ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸೇನಾ ಮುಖ್ಯಸ್ಥರಾಗಿ ದಲ್ ‌ಬೀರ್ ‌ಸಿಂಗ್

By Mahesh
|
Google Oneindia Kannada News

ನವದೆಹಲಿ, ಮೇ 13: ವಿಶ್ವದ ಮೂರನೇ ಅತೀ ದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ದಲ್ ‌ಬೀರ್ ‌ಸಿಂಗ್ ಸುಹಾಗ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಕ್ರಂಸಿಂಗ್ ಅಧಿಕಾರಾವಧಿ ಜುಲೈ 31ಕ್ಕೆ ಅಂತ್ಯಗೊಳ್ಳಲಿದೆ.

ಬಿಕ್ರಂಸಿಂಗ್ ಅವರಿಂದ ತೆರವಾಗಲಿರುವ ಈ ಸ್ಥಾನಕ್ಕೆ ಸೇನಾಪಡೆಯ ಹಾಲಿ ಉಪ ಲೆಫ್ಟಿನೆಂಟ್ ಜನರಲ್ ದಲ್ ‌ಬೀರ್ ‌ಸಿಂಗ್ ಸುಹಾಗ್ ಅವರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಚುನಾವಣಾ ಆಯೋಗದ ಅನುಮತಿ ಮೇರೆಗೆ ಸೇನಾಪಡೆಯ ನೂತನ ಮುಖ್ಯಸ್ಥರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

Lt Gen Dalbir Singh to be the next Army Chief

ಪ್ರಧಾನಮಂತ್ರಿ ಡಾ.ಮನಮೋಹನ್ ‌ಸಿಂಗ್, ರಕ್ಷಣಾ ಸಚಿವ ಎ.ಕೆ.ಆಂಟನಿ ಸೇರಿದಂತೆ ಕೆಲವು ಹಿರಿಯ ಸಚಿವರು ದಲ್ ‌ಬಿರ್ ‌ಸಿಂಗ್ ಸುಹಾಗ್ ಅವರನ್ನು ಸೇನಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಸಮ್ಮತಿಸಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲು ಒಪ್ಪಿದ್ದಾರೆ.

ಸೇನಾಪಡೆಯ ನೇಮಕಾತಿಯು ವಿವಾದದ ಕೇಂದ್ರಬಿಂದುವಾಗಿತ್ತು. ನಿರ್ಗಮನದ ಹಾದಿಯಲ್ಲಿರುವ ಯುಪಿಎ ದಲ್ ‌ಬೀರ್ ‌ಸಿಂಗ್ ಸುಹಾಗ್ ಬದಲು ಬೇರೊಬ್ಬರನ್ನು ನೇಮಕ ಮಾಡಲು ಮುಂದಾಗಿತ್ತು. ಆದರೆ, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದೀಗ ಎಲ್ಲರ ವಿಶ್ವಾಸದಂತೆ ದಲ್ ‌ಬೀರ್ ‌ಸಿಂಗ್ ಅವರನ್ನು ಸೇನಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಸಮ್ಮತಿ ಸೂಚಿಸಿದೆ.

ಯುಪಿಎ ಸರ್ಕಾರಕ್ಕೆ ಹೊಸ ಸೇನಾ ಮುಖ್ಯಸ್ಥರನ್ನು ಹೆಸರಿಸಲು ಮಾ.27ರಂದೇ ಅನುಮತಿ ನೀಡಲಾಗಿತ್ತು. ಆದರೆ, ಗೃಹ ಸಚಿವಾಲಯವು ಚುನಾವಣಾ ಆಯೋಗದ ಅಭಿಪ್ರಾಯ ಹಾಗೂ Appointments Committee of Cabinet (ACC) ಅನುಮತಿ ಪಡೆದು ದಲ್ ಬಿರ್ ಸಿಂಗ್ ಹೆಸರು ಪ್ರಕಟಿಸಲು ಸಿದ್ಧವಾಗಿದೆ.

English summary
Lieutenant General Dalbir Singh is likely to be the successor of General Bikram Singh who is scheduled to retire on July 31. The defence ministry sent his name to the Appointments Committee of Cabinet (ACC) for approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X