ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಂತ್ರಿಕ ಪರಿಣತ ಐಎಂ ಉಗ್ರ ಬಲೆಗೆ ಬಿದ್ದ

By Mahesh
|
Google Oneindia Kannada News

ಸಹರಾನ್‌ಪುರ(ಉ.ಪ್ರ), ಸೆ.6: ಭಾರತದ ವಿವಿಧೆಡೆ ವಿದ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ಹಾಕಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಶಂಕಿತ ಉಗ್ರ ತಾಂತ್ರಿಕ ಪರಿಣತ ಅಜಾಜ್ ಶೇಖ್ ನನ್ನು ದೆಹಲಿ ಪೊಲೀಸರ ವಿಶೇಷ ತಂಡ ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ಬಂಧಿಸಿದೆ.

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಹೊಂಚು ಹಾಕಿಕೊಂಡು ಕುಳಿತ್ತಿದ್ದ ದೆಹಲಿ ವಿಶೇಷ ಪೊಲೀಸ್ ತಂಡದ ಎಸೆದ ಬಲೆಗೆ ಶಂಕಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರ ಆಜಾಜ್ ಶೇಖ್‌ ಬಿದ್ದಿದ್ದಾನೆ. ಪುಣೆಯ ಕಾಲ್ ಸೆಂಟರ್ ನಲ್ಲಿ ನೌಕರಿ ಮಾಡಿಕೊಂಡಿದ್ದ ಶೇಖ್ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುವುದರಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದು ಬಂದಿದೆ.

2009ರಿಂದ ನಿಷೇಧಿತ ಉಗ್ರ ಸಂಘಟನೆ ಜೊತೆ ಗುರುತಿಸಿಕೊಂಡಿರುವ ಶೇಖ್ ಹಿಂದೂಗಳ ಪವಿತ್ರ ಕ್ಷೇತ್ರವಾದ ವಾರಣಾಸಿ ಹಾಗೂ ಜಾಮಾ ಮಸೀದಿಯ ಸ್ಫೋಟದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Indian Mujahideen's Alleged 'Technical Expert' Arrested from UP

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಯಾಸೀನ್‌ ಭಟ್ಕಳ್‌ ಹಾಗೂ ಆತನ ಸಹಚರ ಅಸಾದುಲ್ಲಾ ಅಕ್ತರ್‌ನನ್ನು ಬಿಹಾರ- ನೇಪಾಳ ಗಡಿಯಲ್ಲಿ 2013ರಲ್ಲಿ ಭದ್ರತಾ ಪಡೆ ಪೊಲೀಸರು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2008ರಲ್ಲಿ ಸಹೋದರ ರಿಯಾಜ್ ಜೊತೆ ಸೇರಿ ಯಾಸಿನ್ ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನು ಕಟ್ಟಿದ್ದ. ಭಾರತ ಇದನ್ನು ನಿಷೇಧಿತ ಭಯೋತ್ಪಾದಕ ಗುಂಪು ಎಂದು ಘೋಷಿಸಿದ ಮೇಲೆ ಅಮೆರಿಕ ಕೂಡ 2011ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಅನ್ನು ನಿಷೇಧಿತ ಸಂಘಟನೆ ಎಂದು ಘೋಷಿಸಿತ್ತು.

ಅಹಮದಾಬಾದ್, ಸೂರತ್, ಬೆಂಗಳೂರು, ಪುಣೆ, ದಿಲ್ಲಿ ಹಾಗೂ ಹೈದರಾಬಾದ್‌ಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತೊಡಗಿದ್ದ ಯಾಸೀನ್, ರಿಯಾಜ್, ಅಬ್ದುಲ್ ಕರೀಂ ಅಲಿಯಾಸ್ ತುಂಡಾ, ಮೋನು ಸೇರಿದಂತೆ ಅನೇಕ ಆರೋಪಿಗಳ ಪೈಕಿ ಹಲವರನ್ನು ಜೈಲಿಗೆ ಕಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

English summary
An alleged Indian Mujahideen operative, believed to be the 'technical expert' of the banned terror organization, was arrested by the special cell of the Delhi Police from Saharanpur in western Uttar Pradesh last night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X