ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನಿಗೆ ಅಡ್ಡಬಿದ್ದ ಇಸ್ರೋ ಚೇರ್ಮನ್

By Ashwath
|
Google Oneindia Kannada News

ತಿರುಪತಿ, ಜೂ. 28: ಫ್ರಾನ್ಸ್‌ನ ಸ್ಪಾಟ್‌ 7 ಹೆಸರಿನ ದೂರ ಸಂವೇದಿ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್‌ ಶುಕ್ರವಾರ ಪತ್ನಿ ಸಮೇತರಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪಿಎಸ್‌ಎಲ್‌ವಿ ಸಿ 23 ರಾಕೆಟ್‌ ಮೂಲಕ ಜೂ.30 ಸೋಮವಾರ ಈ ಉಪಗ್ರಹ ಬೆಳಗ್ಗೆ 9.52ಕ್ಕೆ ಉಡ್ಡಯನವಾಗಲಿದೆ. ವಾಣಿಜ್ಯ ಉದ್ದೇಶಕ್ಕಾಗಿ ಈ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಈ ಕಾರ್ಯ‌ಕ್ರಮವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದು, ಅವರು ಶ್ರೀಹರಿಕೋಟಾಕ್ಕೆ ಆಗಮಿಸುವ ಸಾಧ್ಯತೆ ಇದೆ.

ಇಸ್ರೋದ ತಂಡವೊಂದು ಪ್ರಧಾನಿಯನ್ನು ಭೇಟಿಯಾಗಿ ವೀಕ್ಷಿಸಲು ಬರುವಂತೆ ಆಹ್ವಾನ ನೀಡಿದ್ದಾರೆ. ಮುಂದಿನ ಪುಟದಲ್ಲಿ ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಕಿರು ಮಾಹಿತಿಗಳನ್ನು ನೀಡಲಾಗಿದೆ.

 ತಿಮಪ್ಪನ ದರ್ಶನ ಪಡೆದ ಇಸ್ರೋ ಚೇರ್ಮನ್

ತಿಮಪ್ಪನ ದರ್ಶನ ಪಡೆದ ಇಸ್ರೋ ಚೇರ್ಮನ್

ಫ್ರಾನ್ಸ್‌ನ ಸ್ಪಾಟ್‌ 7 ಹೆಸರಿನ ದೂರ ಸಂವೇದಿ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್‌ ಶುಕ್ರವಾರ ಪತ್ನಿ ಸಮೇತರಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪ್ರಸಾದ ಸೇವಿಸುತ್ತಿರುವ ಇಸ್ರೋ ದಂಪತಿ

ಪ್ರಸಾದ ಸೇವಿಸುತ್ತಿರುವ ಇಸ್ರೋ ದಂಪತಿ

ರಾಧಕೃಷ್ಣನ್‌ ಮತ್ತು ಪದ್ಮಿನಿ ದಂಪತಿ ದೇವರ ಪೂಜೆಯ ಬಳಿಕ ಪ್ರಸಾದವನ್ನು ಸೇವಿಸುತ್ತಿರುವುದು

 ಐದು ವಿದೇಶಿ ಉಪಗ್ರಹಳು:

ಐದು ವಿದೇಶಿ ಉಪಗ್ರಹಳು:

ಪಿಎಸ್‌ಎಲ್‌ವಿ ಸಿ 23 ರಾಕೆಟ್‌ ಮೂಲಕ ಉಡಾವಣೆಯಾಗುತ್ತಿರುವ ಫ್ರಾನ್ಸ್‌ನ ಸ್ಪಾಟ್‌ 7 ಭೂ ಸರ್ವೇಕ್ಷಣಾ ಉಪಗ್ರಹವಾಗಿದೆ. ಇದರೊಂದಿಗೆ ಕೆನಡಾದ 2, ಜರ್ಮನಿ ಮತ್ತು ಸಿಂಗಾಪುರದ ತಲಾ 1 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡುತ್ತಿದೆ.

ಪ್ರಧಾನಿ ಮೋದಿ ಭೇಟಿ ಸಾಧ್ಯತೆ:

ಪ್ರಧಾನಿ ಮೋದಿ ಭೇಟಿ ಸಾಧ್ಯತೆ:

ಇಸ್ರೋದ 2012 ಸೆಪ್ಟೆಂಬರ್‌ನಲ್ಲಿ ನಡೆದ 100 ಕಾರ್ಯ‌ಕ್ರಮಕ್ಕೆ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಸಾಕ್ಷಿಯಾಗಿದ್ದರು. ಇದೀಗ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಇಸ್ರೋ ವಿದೇಶಿ ಉಪಗ್ರಹಗಳಿಗಾಗಿಯೇ ರಾಕೆಟ್‌ ಉಡಾವಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಹರಿಕೋಟಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

 ಉಪಗ್ರಹ ಉಡಾವಣೆ ಮೂರು ನಿಮಿಷ ವಿಳಂಬ:

ಉಪಗ್ರಹ ಉಡಾವಣೆ ಮೂರು ನಿಮಿಷ ವಿಳಂಬ:

ಈ ಹಿಂದೆ ಇಸ್ರೋ ಸೋಮವಾರ ಬೆಳಗ್ಗೆ 9.49ಕ್ಕೆ ಪಿಎಸ್‌ಎಲ್‌ವಿ ಸಿ 23 ರಾಕೆಟ್‌ನ್ನು ಉಡಾವಣೆ ಮಾಡುವುದಾಗಿ ಪ್ರಕಟಿಸಿತ್ತು. ಆದರೆ ಬಾಹ್ಯಕಾಶದಲ್ಲಿರುವ ಉಪಗ್ರಹಗಳ ಅವಶೇಷಗಳು ಅಡ್ಡಿ ಬರುವ ಕಾರಣಕ್ಕಾಗಿ ಇಸ್ರೋ ತನ್ನ ಪಿಎಸ್‌ಎಲ್‌ವಿ ಸಿ 23 ರಾಕೆಟ್‌ನ್ನು ಮೂರು ನಿಮಿಷ ತಡವಾಗಿ ಉಡಾವಣೆ ಮಾಡಲಿದೆ. ಉಪಗ್ರಹ ಉಡಾವಣೆಗೆ ಶನಿವಾರದಿಂದ ಕೌಂಡ್‌ಡೌನ್‌ ಆರಂಭವಾಗಿದೆ. ಇದುವರೆಗೆ ಇಸ್ರೋ ಪಿಎಸ್‌ಎಲ್‌‌ ಸರಣಿಯಲ್ಲಿ 26 ರಾಕೆಟ್‌‌ಗಳನ್ನು ಉಡಾವಣೆ ಮಾಡಿದ್ದು 25 ಪ್ರಯತ್ನಗಳು ಯಶಸ್ವಿಯಾಗಿದೆ.

English summary
Chairman of the Indian Space Research Organisation, Dr. K.Radhakrishnan had Offered prayers to Lord Venkateswara at Tirumala on friday prior to the launch of PSLV C-23 lifting off from the Satish Dhawan Space Research Centre at Sriharikota in Andhra Pradesh on june 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X