ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.7: ಲೋಕಸಭಾ ಮಹಾಸಮರ ಆರಂಭ

By Mahesh
|
Google Oneindia Kannada News

ನವದೆಹಲಿ,ಏ.6: ಲೋಕಸಭಾ ಮಹಾಸಮರ ನಾಳೆ ಬೆಳಗ್ಗೆ ಆರಂಭಗೊಳ್ಳಲಿದೆ. 9 ಹಂತಗಳಲ್ಲಿ ನಡೆಯಲಿರುವ ಲೋಕ ಚುನಾವಣೆಗೆ ಮುಹೂರ್ತ ಸಮೀಪಿಸಿದ್ದು ಮೊದಲ ಹಂತದಲ್ಲಿ ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳ ಒಟ್ಟು ಆರು ಕ್ಷೇತ್ರಗಳಿಗೆ ಬೆಳಗ್ಗೆ 8 ರಿಂದ ಮತದಾನ ಆರಂಭಗೊಳ್ಳಲಿದೆ.

ಮಾವೋವಾದಿಗಳ ದಾಳಿ ಭೀತಿ ನಡುವೆ ಎರಡು ರಾಜ್ಯಗಳು ಮಹಾಸಮರಕ್ಕೆ ಮುನ್ನುಡಿ ಬರೆಯಲಿವೆ. ನಕ್ಸಲ್ ಬೆಂಬಲಿತ ಕೆಲ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಈ ಆರು ಸ್ಥಾನಗಳಿಗೆ ಕಾಂಗ್ರೆಸ್, ಬಿಜೆಪಿ, ತೃಣಮೂಲ ಕಾಂಗ್ರೆಸ್, ಅಸ್ಸಾಂ ಗಣಪರಿಷತ್, ಆಮ್ ಆದ್ಮಿ ಪಾರ್ಟಿ, ಎಐಯುಡಿಎಫ್, ಸಿಪಿಐಎಂ, ಎಸ್ ಯುಸಿಐ, ಎಐಎಸ್ ಬಿ ಮತ್ತು ಎಸ್ಪಿ ಹಾಗೂ ಪಕ್ಷೇತರರು ಸೇರಿದಂತೆ 51 ಮಂದಿ ಕಣದಲ್ಲಿದ್ದಾರೆ.

Lok Sabha elections 2014: India goes to polls from April 7

ಇದರಲ್ಲಿ ಹಾಲಿ ಕೇಂದ್ರ ಸಚಿವ ರಾನಿ ನರಹ ಮತ್ತು ಮಾಜಿ ಸಚಿವ ಪಬಾನ್ ಸಿಂಗ್ ಅದೃಷ್ಟ ಪರೀಕ್ಷೆಗೆ ನಿಂತಿದ್ದು, ಮುಖ್ಯಮಂತ್ರಿ ತರುಣ್ ಗೋಗಯ್ ಅವರ ಪುತ್ರ ಗೌರವ್ ಗೋಗಿ ಮತ್ತು ಬಿಪಿನ್ ಕುಮಾರ್ ಬೋರ ಕೂಡ ಅಭ್ಯರ್ಥಿಗಳಾಗಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸೋರ್ ‍ಬಾನಂದ ಸೋನಾವಲ್ ಕೂಡ ಚುನಾವಣೆ ಎದುರಿಸುತ್ತಿದ್ದು ಹಲವೆಡೆ ಬಂಡಾಯ ಕೂಡ ಅಧಿಕೃತ ಅಭ್ಯರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಉಲ್ಫಾದ ಕಮಾಂಡರ್ ಹಿರಾ ಸರಾನಿಯಾ ಲೋಕಸಭಾ ಚುನಾವಣೆಯಲ್ಲಿ ಹಲವು ಪ್ರತ್ಯೇಕವಾದಿ ಸಂಘಟನೆಗಳ ಬೆಂಬಲದಿಂದ ಸ್ಪರ್ಧಿಸುತ್ತಿದ್ದಾರೆ.

ಅಸ್ಸಾಂ ರಾಜ್ಯದ ತೇಜ್ ‌ಪುರ್, ಖಾಲಿಬೋರ್, ಜೊರಾಹತ್, ದಿಬ್ಬೂರ್ ‌ಗರ್ ಮತ್ತು ಲಕ್ಕಿಪುರಂ ಕ್ಷೇತ್ರಗಳು ಸೇರಿದಂತೆ ತ್ರಿಪುರದ ಪಶ್ಚಿಮ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ನಾಳೆ ಆರು ಕ್ಷೇತ್ರಗಳ ಚುನಾವಣೆ ಮುಗಿದ ಬಳಿಕ ಏ.9 ರಂದು ಐದು ರಾಜ್ಯಗಳಲ್ಲಿ 9 ಕ್ಷೇತ್ರಗಳನ್ನೊಳಗೊಂಡ 2ನೇ ಹಂತದ ಚುನಾವಣೆ ನಡೆಯಲಿದೆ.

English summary
India goes to polls from April 7 : The high-stakes battle in the virtual Presidential-style contest between Narendra Modi and Rahul Gandhi with a few other regional satraps also in the fray in the Lok Sabha elections begins tomorrow in six constituencies in two states in the first of the nine-phased polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X