ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್ ಮಧ್ಯೆ ಗಡಿ ರೇಖೆ ಎಳೆದವರು ಯಾರು?

|
Google Oneindia Kannada News

ಪಾಕಿಸ್ತಾನ ಆಗಸ್ಟ್ 14 ರಂದು, ಭಾರತ ಆಗಸ್ಟ್ 15 ರಂದು ಸ್ವಾತಂತ್ರ್ಯದಿನ ಆಚರಿಸಿಕೊಳ್ಳುತ್ತವೆ. ಮೊದಲು ಅಖಂಡ ಭಾರತದ ವಿಭಜನೆಯಾಯಿತು ನಂತರ ಎರಡೂ ದೇಶಗಳಿಗೂ ಸ್ವಾತಂತ್ರ್ಯ ನೀಡಲಾಯಿತು ಎಂದು ಬಹುತೇಕರು ತಿಳಿದುಕೊಂಡಿದ್ದಾರೆ. ಆದರೆ 67 ವರ್ಷಗಳ ಹಿಂದಿನ ಅಖಂಡ ಭಾರತ ವಿಭಜನೆಯ ಅಸಲಿ ಕತೆ ಬೇರೆಯೇ ಇದೆ.

ಹೌದು.. ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದ ಎರಡು ದಿನದ ತರುವಾಯ ಅಂದರೆ ಆಗಸ್ಟ್ 17, 1947ರಂದು ದೆಹಲಿಯಲ್ಲಿ ಕುಳಿತು ದೇಶ ಇಬ್ಭಾಗ ಮಾಡಲಾಯಿತು. ಈ ಸತ್ಯ ಅರಗಿಸಿಕೊಳ್ಳುವುದು ಸಲ್ಪ ಕಷ್ಟ ಎನಿಸಿದರೂ ಇತಿಹಾಸದ ಪುಟಗಳು ಇದಕ್ಕೆ ಸಮರ್ಪಕ ದಾಖಲೆ ನೀಡುತ್ತವೆ. ಮತ್ತೊಂದು ವಿಶೇಷ ಎಂದರೆ ಭಾರತಕ್ಕೆ ಒಮ್ಮೆಯೂ ಭೇಟಿ ನೀಡದ, ಇಲ್ಲಿಯ ಭೌಗೋಳಿಕ ಪರಿಸರದ ಕೊಂಚವೂ ಅರಿವಿರದವ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಗಡಿ ರೇಖೆ ಎಳೆದಿದ್ದು ಮಾತ್ರ ದುರ್ದೈವ.
ಇತಿಹಾಸ ಹೇಳುವುದೇನು?
* ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದಿದ್ದರೂ ಆಗಸ್ಟ್ 17, 1947ರವರೆಗೆ ಗಡಿ ರೇಖೆ ಗುರುತು ಮಾಡಲಾಗಿರಲಿಲ್ಲ.
* ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ರೇಖೆ ಎಳೆದವನು ಬ್ರಿಟನ್ ಕಾನೂನು ತಜ್ಞ ಕ್ರಾಲ್ ಜಾನ್ ರಾಡ್ ಕ್ಲಿಫ್.
* ಜಾನ್ ರಾಡ್ ಕ್ಲಿಫ್ ಗೆ ಗುರುತರವಾದ ಎರಡು ಜವಾಬ್ದಾರಿ ವಹಿಸಲಾಗಿತ್ತು. ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದ ಬಹುತೇಕ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ, ಸಿಖ್ ಮತ್ತು ಹಿಂದೂಗಳನ್ನು ಭಾರತಕ್ಕೆ ಸೇರಿಸುವಂತೆ ಗಡಿ ರೇಖೆ ಎಳೆಯಬೇಕೆಂದು ಈಸ್ಟ್ ಇಂಡಿಯಾ ಕಂಪನಿ ಸೂಚಿಸಿತ್ತು.
*ಅದರಂತೆ ರಾಡ್ ಕ್ಲಿಫ್ ಆಗಸ್ಟ್ 17, 1947ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ರೇಖೆ ಎಳೆದ.
*ಪಂಜಾಬ್ ಮತ್ತು ಅಖಂಡ ಬಂಗಾಳವವನ್ನು ವಿಭಜನೆ ಮಾಡುವಂತೆ ಬ್ರಿಟಿಷ್ ಸರ್ಕಾರ ಸೂಚನೆ ನೀಡಿತ್ತು.
* 88 ಮಿಲಿಯನ್ ಜನ ವಾಸಿಸಿವ 4.5 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿ ಪ್ರದೇಶವನ್ನು ವಿಭಜಿಸುವ ಹೊಣೆಗಾರಿಕೆ ಕ್ಲಿಫ್ ಗೆ ವಹಿಸಲಾಗಿತ್ತು.

India

ಇದನ್ನು ಓದಲೇ ಬೇಕು
*ಭಾರತದ ಭೌಗೋಳಿಕ ಚಿತ್ರಣದ ಬಗ್ಗೆ ಕ್ರಾಲ್ ಜಾನ್ ರಾಡ್ ಕ್ಲಿಫ್ ಗೆ ಯಾವುದೇ ಮಾಹಿತಿ ಇರಲಿಲ್ಲ.
* ಕೇವಲ ನಕಾಶೆ, ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಡ್ ಕ್ಲಿಫ್ ದೇಶ ಇಬ್ಭಾಗ ಮಾಡಿದ.
* ದೇಶ ವಿಭಜನೆಗೂ ಮೊದಲು ರಾಡ್ ಕ್ಲಿಫ್ ಭಾರತಕ್ಕೆ ಭೇಟಿನೇ ನೀಡಿರಲಿಲ್ಲ.
* ಜುಲೈ 8, 1947ರಂದು ಭಾರತಕ್ಕೆ ಕ್ಪಿಫ್ ಮೊದಲ ಬಾರಿಗೆ ಆಗಮಿಸಿದಾಗ ದೇಶ ವಿಭಜನೆಯ ಹೊಣೆಗಾರಿಕೆ ನೀಡಲಾಯಿತು.
* ದೇಶ ಇಬ್ಭಾಗಕ್ಕೆ ಕೇವಲ 5 ವಾರಗಳ ಕಾಲಾವಕಾಶ ನೀಡಲಾಗಿತ್ತು.
* ಆಗಸ್ಟ್ 9 ಮತ್ತು 14ರ ನಡುವೆಯೇ ರಾಡ್ ಕ್ಲಿಫ್ ಗಡಿ ರೇಖೆ ಗುರುತು ನಕಾಶೆ ಕೆಲಸ ಮುಗಿಸಿದ್ದ. ಆದರೆ ಕೆಲ ಗೊಂದಲಗಳಿಂದ ಇದಕ್ಕೆ ತಡೆ ಬಿದ್ದಿತ್ತು.
* ಪಂಜಾಬ್ ಪ್ರಾಂತ್ಯದ ಎರಡು ತಹಸೀಲ್ ಗಳು ಪಾಕಿಸ್ತಾನಕ್ಕೆ ಸೇರಿಸಲ್ಪಟ್ಟವು.
* ಮುಸ್ಲಿಮರ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಪಂಜಾಬ್ ಪ್ರಾಂತ್ಯದ ಗುರುದಾಸ್ ಪುರವನ್ನು ಪಾಕಿಸ್ತಾನಕ್ಕೆ ಸೇರಿಸಲಾಯಿತು. ಆದರೆ ಇಂದಿಗೂ ಅಲ್ಲಿಯ ಜನರನ್ನು ಪಾಕಿಸ್ತಾನದ ಮುಸ್ಲಿಮರು ತಮ್ಮವರೆಂದು ಒಪ್ಪಿಕೊಂಡಿಲ್ಲ!
*ಬೆಂಗಾಲ್ ಪ್ರಾಂತ್ಯದ ಮುಸ್ಲಿಮರೇ ಹೇರಳವಾಗಿದ್ದ ಮುರ್ಷಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ಪಾಕಿಸ್ತಾನದ ಧ್ವಜ ಹಾರಾಡತೊಡಗಿತ್ತು. ಆದರೆ ನಂತರ ಅದು ಭಾರತಕ್ಕೆ ಸೇರಿದ್ದು ಎಂದು ಅರಿವಾಯಿತು.
*ಕೇವಲ ಶೇ.2ರಷ್ಟು ಮುಸ್ಲಿಮರನ್ನು ಹೊಂದಿದ್ದ ಚಿತ್ತಗಾಂಗ್(ಈಗಿನ ಬಾಂಗ್ಲಾದೇಶ) ಪಾಕಿಸ್ತಾನಕ್ಕೆ ಸೇರಿಸಲ್ಪಟ್ಟಿತ್ತು.

English summary
Most us know that India and Pakistan divided ( 1947) and after got their Independence. But, thats not all the story!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X