ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಪ್ರವಾಸಿಗರಿಗೆ ವಿಮಾನ ನಿಲ್ದಾಣದಲ್ಲೇ ವೀಸಾ

|
Google Oneindia Kannada News

ನವದೆಹಲಿ, ಸೆ. 22 : ಭಾರತಕ್ಕೆ ಬಂದಿಳಿಯುವ ಅಮೆರಿಕ ಪ್ರವಾಸಿಗರಿಗೆ ವಿಮಾನ ನಿಲ್ದಾಣದಲ್ಲೇ ವೀಸಾ ನೀಡುವ ಪ್ರಕ್ರಿಯೆ ಜಾರಿ ಮಾಡಲು ಚಿಂತಿಸಲಾಗಿದೆ. ಸೆ. 26 ಅಂದರೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಒಳಗಡೆ ಇದು ಘೋಷಣೆಯಾಗುವ ನಿರೀಕ್ಷೆಯಿದೆ.

ಕೇಂದ್ರ ಗೃಹ ಸಚಿವಾಲಯ ಈ ಬಗೆಯ ಕಾರ್ಯಯೋಜನೆಯಲ್ಲಿ ನಿರತವಾಗಿದ್ದು ಪ್ರಧಾನಿ ಅಮೆರಿಕ ಭೇಟಿ ವೇಳೆಗೆ ಎಲ್ಲವೂ ಅಂತಿಮವಾಲಿದೆ. ಗೃಹ ಸಚಿವಾಲಯದೊಂದಿದೆ ಪ್ರವಾಸೋದ್ಯಮ ಇಲಾಖೆಯೂ ಕೈಜೋಡಿಸಿದೆ ಎಂದು ಮೂಲಗಳು ತಿಳಿಸಿವೆ.(ಅರ್ಜಿ ಹಾಕದೆ ಅಮೆರಿಕ ವೀಸಾ ಪಡೆದ ಮೋದಿ!)

modi-obama

ಆದರೆ ಪ್ರವಾಸಿಗರಿಗೆ ಭಾರತದಲ್ಲಿ ನೆಲೆ ನಿಲ್ಲಲು ಕೇವಲ 30 ದಿನ ಅವಕಾಶ ನೀಡಲಾಗುತ್ತದೆ. ಜನವರಿ 2010ರಲ್ಲಿ 5 ದೇಶದ ನಾಗರಿಕರಿಗೆ ವಿಮಾನ ನಿಲ್ದಾಣದಲ್ಲಿ ವೀಸಾ(ವಿಒಎ) ನೀಡುವ ಸೌಲಭ್ಯ ಕಲ್ಪಿಸಲಾಗಿತ್ತು. ಈನಂತರ ಅದನ್ನು 11 ದೇಶಗಳಿಗೆ ವಿಸ್ತರಿಸಲಾಯಿತು. ಫಿನ್‌ಲ್ಯಾಂಡ್‌, ಜಪಾನ್‌, ನ್ಯೂಜಿಲೆಂಡ್‌, ಸಿಂಗಪುರ್, ಲುಕ್ಸೆಂಬರ್ಗ್, ಕಾಂಬೋಡಿಯಾ, ಮಯನ್ಮಾರ್‌, ಸೌತ್‌ ಕೋರಿಯಾದಂಥ ದೇಶಗಳ ಪ್ರವಾಸಿಗರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.

ಆದರೆ ಭಾರತ ಮತ್ತು ಅಮೆರಿಕ ಎರಡು ದೇಶಗಳು ಇಲ್ಲಿಯವರೆಗೆ ಸ್ಥಳದಲ್ಲೇ ವೀಸಾ ನೀಡುವ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದವು. ಈಗ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಉತ್ತಮಗೊಳ್ಳುವ ನಿರೀಕ್ಷೆ ಕಂಡುಬಂದಿದೆ. (ಇನ್ನು ಬೆಂಗಳೂರಿನಲ್ಲಿ ಸಿಗಲಿದೆ ಇಸ್ರೇಲ್ ವೀಸಾ)

ಪ್ರತಿವರ್ಷ ಅಮೆರಿಕದಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ 10 ಲಕ್ಷದಷ್ಟಿದೆ ಎಂಬ ಅಂದಾಜಿದ್ದು ಸ್ಥಳದಲ್ಲೇ ವೀಸಾ ನೀಡುವ ಪ್ರಕ್ರಿಯೆ ಜಾರಿಯಾದರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಲಿದೆ. ಹೆಚ್ಚು ಪ್ರವಾಸಿಗರು ಆಗಮಿಸಬಹುದು ಎಂದು ಹೇಳಲಾಗಿದೆ.(ಯುಎಸ್ ನಲ್ಲಿ ಹೊಸ ಭಾರತೀಯ ವೀಸಾ ಕೇಂದ್ರಗಳು)

ಒಂದು ಕಾಲದಲ್ಲಿ ನರೇಂದ್ರ ಮೋದಿಗೆ ವೀಶಾ ನಿರಾಕರಿಸಿದ್ದ ಅಮೆರಿಕ ಈಗ ತಾನೆ ಆಹ್ವಾನ ನೀಡಿತ್ತು. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿ ಅವರನ್ನು ಅಭಿನಂದಿಸಿತ್ತು. ಮೋದಿ ಸದ್ಯವೇ ಅಮೆರಿಕಕ್ಕೆ ಭೇಟಿ ನೀಡಲಿದ್ದು ಎರಡೂ ದೇಶಗಳ ಸಂಬಂಧ ಬೆಳವಣಿಗೆ ಕುರಿತು ಮಾತುಕತೆ ನಡೆಯಲಿದೆ.

English summary
India is working on a proposal for Visa on Arrival (VoA) facility for US tourists, one of the big-ticket announcements expected to be made during Prime Minister Narendra Modi's high-profile visit to the US, beginning on September 26. The Ministry of Home Affairs (MHA) is working overtime to finish the work on the VoA proposal to finalise it in time for the Prime Minister's visit, according to government sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X