ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಪಾಕ್ ನಿರ್ಮಿಸಿದ ಬಂಕರ್‌ಗಳ ಕಥೆ

By ರೀಚಾ ಬಾಜಪೈ (ಕಾರ್ಗಿಲ್ ನಿಂದ)
|
Google Oneindia Kannada News

ನವದೆಹಲಿ, ಜು. 25 : ನಮ್ಮ ಪರಿಧಿಯೊಳಗೇ ನುಗ್ಗಿ, ನಮ್ಮವರಂತೆಯೇ ವೇಷ ಧರಿಸಿಕೊಂಡು, ನಮ್ಮ ಗಾಳಿ ನೀರನ್ನೇ ಸೇವಿಸಿ, ನಮ್ಮೆದುರೇ ಬಂಕರ್ ಗಳನ್ನು ಕಟ್ಟಿಕೊಂಡು, ನಮ್ಮ ವಿರುದ್ಧವೇ ಯುದ್ಧ ಹೂಡಿದ ಪಾಕಿಸ್ತಾನಿ ನುಸುಳುಕೋರರ ಕಥೆ ಮುಂದಿನ ಚಿತ್ರಸುದ್ದಿಯಲ್ಲಿ ಅನಾವರಣಗೊಳ್ಳುತ್ತದೆ.

ಕಾರ್ಗಿಲ್‌ನ ಟೈಗರ್ ಹಿಲ್ಸ್, ಹಮೋಟಿಗ್ಲಾ, ಟೊಲೋಲಿಂಗ್ ಮತ್ತಿತರ ಗುಡ್ಡಗಾಡು ಪ್ರದೇಶಗಳಲ್ಲಿ ಬಲಿಷ್ಠ ಬಂಕರ್ ಗಳನ್ನು ಕಟ್ಟಿದ ಶತ್ರುಪಡೆ ಭಾರತದ ವಿರುದ್ಧ ಭೀಕರ ದಾಳಿ ನಡೆಸಿತ್ತು. ಆದರೆ, ಎದೆಗುಂದದ ಭಾರತೀಯ ವೀರ ಸೇನಾನಿಗಳ ಪಡೆ ಅವರನ್ನು ಮೆಟ್ಟಿ ಜು.26ರಂದು ಭಾರತದ ಧ್ವಜ ಹಾರಿಸಿದ್ದು ಈಗ ಇತಿಹಾಸ.

ಬಲಿಷ್ಠ ಕಬ್ಬಿಣದಿಂದ ತಯಾರಿಸಿದ ಬಂಕರನ್ನು ಯಾವ ಗುಂಡು ಕೂಡ ಭೇದಿಸಲಾರದು. ಇಂಟರೆಸ್ಟಿಂಗ್ ಸಂಗತಿಯೇನೆಂದರೆ, ಭೂಮಿಯಾಳದಲ್ಲಿ ನಿರ್ಮಿಸಲಾಗುವ ಬಂಕರ್ ಗಳು ಇಡೀ ಬಟಾಲಿಯನ್ ಅನ್ನು ತನ್ನೊಳಗೆ ಸೇರಿಸಿಕೊಳ್ಳುವಷ್ಟು ದೊಡ್ಡದಾಗಿರುತ್ತವೆ. ಗುಡ್ಡಗಾಡು ಪ್ರದೇಶದಲ್ಲಿ ನೆಲವನ್ನು ಕೊರೆದು ಈ ಬಂಕರ್ ಗಳನ್ನು ಪಾಕಿಸ್ತಾನಿಯರು ನಿರ್ಮಿಸಿದ್ದರು. [ಕಾರ್ಗಿಲ್ ಕುರಿತ ವಿಶೇಷ ಲೇಖನಗಳು]

ಟೊಲೋಲಿಂಗ್ ನಲ್ಲಿರುವ ಪಾಕ್ ನಿರ್ಮಿತ ಬಂಕರ್

ಟೊಲೋಲಿಂಗ್ ನಲ್ಲಿರುವ ಪಾಕ್ ನಿರ್ಮಿತ ಬಂಕರ್

ಪಾಕಿಸ್ತಾನಿ ಪಡೆ ಟೊಲೋಲಿಂಗ್ ಗುಡ್ಡದ ಮೇಲೆ ನಿರ್ಮಿಸಿದ್ದ ಬಂಕರ್ ನ ಒಂದು ಮಾದರಿ.

ಪಾಕಿಸ್ತಾನಿಗಳು ನಿರ್ಮಿಸಿದ್ ಸೆಂಟ್ರಿ ಪೋಸ್ಟ್

ಪಾಕಿಸ್ತಾನಿಗಳು ನಿರ್ಮಿಸಿದ್ ಸೆಂಟ್ರಿ ಪೋಸ್ಟ್

ಈ ಸೆಂಟ್ರಿ ಪೋಸ್ಟ್ ನಲ್ಲಿ ಆಶ್ರಯ ಪಡೆದುಕೊಂಡು ಪಾಕಿ ಸೈನಿಕರು ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆದರೆ, ಮಣಿಯದ ಭಾರತೀಯರು ಕೊನೆಗೂ ಟೈಗರ್ ಹಿಲ್ಸ್ ಬಳಿಯಿದ್ದ ಸೆಂಟ್ರಿ ಪೋಸ್ಟನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಈಗಲೂ ಬುಲೆಟ್ಟಿನ ಗುರುತುಗಳನ್ನು ಇಲ್ಲಿ ಕಾಣಬಹುದು.

ಸೈನಿಕರಿಗೆ ತರಬೇತಿ ನೀಡುತ್ತಿದ್ದ ತಾಣ

ಸೈನಿಕರಿಗೆ ತರಬೇತಿ ನೀಡುತ್ತಿದ್ದ ತಾಣ

ಸಮುದ್ರಮಟ್ಟದಿಂದ 13 ಸಾವಿರ ಅಡಿ ಎತ್ತರದಲ್ಲಿರುವ ಬಹುಮುಖ್ಯವಾದ ಭಾರತೀಯ ಸೇನಾ ತರಬೇತಿ ತಾಣವಿದು. ಇಲ್ಲಿಯೇ ಶತ್ರುಪಡೆಯನ್ನು ಎದುರಿಸಿ, ಅವರನ್ನು ಬಗ್ಗುಬಡಿಯುವುದು ಹೇಗೆ ಎಂದು ಸೈನಿಕರಿಗೆ ತರಬೇಡಿ ನೀಡಲಾಗುತ್ತದೆ.

ಈ ಕಡಿದಾದ ಬೆಟ್ಟ ಕೂಡ ಪಾಕಿ ಪಾಲಾಗಿತ್ತು

ಈ ಕಡಿದಾದ ಬೆಟ್ಟ ಕೂಡ ಪಾಕಿ ಪಾಲಾಗಿತ್ತು

ಚಳಿಗಾಲದಲ್ಲಿ ಸಂಪೂರ್ಣ ಹಿಮಾಚ್ಛಾದಿತವಾಗುವ ಈ ಗುಡ್ಡಗಾಡು ಪ್ರದೇಶ ಕೂಡ ಪಾಕಿಸ್ತಾನಿಯರ ಪಾಲಾಗಿತ್ತು.

ಕಾರ್ಗಿಲ್ ಗೆ ಹೋಗುವ ದಾರಿ

ಕಾರ್ಗಿಲ್ ಗೆ ಹೋಗುವ ದಾರಿ

ಇದೇ ದಾರಿಯನ್ನು ಬಳಸಿ ಪಾಕಿಸ್ತಾನ ನುಸುಳುಕೋರರು ಕಾರ್ಗಿಲ್ ಪ್ರದೇಶವನ್ನು ಪ್ರವೇಶಿಸಿದರು.

ಪಾಕಿಸ್ತಾನಿ ಸೈನಿಕರು ಆಕ್ರಮಿಸಿಕೊಂಡಿದ್ದ ಗುಡ್ಡ

ಪಾಕಿಸ್ತಾನಿ ಸೈನಿಕರು ಆಕ್ರಮಿಸಿಕೊಂಡಿದ್ದ ಗುಡ್ಡ

ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಡೀ ಟೊಲೋಲಿಂಗ್ ಹಿಲ್ ಅನ್ನು ಪಾಕಿಸ್ತಾನಿ ಸೈನಿಕರು ಆಕ್ರಮಿಸಿಕೊಂಡಿದ್ದರು. ಅದನ್ನು ಭಾರತೀಯರು ಮತ್ತೆ ಹೇಗೆ ವಶಪಡಿಸಿಕೊಂಡರು ಎಂಬುದು ಮತ್ತೊಂದು ದೊಡ್ಡ ಕಥೆ.

English summary
The photo gallery will tell you how Pakistani infiltrators geared themselves to wage a war against the Indians in their own land. They infiltrated dressed as civilians and built several underground bunkers on Tiger Hill, Hamotigla, top, Tololing and other hills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X