ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನ: ಹೆಸರು ಬಹುತೇಕ ಅಂತಿಮ

|
Google Oneindia Kannada News

ನವದೆಹಲಿ, ಮೇ 27: ಹಾಲಿ ಬಿಜೆಪಿಯ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಗೃಹ ಖಾತೆಯ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ಆಯಕಟ್ಟಿನ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಇಬ್ಬರ ಹೆಸರು ಕೇಳಿ ಬರುತ್ತಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರಾದ ಜೆ ಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಆಪ್ತ ಅಮಿತ್ ಶಾ ಹೆಸರು ರಾಷ್ಟ್ರಾಧ್ಯಕ್ಷ ಹುದ್ದೆಗೆ ಚಾಲ್ತಿಯಲ್ಲಿದೆ.

ದೆಹಲಿಯ ಜಂಡೇವಾಲದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ (RSS) ಕೇಂದ್ರ ಕಚೇರಿಯಲ್ಲಿ ಯಾರ ಹೆಸರನ್ನು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಅಂತಿಮ ಮಾಡಬೇಕೆಂದು ಬಿಜೆಪಿ ಮತ್ತು ಸಂಘಟನೆಯ ಪ್ರಮುಖರ ನಡುವೆ ಗಂಭೀರ ಚರ್ಚೆ ನಡೆಯುತ್ತಿದೆ.

J P Nadda emerged front runner for BJP National President post

ಆದರೆ ಇತ್ತೀಚಿನ ತಾಜಾ ಬೆಳವಣಿಗೆಗಳ ಪ್ರಕಾರ ಹಿಮಾಚಲ ಪ್ರದೇಶ ಮೂಲದ, ಮಿತಭಾಷಿ ನಡ್ಡಾ ಅವರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಪ್ರಸಕ್ತ ರಾಜ್ಯಸಭಾ ಸದಸ್ಯರಾಗಿರುವ ನಡ್ಡಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು RSS ಹೆಚ್ಚಿನ ಒಲವು ತೋರುತ್ತಿದೆ ಎಂದು ವರದಿಯಾಗಿದೆ.

ಗೃಹ ಖಾತೆಯನ್ನು ವಹಿಸಿ ಕೊಂಡಿರುವ ರಾಜನಾಥ್ ಸಿಂಗ್ ಪಕ್ಷದ ಅತ್ಯುನ್ನತ ಸ್ಥಾನದಲ್ಲೇ ಮುಂದುವರಿಯಲು ಬಯಸಿದ್ದವರು. ಆದರೆ, ಬದಲಾದ ಸನ್ನಿವೇಶ, RSS ನಿರ್ದೇಶನದ ಮೇರೆಗೆ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ.

ರಾಜನಾಥ್ ಸಿಂಗ್ ಸಂಪುಟ ಸೇರುವ ಸಾಧ್ಯತೆ ದಟ್ಟವಾಗುತ್ತಿದ್ದಂತೆಯೇ, ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅಧ್ಯಕ್ಷ ಸ್ಥಾನದ ಮೇಲೆ ಲಾಬಿ ನಡೆಸಲಾರಂಭಿಸಿದರು. ಇದಕ್ಕಾಗಿ RSS ಮತ್ತು ಅಡ್ವಾಣಿ ಬಳಿ ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆಯೇ ಮಾತುಕತೆ ನಡೆಸಿದ್ದರು.

RSS ಕೂಡಾ ಗಡ್ಕರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಒಲವು ತೋರಿತ್ತು. ಆದರೆ ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಗಡ್ಕರಿ ಸೇರ್ಪಡೆ ಬಗ್ಗೆ ಒತ್ತಡ ಹೇರಿದ್ದರಿಂದ ಗಡ್ಕರಿ ಪ್ರಯತ್ನಕ್ಕೆ ಹಿನ್ನಡೆಯಾಯಿತು.

English summary
Party General Secretary and Rajya Sabha member from Himachal Pradesh J P Nadda emerged front runner for BJP National President post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X