ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನ ಬಳಿ ತೆರಳಲು ತಲೆಗೆ ನಾಲ್ಕೇ ರೂಪಾಯಿ!

|
Google Oneindia Kannada News

ಹೊಸದೆಹಲಿ, ಸೆ. 23 : ಮಂಗಳಯಾನ ಸದ್ದಿಲ್ಲದೇ ಮತ್ತೊಂದು ಸಾಧನೆಯನ್ನು ಮಾಡಿದೆ. ಮಂಗಳನ ಅಂಗಳಕ್ಕೆ ಕೆಲವೇ ಗಂಟೆಗಳ ಅಂತರದಲ್ಲಿ ಇಳಿಯಲಿರುವ ನೌಕೆ ಅತಿ ಕಡಿಮೆ ವೆಚ್ಚದ ಪ್ರಪಂಚದಲ್ಲೇ ಬಾಹ್ಯಾಕಾಶ ನೌಕೆ ಎಂಬ ಶ್ರೇಯವನ್ನು ತನ್ನದಾಗಿಸಿಕೊಂಡಿದೆ.

ಮಂಗಳನೆಡೆಗೆ ಪ್ರಯಾಣ ಬೆಳೆಸಿರುವ ಭಾರತೀಯ 'ಮಂಗಳ ಯಾನ' ಅತಿ ಕಡಿಮೆ ವೆಚ್ಚದ ಬಾಹ್ಯಾಕಾಶ ನೌಕೆ ಎಂದು ಹೆಸರು ಪಡೆದುಕೊಂಡಿದೆ. ಪ್ರತಿಯೊಬ್ಬ ಭಾರತೀಯ ನಾಗರಿಕರ ತಲೆಗೆ 4 ರೂಪಾಯಿ ವೆಚ್ಚವಾಗಿದೆ ಎಂದು ಹೇಳಲಾಗಿದೆ.

ಮಂಗಳನ ಸಮೀಪ ತೆರಳಿರುವ ಬಾಹ್ಯಾಕಾಶ ನೌಕೆ ಸೋಮವಾರವಷ್ಟೇ(ಸೆ. 24) ಮಂಗಳನ ಅಂಗಳಕ್ಕಿಳಿದಿರುವ ಅಮೆರಿಕದ ನೌಕೆಯ ವಿರುದ್ಧ ದಿಕ್ಕಿನಲ್ಲಿ 'ಮಾಮ್‌' ಇಳಿಯಲಿದೆ.(ಮಂಗಳಯಾನದ ಅಂತಿಮ ಚಾಲೆಂಜ್ ಗೆದ್ದ ಇಸ್ರೋ)

mars

ಒಂದು ನ್ಯಾನೋ ಕಾರಿನ ಗಾತ್ರದಷ್ಟಿರುವ ಮಂಗಳಯಾನ (ಮಾರ್ಸ್‌ ಅರ್ಬಿಟರ್ ಮಿಷನ್) ದಾಖಲೆ ವೆಚ್ಚದಲ್ಲಿ ಮತ್ತು ದಾಖಲೆ ಸಮಯದಲ್ಲಿ ನಿರ್ಮಾಣವಾಗಿದೆ. ಮಂಗಳಯಾನಕ್ಕೆ ಒಟ್ಟು 450 ಕೋಟಿ ರೂ. ಅಥವಾ 67 ಮಿಲಿಯನ್‌ ಡಾಲರ್‌ವ ವೆಚ್ಚ ಮಾಡಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ನಿರ್ಮಾಣ ಮಾಡಿರುವ ನೌಕೆ ಮಂಗಳನ ತಲುಪಲು ಅಂದರೆ 670 ಮಿಲಿಯನ್‌ ಕಿಮೀ ಕ್ರಮಿಸುವ ಶಕ್ತಿ ಪಡೆದುಕೊಂಡಿದೆ.(ಮಂಗಳಯಾನ: 300 ದಿನ ಯಶಸ್ವಿ, 23 ದಿನ ಬಾಕಿ)

ಆದರೆ ಇಡೀ ಪ್ರಪಂಚದಲ್ಲೇ ಇಷ್ಟು ದೊಡ್ಡ ಗುರಿ ಹೊಂದಿರುವ ನೌಕೆಗೆ ಇಷ್ಟು ಕಡಿಮೆ ವೆಚ್ಚವಾಗಿರುವುದು ಇದೆ ಮೊದಲು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಂಗಳಯಾನಕ್ಕೆ ಹಾಲಿವುಡ್‌ ಸಿನಿಮಾ 'ಗ್ರಾವಿಟಿ ಕಾಸ್ಟ್ಸ್' ಗಿಂತ ಕಡಿಮೆ ವೆಚ್ಚ ತಗುಲಿದೆ ಎಂದು ಒಮ್ಮೆ ಹೇಳಿದ್ದರು.

ನೌಕೆ ತಯಾರಿಕೆ ಗುಣಮಟ್ಟದಲ್ಲಿ ಯಾವ ಹೊಂದಾಣಿಕೆ ಮಾಡಿಕೊಂಡಿಲ್ಲ. ಇದು ಕಡಿಮೆ ವೆಚ್ಚದ ಇಂಜಿನ್‌ ಆಗಿರಬಹುದು. ಆದರೆ ಎರಡು ವರ್ಷಗಳ ಸತತ ಪರಿಶ್ರಮದ ಮೂಲಕ ತಯಾರು ಮಾಡಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತ ಮುಂದಿನ ಪೀಳಿಗೆಯ ತಂತ್ರಜ್ಞಾನದತ್ತ ಹೆಜ್ಜೆ ಇಟ್ಟಿರುವುದು ಮಂಗಳಯಾನದಿಂದ ಮತ್ತೊಮ್ಮೆ ಸಾಬೀತಾಗಿದೆ.

English summary
India's space mission to Mars-Mangalyaan is not only the first ever indigenous mission to the planet, but also the cheapest. It cost us all a mere Rs 4 per person. The size of a Nano car, the golden satellite was completed in record time at a record cost of Rs 450 crores or $67 million dollar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X