ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಮೈತ್ರಿ ಮುರಿದುಕೊಂಡ ಜನಹಿತ ಕಾಂಗ್ರೆಸ್

By Mahesh
|
Google Oneindia Kannada News

ನವದೆಹಲಿ, ಆ. 28: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ತಿಂಗಳುಗಳ ಲೆಕ್ಕ ಮುಗಿಯುವ ಮುನ್ನವೇ ಎನ್ಡಿಎಯ ಮಿತ್ರಪಕ್ಷವೊಂದು ತನ್ನ ಸಖ್ಯವನ್ನು ಕಳೆದುಕೊಂಡಿದೆ. ಮೂರು ವರ್ಷಗಳ ಮೈತ್ರಿಯನ್ನು ಮುರಿದುಕೊಳ್ಳುತ್ತಿರುವುದಾಗಿ ಕುಲದೀಪ್ ಬಿಶ್ನೋಯ್ ನೇತೃತ್ವದ ಹರ್ಯಾಣ ಜನಹಿತ ಕಾಂಗ್ರೆಸ್(ಎಚ್ ಜೆಸಿ-ಬಿಎಲ್) ಗುರುವಾರ ಘೋಷಿಸಿದೆ. ಹಲವು ದಿನಗಳಿಂದ ನಡೆದಿದ್ದ ಆಂತರಿಕ ಕದನಕ್ಕೆ ಇಂದು ತೆರೆ ಬಿದ್ದಿದ್ದು, ಬಿಜೆಪಿ ಎಚ್ ಜೆಸಿ ಮೈತ್ರಿ ಮುರಿದಿದೆ.

ಹರ್ಯಾಣ ಜನಹಿತ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಕುಲದೀಪ್ ಬಿಶ್ನೋಯ್ ಮಾತನಾಡಿ, 'ಸ್ನೇಹಕ್ಕೆ ಬಿಜೆಪಿ ಅರ್ಹವ.ಲ್ಲ ನಾವೆಷ್ಟೇ ಪ್ರಯತ್ನ ಪಟ್ಟರೂ ಈ ಮೈತ್ರಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಮೈತ್ರಿ ವಿಷಯದಲ್ಲಿ ಬಿಜೆಪಿಯನ್ನ ನಂಬಲು ಸಾಧ್ಯವಿಲ್ಲ' ಎಂದು ಕಿಡಿಕಾರಿದ್ದಾರೆ. ಹಿಸಾರ್ ಲೋಕಸಭಾ ಕ್ಷೇತ್ರದಲ್ಲಿ ತನ್ನ ಸೋಲಿಗೆ ಬಿಜೆಪಿ ಒಳಸಂಚು ಮಾಡಿತ್ತು ಎಂದು ಬಿಶ್ನೋಯ್ ಗಂಭೀರ ಆರೋಪ ಮಾಡಿದ್ದಾರೆ.

Kuldeep Bishnoi led HJC to snap ties with BJP

ಹರ್ಯಾಣ ರಾಜ್ಯದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನಹಿತ್ ಕಾಂಗ್ರೆಸ್ಸಿನ ಈ ಬಂಡಾಯದ ನಡೆ ಕುತೂಹಲ ಮೂಡಿಸಿದೆ. ರಾಜ್ಯದ ಎಲ್ಲಾ 90 ಕ್ಷೇತ್ರಗಳಲ್ಲಿಯೂ ಬಿಜೆಪಿ ಸ್ಪರ್ಧಿಸುವಷ್ಟು ಬಲಿಷ್ಠವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿಕೊಂಡಿದ್ದಾರೆ. ಆದರೆ, ಎಚ್ ಜೆಸಿಯನ್ನು ಸುಲಭಕ್ಕೆ ತೆಗೆದು ಹಾಕುವಂತಿಲ್ಲ. ಆಡಳಿತಾರೂಢ ಕಾಂಗ್ರೆಸ್ ಯಾವ ರೀತಿ ಲಾಭ ಪಡೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಹರ್ಯಾಣ ಜನಹಿತ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲೂ ಸೋಲು ಕಂಡಿತ್ತು. ಬಿಜೆಪಿ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.ಆದರೆ, ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಸೀಟು ಹಂಚಿಕೆ ವಿಷಯ ಬಂದಾಗ ಬಿಶ್ನೋಯ್ ಭಾರಿ ಬೇಡಿಕೆ ಇಟ್ಟಿದ್ದರು. 40 ರಿಂದ 90 ಸೀಟುಗಳು ಬೇಕು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದಿದ್ದರು. ಇದಕ್ಕೆ ಬಿಜೆಪಿ ಒಪ್ಪಿರಲಿಲ್ಲ. ಕುಲದೀಪ್ ಬಿಶ್ನೋಯ್ ಅವರು ದಿವಂಗತ ಮುಖ್ಯಮಂತ್ರಿ ಭಜನ್ ಲಾಲ್ ಅವರ ಕಿರಿಯ ಪುತ್ರ (ಪಿಟಿಐ)

English summary
Kuldeep Bishnoi-led Haryana Janhit Congress (HJC-BL) on Thursday decided to snap its ties with BJP, putting an end to the prolonged tussle between the two parties which have been in an alliance for three years now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X