ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಪುಣ್ಯ ತಿಥಿ, ಮೋದಿಯಿಂದ ಸ್ಮರಣೆ

By Mahesh
|
Google Oneindia Kannada News

ಬೆಂಗಳೂರು, ಮೇ.21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 23ನೇ ಪುಣ್ಯತಿಥಿ ಸಮಾರಂಭವನ್ನು ಬುಧವಾರ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರು 'ವೀರ್ ಭೂಮಿ' ಗೆ ತೆರಳಿ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು. ಈ ನಡುವೆ ಭಾವಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಸ್ಮರಿಸಿ ಮಾಡಿರುವ ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ.

ಉಳಿದಂತೆ ವೀರ್ ಭೂಮಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೆ ಪುತ್ರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಅಳಿಯ ರಾಬರ್ಟ್ ವಧ್ರಾ ಅವರು ಶಾಂತಿ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1991 ರ ಮೇ 21 ರಂದು ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಹತ್ಯೆಗೀಡಾಗಿದ್ದರು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ನಮನ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ನಮನ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 23ನೇ ಪುಣ್ಯತಿಥಿ ಸಮಾರಂಭವನ್ನು ಬುಧವಾರ ಆಚರಿಸಲಾಗುತ್ತಿದೆ. ವೀರ್ ಭೂಮಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ನಮನ

ಔಪಚಾರಿಕವಾಗಿ ಗೌರವ ಸೂಚಿಸಿರುವ ನರೇಂದ್ರ

ಔಪಚಾರಿಕವಾಗಿ ಗೌರವ ಸೂಚಿಸಿರುವ ನರೇಂದ್ರ ಮೋದಿಯ ಟ್ವೀಟನ್ನು ವಿವಾದಾತ್ಮಕವಾಗಿ ಚರ್ಚಿಸಲಾಗುತ್ತಿದೆ. ಮೋದಿ ಅವರ ಟ್ವೀಟ್ ಈ ಸಮಯಕ್ಕೆ 2678 ಫೇವರೀಟ್ ಎನಿಸಿದ್ದು, 2105 ಬಾರಿ ರೀಟ್ವೀಟ್ ಆಗಿದೆ.

ದೇಶದೆಲ್ಲೆಡೆ ರಾಜೀವ್ ಪುಣ್ಯತಿಥಿ ಆಚರಣೆ

ದೇಶದೆಲ್ಲೆಡೆ ರಾಜೀವ್ ಪುಣ್ಯತಿಥಿ ಆಚರಣೆ

ರಾಜೀವ್ ಗಾಂಧಿ ಪುಣ್ಯತಿಥಿಯನ್ನು ಭಯೋತ್ಪಾದನಾ ವಿರೋಧಿ ದಿನವಾಗಿ ಎಲ್ಲೆಡೆ ಆಚರಿಸಲಾಗುತ್ತಿದ್ದು, ಕರ್ನಾಟಕದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ಭಯೋತ್ಪಾದನಾ ವಿರೋಧಿ ಪ್ರಮಾಣ ವಚನ ಬೋಧಿಸಿದರು.

ವೀರ್ ಭೂಮಿಯಲ್ಲಿ ರಾಜೀವ್ ಪುತ್ರಿ ಪ್ರಿಯಾಂಕಾ

ವೀರ್ ಭೂಮಿಯಲ್ಲಿ ರಾಜೀವ್ ಪುತ್ರಿ ಪ್ರಿಯಾಂಕಾ

ವೀರ್ ಭೂಮಿಯಲ್ಲಿ ರಾಜೀವ್ ಗಾಂಧಿ ಸಮಾಧಿಗೆ ನಮಿಸುತ್ತಿರುವ ರಾಜೀವ್ ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಪತಿ ರಾಬರ್ಟ್ ವಾಧ್ರಾ. ಚಿತ್ರ ಕೃಪೆ : ಪಿಟಿಐ

ಶಾಂತಿ ಮಂತ್ರ ಪಠಣ ಕಾರ್ಯಕ್ರಮ

ಶಾಂತಿ ಮಂತ್ರ ಪಠಣ ಕಾರ್ಯಕ್ರಮ

ವೀರ್ ಭೂಮಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೆ ಪುತ್ರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಅಳಿಯ ರಾಬರ್ಟ್ ವಧ್ರಾ ಅವರು ಶಾಂತಿ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ

ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ

ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯನ್ನು ಆಚರಿಸಲಾಯಿತು.

English summary
Today marks the 23rd death anniversary of Rajiv Gandhi, the sixth prime minister of India, who was assassinated on May 21, 1991 by a LTTE suicide bomber in Sriperumbudu, Tamil Nadu. Narendra Modi pays homage to Rajiv Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X