ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಪುರದಲ್ಲಿ ಮಲೇಷ್ಯಾ ಯುವತಿ ಮೇಲೆ ಅತ್ಯಾಚಾರ

|
Google Oneindia Kannada News

ಜೈಪುರ, ಜೂ.7 : ಮಲೇಷ್ಯಾ ಮೂಲದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಜೈಪುರ ಪೊಲೀಸರು ಕೇವಲ ಮೂರು ಗಂಟೆಗಳಲ್ಲಿ ಬಂಧಿಸಿದ್ದಾರೆ. ಗುರುವಾರ ರಾತ್ರಿ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಹಾಕಿ ಆರೋಪಿ ಪ್ರವಾಸಕ್ಕೆಂದು ಬಂದಿದ್ದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಿಲ್ವಾರ ಮೂಲದವನೆಂದು ಪೊಲೀಸರು ಹೇಳಿದ್ದಾರೆ. ಜೈಪುರ ಪ್ರವಾಸಕ್ಕೆಂದು ಮೂರು ದಿನಗಳ ಹಿಂದೆ ಆಗಮಿಸಿದ್ದ 30 ವರ್ಷದ ಮಲೇಷ್ಯಾ ಮೂಲದ ಯುವತಿ ಮೇಲೆ ಈತ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವಿದೆ. ಯುವತಿಗೆ ಗೈಡ್ ಆಗಿದ್ದ ಈತ ಗುರುವಾರ ರಾತ್ರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

rape

ಯುವತಿ ಪೊಲೀಸರಿಗೆ ನೀಡಿರುವ ದೂರಿನ ಅನ್ವಯ ಗುರುವಾರ ರಾತ್ರಿ ಯುವತಿ ಮತ್ತು ಗೈಡ್ ಒಟ್ಟಿಗೆ ಊಟ ಮಾಡಿದ್ದಾರೆ. ನಂತರ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಆತ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಯುವತಿ ಉಳಿದುಕೊಂಡಿದ್ದ ಹೋಟೆಲ್ ಮುಂಭಾಗದಲ್ಲಿ ಅವಳನ್ನು ಬಿಟ್ಟು ಪರಾರಿಯಾಗಿದ್ದ. [ಅತ್ಯಾಚಾರ ನಿಲ್ಲಬೇಕಾದರೆ ಶೌಚಾಲಯ ಕಟ್ಟಿಸಿ]

ಯುವತಿ ಜೊತೆ ಊಟಮಾಡುವಾಗಲೇ ಆಕೆಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಹಾಕಿಕೊಟ್ಟಿದ್ದ ಎಂದು ಯುವತಿ ದೂರಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಆರೋಪಿಯನ್ನು ಕೇವಲ ಮೂರು ಗಂಟೆಗಳ ಅವಧಿಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

English summary
Amandeep Singh DCP Jaipur (East) said, A 30-year-old man was arrested on charges of raping a Malaysian woman on Friday. The woman in her complaint said, she came to Jaipur of Rajastan state three days back on a business trip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X