ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC ಟಿಕೆಟ್ ಬುಕ್ಕಿಂಗ್ ಈಗ ಬುಲೆಟ್ ಟ್ರೈನ್!

By Mahesh
|
Google Oneindia Kannada News

ಬೆಂಗಳೂರು, ಜು.7: ಕನ್ನಡಿಗ ಡಿವಿ ಸದಾನಂದ ಗೌಡ ಅವರು ಚೊಚ್ಚಲ ಬಾರಿಗೆ ರೈಲ್ವೆ ಬಜೆಟ್ ಮಂಡನೆಗೂ ಮುನ್ನ ಐಆರ್ ಸಿಟಿಸಿ ವೆಬ್ ತಾಣ ಸುಧಾರಣೆ ತ್ವರಿತವಾಗಿ ಟಿಕೆಟ್ ನೀಡಿಕೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ, ಭಾರತೀಯ ರೈಲ್ವೆಯ ಟಿಕೆಟ್ ಬುಕ್ಕಿಂಗ್ ಹೊಸ ವಿಭಾಗ ಈಗ ಬುಲೆಟ್ ಟ್ರೈನ್ ವೇಗದಲ್ಲಿ ಗ್ರಾಹಕರ ಸ್ನೇಹಿಯಾಗಿ ವರ್ತಿಸಲಿದೆಯಂತೆ.

ಆನ್ ಲೈನ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡಿಸುವವರಿಗೆ ಐಆರ್‌ಸಿಟಿಸಿ ಎಂಬ ಆನ್‌ಲೈನ್ ತಾಣ ಚಿರಪರಿಚಿತ. ಆದರೆ, ಸದಾ ಸರ್ವರ್ ಎರರ್, ನಾಟ್ ಎಬಲ್ ಟು ಲಾಗ್ ಇನ್, ಟೈಮ್ ಔಟ್ ಮುಂತಾದ ಕಿರಿಕಿರಿ ಅನುಭವಿಸುವವರೇ ಹೆಚ್ಚು. ಟಿಕೆಟ್ ಕಾಯ್ದಿರಿಸಲು ಹೆಣಗಾಡಿ ಟ್ರಾವೆಲ್ ಏಜೆಂಟ್ ಗಳ ಮೊರೆ ಹೋಗುವವರೇ ಅಧಿಕ. ಈ ತೊಂದರೆ ತಪ್ಪಿಸಲು ಹೊಸ ಇ ಟಿಕೆಟಿಂಗ್ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಎರಡು ವರ್ಷಗಳ ಹಿಂದೆ ಘೋಷಿಸಿತ್ತು. ಈಗ ಇ ಟಿಕೆಟಿಂಗ್ ತಾಣ ಗ್ರಾಹಕರಿಗೆ ಲಭ್ಯವಾಗಿದೆ.[ಡಿವಿಎಸ್ ರಿಂದ ಏನು ನಿರೀಕ್ಷೆಯಿದೆ?]

ಏನು ವಿಶೇಷ?: ಐಆರ್ ಸಿಟಿಸಿ ವೆಬ್ ತಾಣದಲ್ಲಿ ಬೆಳ್ಳಂಬೆಳಗ್ಗೆ ತತ್ಕಾಲ್ ಕೌಂಟರ್ ತೆರೆದಾಗ ಟಿಕೆಟ್ ಕಾಯ್ದಿರಿಸಲು ತೀರಾ ಹೆಣಗಾಡಬೇಕಿತ್ತು. ಹೊಸ ತಾಣ ಹೆಚ್ಚಿನ ಬ್ಯಾಂಡ್ ವಿಂಡ್ತ್ ಹೊಂದಿದ್ದು, ತ್ವರಿತವಾಗಿ ಗ್ರಾಹಕರಿಗೆ ಬಾಗಿಲು ತೆರೆಯಲಿದೆ ಹಾಗೂ ಅಷೇ ವೇಗವಾಗಿ ಟಿಕೆಟ್ ಬುಕ್ಕಿಂಗ್ ಸಾಧ್ಯವಿದೆ.

ಆದರೆ, ಹೊಸ ಪೋರ್ಟಲ್‌ನಲ್ಲಿ ಗ್ರಾಹಕರು ಮೊದಲಿಗೆ ತಮ್ಮ ಹೆಸರನ್ನು ನೋಂದಾಯಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೆ ಯಾವುದೇ ಶುಲ್ಕ ಇಲ್ಲ. ಆದರೆ, ಆರಂಭದಲ್ಲಿ ತಿಂಗಳಿಗೆ ಒಬ್ಬ ಬಳಕೆದಾರರಿಗೆ (ಯೂಸರ್ ಐಡಿ) 8 ಬಾರಿ ಮಾತ್ರ ವ್ಯವಹಾರ ಮಾಡಲು ಅವಕಾಶ ನೀಡಲಾಗುತ್ತದೆ.

IRCTC Next Generation e Ticketing System launched

ಇ ಟಿಕೆಟಿಂಗ್ ವ್ಯವಸ್ಥೆ ವೆಬ್ ತಾಣ ಪ್ರತಿ ದಿನ ಮಧ್ಯರಾತ್ರಿ 12.30ಕ್ಕೆ ತೆರೆಯುತ್ತದೆ, ಬಳಿಕ ರಾತ್ರಿ 11.30ಕ್ಕೆ ಮುಚ್ಚುತ್ತದೆ. ಇನ್ಮುಂದೆ ಮೊಬೈಲ್ ಫೋನುಗಳಲ್ಲಿಯೂ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಈ ಹೊಸ ವ್ಯವಸ್ಥೆಯಿಂದ ನಕಲಿ ಟಿಕೆಟ್ ಕೊರತೆ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರುತ್ತಿದ್ದ ಏಜೆಂಟರುಗಳಿಗೆ ಕಡಿವಾಣ ಬೀಳಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಐಆರ್‌ಸಿಟಿಸಿಗಿಂತ ಕಡಿಮೆ ಸೇವಾ ಶುಲ್ಕವನ್ನು ವಿಧಿಸಲಾಗಿದೆ. ಐಆರ್‌ಸಿಟಿಸಿಯಲ್ಲಿ ಒಂದು ಸ್ಲೀಪರ್ ಟಿಕೆಟಿಗೆ 10 ರೂ., ಮೇಲ್ದರ್ಜೆಯ ಟಿಕೆಟುಗಳಿಗೆ 20 ರೂ. ಸೇವಾಶುಲ್ಕವಿದ್ದರೆ, ಈ ಹೊಸ ತಾಣದಲ್ಲಿ ಸ್ಲೀಪರ್‌ಗೆ 5 ರೂ. ಮಾತ್ರ. ಉಳಿದ ಮೇಲ್ದರ್ಜೆ ಟಿಕೆಟುಗಳಿಗೆ 10 ರೂ. ಇರುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

English summary
Booking your Train ticket online in India: The IRCTC website Now more strong, Super Fast like a Bullet Train.IRCTC has come out with a advanced Next Generation e Ticketing System to make train ticket booking easy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X