ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2009ರ ಮತಗಟ್ಟೆ ಸಮೀಕ್ಷೆ ಹೇಳಿದ್ದೇನು, ಆಗಿದ್ದೇನು?

|
Google Oneindia Kannada News

ಮತದಾನ ಸಮೀಪಿಸುತ್ತಿದ್ದಂತೇ ವಿವಿಧ ಮಾಧ್ಯಮ ಮತ್ತು ಸಮೀಕ್ಷಾ ಸಂಸ್ಥೆಗಳು ವಾರಕ್ಕೊಂದರಂತೆ ಚುನಾವಣಾಪೂರ್ವ ಸಮೀಕ್ಷೆಯನ್ನು ಹೊರಬಿಡುತ್ತವೆ. ಹಾಗೇ, ಮತದಾನದ ದಿನ ನಡೆಸಲಾಗುವ ಮತಗಟ್ಟೆ ಸಮೀಕ್ಷೆ ಕೂಡಾ.

ಕೆಲವೊಂದು ಸಮೀಕ್ಷೆಗಳು ಹೆಚ್ಚುಕಮ್ಮಿ ಕರಾರುವಕ್ಕಾಗಿ ಹೊರಹೊಮ್ಮಿದರೂ, ಕೆಲ ಸಮೀಕ್ಷೆಗಳು ಚುನಾವಣಾ ಫಲಿತಾಂಶದ ಸನಿಹಕ್ಕೂ ಬರದಂತೆ ತೋಪಾಗಿರುತ್ತವೆ. (2014: ರಾಜ್ಯದಲ್ಲಿ ಭಾರೀ ಮುನ್ನಡೆಯತ್ತ ಬಿಜೆಪಿ)

ಆಗಷ್ಟೇ ಮತದಾನ ಮಾಡಿ ಬಂದ ಮತದಾರನ ಅಭಿಪ್ರಾಯ ಸಂಗ್ರಹಿಸಿ ಮತಗಟ್ಟೆ ಸಮೀಕ್ಷೆ ನಡೆಸುವುದರಿಂದ ಇದು ಚುನಾವಣಾಪೂರ್ವ ಸಮೀಕ್ಷೆಗಿಂತ ಸ್ವಲ್ಪ ಮಟ್ಟಿನ ನಿಖರತೆ ಕಾಪಾಡಿಕೊಂಡು ಬರುವ ಸಾಧ್ಯತೆಗಳು ಹೆಚ್ಚು.

ಇತ್ತೀಚಿನ ದಿನಗಳಲ್ಲಿ ಮತಗಟ್ಟೆ ಸಮೀಕ್ಷೆಗಳು ಜನತೆಯಲ್ಲಿ ಎಷ್ಟು ಪ್ರಭಾವ ಬೀರುತ್ತಿವೆ ಎನ್ನುವುದಕ್ಕೆ ಒಂದು ಉದಾಹರಣೆ: ಕಳೆದ ಡಿಸೆಂಬರ್ ನಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಯ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಪ್ರಕಟವಾದ ದಿನ ಮುಂಬೈ ಸೆನ್ಸೆಕ್ಸ್ 249 ಅಂಕಗಳ ಏರಿಕೆ ಕಂಡಿತ್ತು. ಯಾಕೆಂದರೆ ಸಮೀಕ್ಷೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಹೇಳಲಾಗಿತ್ತು.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು ಎಂಟು ವಿವಿಧ ವಾಹಿನಿಗಳು ಸಮೀಕ್ಷಾ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಚುನಾವಣಾಪೂರ್ವ ಸಮೀಕ್ಷೆ ಮತ್ತು ಮತಗಟ್ಟೆ ಸಮೀಕ್ಷೆ ನಡೆಸಿದ್ದವು. ಸಮೀಕ್ಷೆಗಳು ಚುನಾವಣಾ ಫಲಿತಾಂಶಕ್ಕೆ ಎಷ್ಟು ಹತ್ತಿರವಾಗಿತ್ತು, ಎಷ್ಟು ದೂರವಾಗಿತ್ತು? ಕಿರುತೆರೆಯಲ್ಲಿ ನಮೂದಿಸಲಾಗಿರುವ ಅಂಕಿಅಂಶಗಳತ್ತ ಕಣ್ಣು ಹಾಯಿಸಿ.[ಬಿರುಸಿನ ಮತಯಾಚನೆ ಚಿತ್ರಗಳು]

2009ರ ಲೋಕಸಭಾ ಚುನಾವಣಾ ಫಲಿತಾಂಶ (ಒಟ್ಟು ಸ್ಥಾನಗಳು 543)
NDA ಒಕ್ಕೂಟ: 159
UPA ಒಕ್ಕೂಟ : 262
Third Front : 79
ಇತರರು : 43

ಚುನಾವಣಾಪೂರ್ವ ಸಮೀಕ್ಷೆ ನಿಖರತೆ ಕಾಪಾಡಿ ಕೊಳ್ಳುವಲ್ಲಿ ವಿಫಲ

ಚುನಾವಣಾಪೂರ್ವ ಸಮೀಕ್ಷೆ ನಿಖರತೆ ಕಾಪಾಡಿ ಕೊಳ್ಳುವಲ್ಲಿ ವಿಫಲ

ಐಬಿಎನ್, ಸ್ಟಾರ್, ನೀಲ್ಸನ್, ವೀಕ್, ಟೈಮ್ಸ್ ಆಫ್ ಇಂಡಿಯಾ, ಸಿ ವೋಟರ್ ಮುಂತಾದವು 2009ರಲ್ಲಿ ಸಮೀಕ್ಷೆ ನಡೆಸಿದ್ದವು. ಇದರಲ್ಲಿ ಸ್ಟಾರ್ ಮತ್ತು ನೀಲ್ಸನ್ ಜಂಟಿಯಾಗಿ ನಡೆಸಿದ ಸಮೀಕ್ಷೆ ಮಾತ್ರ ಫಲಿತಾಂಶಕ್ಕೆ ಕೊಂಚ ಹತ್ತಿರವಾಗಿದ್ದವು. ಸಮೀಕ್ಷೆ NDA ಒಕ್ಕೂಟ - 184, UPA ಒಕ್ಕೂಟ - 257, Third Front - 96 ಸ್ಥಾನ ಪಡೆಯಬಹುದೆಂದು ಅಂದಾಜಿಸಿತ್ತು.

2009ರ ಮತಗಟ್ಟೆ ಸಮೀಕ್ಷೆ : ಸಿಎನ್ಎನ್ - ಐಬಿಎನ್ - ದೈನಿಕ್ ಭಾಸ್ಕರ್

2009ರ ಮತಗಟ್ಟೆ ಸಮೀಕ್ಷೆ : ಸಿಎನ್ಎನ್ - ಐಬಿಎನ್ - ದೈನಿಕ್ ಭಾಸ್ಕರ್

NDA ಒಕ್ಕೂಟ : 165- 185
UPA ಒಕ್ಕೂಟ : 185 -205
Third Front : 110 -130
ಇತರರು : 25 - 35

2009ರ ಮತಗಟ್ಟೆ ಸಮೀಕ್ಷೆ : ಸ್ಟಾರ್ - ನೀಲ್ಸನ್

2009ರ ಮತಗಟ್ಟೆ ಸಮೀಕ್ಷೆ : ಸ್ಟಾರ್ - ನೀಲ್ಸನ್

NDA ಒಕ್ಕೂಟ : 196
UPA ಒಕ್ಕೂಟ : 199
Third Front : 100
ಇತರರು : 36

2009ರ ಮತಗಟ್ಟೆ ಸಮೀಕ್ಷೆ : ಇಂಡಿಯಾ ಟಿವಿ - ಸಿವೋಟರ್

2009ರ ಮತಗಟ್ಟೆ ಸಮೀಕ್ಷೆ : ಇಂಡಿಯಾ ಟಿವಿ - ಸಿವೋಟರ್

NDA ಒಕ್ಕೂಟ : 189 - 201
UPA ಒಕ್ಕೂಟ : 199
Third Front : 105 -121

ಮತಗಟ್ಟೆ ಸಮೀಕ್ಷೆ

ಮತಗಟ್ಟೆ ಸಮೀಕ್ಷೆ

2009ರ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಫಲಿತಾಂಶಕ್ಕೆ ಹತ್ತಿರವಾಗಿರಲಿಲ್ಲ. ಆದರೆ 2013 ಡಿಸೆಂಬರ್ ನಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳೆ ನಡೆದ ಮತಗಟ್ಟೆ ಸಮೀಕ್ಷೆಗಳು ಫಲಿತಾಂಶಕ್ಕೆ ಬಹುತೇಕ ಹತ್ತಿರವಾಗಿದ್ದವು.

English summary
Exit poll and Pre poll survey Vs Actual result of Lok Sabha Election 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X