ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಿಣಿಯರೇ! ಫೆ.25ರಿಂದ ಅಡುಗೆ ಅನಿಲ ಸಿಗಲ್ಲ

By Mahesh
|
Google Oneindia Kannada News

ಬೆಂಗಳೂರು, ಫೆ.23: ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಫೆ.25ರಿಂದ ದೇಶದೆಲ್ಲೆಡೆ ಎಲ್ ಪಿಜಿ ವಿತರಕರು ಅನಿರ್ಧಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ ಎಂದು ಅಖಿಲ ಭಾರತ ಎಲ್ ಪಿ ಜಿ ವಿತರಕರ ಸಂಘದ ಕಾರ್ಯದರ್ಶಿ ಸತ್ಯನ್ ಅವರು ಭಾನುವಾರ ಹೇಳಿದ್ದಾರೆ.

ಹೀಗಾಗಿ, ಫೆ.25 ರಿಂದ ಗೃಹಿಣಿಯರು ಅಡುಗೆ ಮನೆಯಲ್ಲಿ ಎಲ್ ಪಿಜಿ ಸಿಲಿಂಡರ್ ಸಿಗದೆ ಒದ್ದಾಡುವ ಸಾಧ್ಯತೆ ಹೆಚ್ಚಿದೆ. ಆದರೆ, ಆಸ್ಪತ್ರೆ ಮುಂತಾದ ಅಗತ್ಯ ಸ್ಥಳಗಳಿಗೆ ಮಾತ್ರ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳಿಸದಿರಲು ಸಂಘ ನಿರ್ಧರಿಸಿದೆ.

ಸಬ್ಸಿಡಿ ಗೊಂದಲ : ಅಡುಗೆ ಅನಿಲ ಸಬ್ಸಿಡಿ ಗ್ರಾಹಕರಿಗೆ ತಲುಪದೆ ಗೊಂದಲ ಮೂಡಿರುವುದಕ್ಕೆ ಎಲ್ ಪಿಜಿ ವಿತರಕರ ಸಂಘ ಕಾರಣವಲ್ಲ. ಇದಕ್ಕೆ ಆಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ನೇರ ಹೊಣೆ ಎಂದು ಸತ್ಯನ್ ಅವರು ಹೇಳಿದ್ದಾರೆ.

ಅಖಿಲ ಭಾರತ ಎಲ್ ಪಿ ಜಿ ವಿತರಕರ ಸಂಘ (AILDF) ದ ಪ್ರಧಾನ ಕಾರ್ಯದರ್ಶಿ ಸತ್ಯನ್ ಹಾಗೂ ಪವನ್ ಸೋನಿ ಅವರು ಬೆಂಗಳೂರಿನಲ್ಲಿ ಮಾತನಾಡಿ, ಈ ಎರಡು ಬ್ಯಾಂಕ್ ಗಳು ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು ಗ್ರಾಹಕರ ಸಬ್ಸಿಡಿ ಹಣವನ್ನು ನುಂಗಿವೆ. ಆದರೆ, ಗ್ರಾಹಕರು ಸಿಲಿಂಡರ್, ಸಬ್ಸಿಡಿ ಹಣ ಸಿಗದಿರುವುದಕ್ಕೆ ವಿತರಕರು ಕಾರಣ ಎಂದುಕೊಂಡು ದೂಷಿಸುತ್ತಿದ್ದಾರೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ.

* ಗೃಹೋಪಯೋಗಿ ಹಾಗೂ ವಾಣಿಜ್ಯ ಉದ್ದೇಶಿತ ಸಬ್ಸಿಡಿ ಸಿಲಿಂಡರ್ ಗಳ ಬೆಲೆ ವ್ಯತ್ಯಾಸ ಹಾಗೂ ಹಣ ನಿಗದಿ ಗೊಂದಲಕ್ಕೆ ಪರಿಹಾರ ಕೋರಲಾಗಿದೆ.
* ಗೃಹೋಪಯೋಗಿ ಸಬ್ಸಿಡಿ ಸಿಲಿಂಡರ್ ಬೆಲೆ 400-450 ರು ಇದೆ.
* ಇದೇ ಸಬ್ಸಿಡಿ ಇಲ್ಲದ ಗೃಹೋಪಯೋಗಿ ಎಲ್ ಪಿಜಿ ಸಿಲಿಂಡರ್ 1,210-1275 ರು ನಷ್ಟಿದೆ.
* ವಾಣಿಜ್ಯ ಉದ್ದೇಶಿತ ಸಿಲಿಂಡರ್ ಬೆಲೆ 1,850 ರು ನಿಂದ 1,900 ರು ನಷ್ಟಿದೆ.
ವಿತರಕರ ಬೇಡಿಕೆ ಏನು?, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳುವುದೇನು? ಮುಂದೆ ಓದಿ...

ಎಲ್ ಪಿಜಿ ವಿತಕರರ ಬೇಡಿಕೆ ಏನು?

ಎಲ್ ಪಿಜಿ ವಿತಕರರ ಬೇಡಿಕೆ ಏನು?

ಮಲ್ಟಿಪಲ್ ದರ ಬೇಡವೇ ಬೇಡ: 19 ಕೆಜಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಬೆಲೆ 1,850 ರು ನಿಂದ 1,900 ರು ಇದೆ. ಸಬ್ಸಿಡಿ ರಹಿತ ಮನೆ ಬಳಕೆ ಸಿಲಿಂಡರ್ ಬೆಲೆ 1,240 ರಿಂದ 1,275 ರು ನಷ್ಟಿದೆ. ಇದು ಎಲ್ ಪಿಜಿ ವ್ಯಾಪಾರದಲ್ಲಿ ಗೊಂದಲ ಹುಟ್ಟಿಸುತ್ತಿದೆ. ಕಾರಣವಿಲ್ಲದೆ ವಿತರಕರನ್ನು ಗ್ರಾಹಕರು ದೂಷಿಸುವಂತಾಗಿದೆ. ಇದಕ್ಕೆ ಸೂಕ್ತ ಪರಿಹಾರ ಅಗತ್ಯ

ಸಿಲಿಂಡರ್ ಗಳಿಗೆ pilfer ಪ್ರೂಫ್ ಸೀಲ್

ಸಿಲಿಂಡರ್ ಗಳಿಗೆ pilfer ಪ್ರೂಫ್ ಸೀಲ್

ಎಲ್ಲಾ ಎಲ್ ಪಿಜಿ ಸಿಲಿಂಡರ್ ಗಳಿಗೆ pilfer ಪ್ರೂಫ್ ಸೀಲ್ ನೀಡಬೇಕು ಎಂದು ಅನಿಲ ಕಂಪನಿಗಳಿಗೆ ವಿತರಕರು ಬೇಡಿಕೆ ಒಡ್ಡಿದ್ದಾರೆ. ಈ ಸೀಲ್ ಇದ್ದರೆ ಗ್ರಾಹಕರಿಗೆ ಸರಿಯಾದ ಪ್ರಮಾಣದಲ್ಲಿ ಅನಿಲ ಸಿಗುತ್ತದೆ. ಅನಿಲ ಸಿಲಿಂಡರ್ ತೂಕದಲ್ಲಿ ಮೋಸ ಎಂಬ ಸಮಸ್ಯೆ ಬಗೆಹರಿಯುತ್ತದೆ.

ಮುಕ್ತ ಮಾರುಕಟ್ಟೆ ಅನಿಲ ವಿತರಣೆ ಬಂದ್

ಮುಕ್ತ ಮಾರುಕಟ್ಟೆ ಅನಿಲ ವಿತರಣೆ ಬಂದ್

pilfer ಪ್ರೂಫ್ ಸೀಲ್ ಇಲ್ಲದ ಎಲ್ ಪಿಜಿ ಸಿಲಿಂಡರ್ ಗಳನ್ನು ಮುಕ್ತವಾಗಿ ಅನಿಲ ಕಂಪನಿಗಳು ಮಾರುಕಟ್ಟೆ ಬಿಡದಂತೆ ತಡೆಗಟ್ಟಬೇಕು. 2/3/5 ಕೆ.ಜಿ ತೂಕದ ಸಿಲಿಂಡರ್ ಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದು, ಇದು ಸುರಕ್ಷತೆ ಮುದ್ರೆ ಹೊಂದಿರುವುದಿಲ್ಲ ಹಾಗೂ ವಂಚನೆಯಿಂದ ಮುಕ್ತವಾಗಿರುವುದಿಲ್ಲ

ಮಾರುಕಟ್ಟೆ ನಿಯಮಾವಳಿಗಳು MDG

ಮಾರುಕಟ್ಟೆ ನಿಯಮಾವಳಿಗಳು MDG

'ಅನಿಷ್ಟಕ್ಕೆಲ್ಲ ಶನಿಶ್ವರನೇ ಕಾರಣ' ಎಂಬಂತೆ ಎಲ್ಲಾ ದೋಷಗಳಿಗೂ ಎಲ್ ಪಿಜಿ ವಿತಕರರು, ಡೀಲರ್ ಗಳ ಮೇಲೆ ಸರ್ಕಾರ ದೊಡ್ಡ ಪ್ರಮಾಣದ ದಂಡ ವಿಧಿಸುವುದನ್ನು ತಪ್ಪಿಸಬೇಕು. ಮಾರುಕಟ್ಟೆ ನಿಯಮಾವಳಿಯಲ್ಲಿ ಬದಲಾವಣೆ ಬಂದರೆ ಮಾತ್ರ ಗ್ರಾಹಕ-ಸಬ್ಸಿಡಿ-ವಿತರಕರ ವ್ಯವಸ್ಥೆ ಸುಧಾರಣೆ ಸಾಧ್ಯ

ಹೊಸ ಎಲ್ ಪಿಜಿ ವಿತಕರರ ನೇಮಕಾತಿ

ಹೊಸ ಎಲ್ ಪಿಜಿ ವಿತಕರರ ನೇಮಕಾತಿ

ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ನೀಡಿರುವ ನಿಯಮಾವಳಿಗಳನ್ನು ಉಲ್ಲಂಘಿಸಿ ಕೆಲವೊಂದು ಹೊಸ ಎಲ್ ಪಿಜಿ ವಿತಕರರು ಹುಟ್ಟುಕೊಳ್ಳುತ್ತಿದ್ದಾರೆ. ಹೊಸ ವಿತರಕರ ಲೈಸನ್ಸ್ ತಕ್ಷಣವೇ ರದ್ದುಗೊಳಿಸಬೇಕು. ಸಮಾಜದ ಒಂದು ವರ್ಗಕ್ಕೆ ಮಾತ್ರ ಇದರಿಂದ ಉಪಯೋಗವಾಗುತ್ತಿದ್ದು, ಜಾಹೀರಾತು ಆಧಾರಿತ ವಿತಕರನ್ನು ತಡೆಗಟ್ಟಬೇಕು.

ಸಿಲಿಂಡರ್ ಗೊಂದಲದ ಬಗ್ಗೆ ಮೊಯ್ಲಿ ಹೇಳಿಕೆ

ಸಿಲಿಂಡರ್ ಗೊಂದಲದ ಬಗ್ಗೆ ಮೊಯ್ಲಿ ಹೇಳಿಕೆ

* ಸಬ್ಸಿಡಿ ಹೊಂದಿರುವ ಎಲ್ ಪಿಜಿ ಸಿಲಿಂಡರ್ ಹೊಂದಲು ಆಧಾರ್ ಕಡ್ಡಾಯಗೊಳಿಸಿಲ್ಲ.
* Direct Benefit Transfer for LPG ರದ್ದು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
* ವಾರ್ಷಿಕ 12 ಸಿಲಿಂಡರ್ ಮಿತಿ ಕೂಡಾ ಏರಿಕೆಯಾಗಲಿದೆ. ಸಬ್ಸಿಡಿ ದರ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿಲ್ಲ.
* ವಾರ್ಷಿಕವಾಗಿ ಒಂದು ಕೋಟಿಗೂ ಅಧಿಕ ಹೊಸ ಎಲ್ ಪಿಜಿ ಸಂಪರ್ಕಗಳನ್ನು ಗ್ರಾಮೀಣ ಭಾಗಗಳಲ್ಲಿ ನೀಡಲಾಗುತ್ತಿದೆ.
* ಶೇ 96 ರಷ್ಟು ಬಡತನದಿಂದ ಕೆಳಗಿನ ರೇಖೆಯಲ್ಲಿರುವ(ಬಿಪಿಎಲ್) ಕಾರ್ಡ್ ದಾರರು ವಾರ್ಷಿಕ 6 ಸಿಲಿಂಡರ್ ಮಾತ್ರ ಬಳಸುತ್ತಿದ್ದಾರೆ.
* ವಿತಕರರ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲಾಗುತ್ತದೆ. ಅನಿಲ ಕಂಪನಿಗಳ ಜತೆ ಕೂಡಾ ಸರ್ಕಾರ ಮಾತುಕತೆ ನಡೆಸುತ್ತಿದೆ

English summary
LPG dealers across the country to go on strike starting Feb 25 as the Ministry of Petroleum and Natural Gas does not agreed to their multiple demands. This means that cooking gas refills would not be delivered during the strike days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X