂತದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂದಿನ ತಿಂಗಳಿನಿಂದ ಪ್ರಾರಂಭಗೊಳ್ಳಲಿದ್ದು , ಬಳಿಕ ದೇಶಾದ್ಯಂತ ಕಾರ್ಯ ರೂಪಕ್ಕೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ವಿವಾಹಗಳು ಕಡ್ಡಾಯವಾಗಿ ನೋಂದಣಿಯಾಗ ಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ.

ಗ್ರಾಮ ಪಂಚಾಯ್ತಿಯಲ್ಲಿ ಮದುವೆಯಾಗುವವರು ಮೊದಲು ಅನುಮತಿ ಪತ್ರ ಪಡೆದು ವಿವಾಹವಾದ ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇದಕ್ಕೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಸಿಗುವುದಿಲ್ಲ ಎಂಬುದು ಕಾಯ್ದೆಯಲ್ಲಿದೆ.[ಕರ್ನಾಟಕದಲ್ಲಿ ನೋಂದಣಿ ಹೇಗೆ]

ನೋಂದಣಿ ಮಾಡಿಸಿಕೊಳ್ಳದಿದ್ದರೆ ಸರ್ಕಾರದಿಂದ ಸಿಗುವ ಪಡಿತರ ಆಹಾರ ಧಾನ್ಯಗಳು ಸೇರಿದಂತೆ ಸರ್ಕಾರದ ಯೋಜನೆಗಳಿಗೆ ಕೊಕ್ಕೆ ಬೀಳಲಿದೆ. 21 ವರ್ಷದ ಯುವಕ ಹಾಗೂ 18 ವರ್ಷ ಮೇಲ್ಪಟ್ಟ ಯುವತಿ ವಿವಾಹವಾದರೆ ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳೇ ನೋಂದಣಿ ಪತ್ರವನ್ನು ನೀಡಬೇಕು.

English summary
New Delhi : Newly married Couples seeking to register their marriage under the new law - which makes it mandatory to do so within 60 days of the wedding - will soon be able to just go online Process will be similar to Passport Applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X