ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆ ಮಾಡಿಕೊಳ್ಳೊದ್ರಲ್ಲಿ ಭಾರತೀಯರೇ ಮುಂದೆ

|
Google Oneindia Kannada News

ನವದೆಹಲಿ, ಸೆ. 5: ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಭಾರತವೇ ಮುಂದೆ ಎಂಬ ಆಘಾತಕಾರಿ ಸಂಗತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ವರದಿ ಬಹಿರಂಗಪಡಿಸಿದೆ.

ಆದರೆ ಈ ವರದಿಗೂ ಭಾರತ ಸರ್ಕಾರ ವಬಿಡುಗಡೆ ಮಾಡಿದ್ದ ವರಿದಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಸುಮಾರು ಒಂದು ಲಕ್ಷಕ್ಕೂ ಅಧಿಕ ವ್ಯತ್ಯಾಸ ಕಂಡುಬಂದಿದ್ದು ವರದಿ ವಸ್ತುನಿಷ್ಠತೆ ಬಗ್ಗೆ ಅನುಮಾನ ಪಡುವಂತಾಗಿದೆ.(ದಿವಾಕರ ಶಾಸ್ತ್ರಿ ಸಹೋದರ ಶ್ಯಾಮ ಶಾಸ್ತ್ರಿ ಆತ್ಮಹತ್ಯೆ)

suicide

2012ರಲ್ಲಿ ಭಾರತ 2.53 ಲಕ್ಷ ಆತ್ಯಹತ್ಯೆ ಎದುರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದರೆ, ಭಾರತ ಸರ್ಕಾರದ ರಾಷ್ಟ್ರೀಯ ಅಪರಾಧ ವಿಭಾಗದ ಪ್ರಕಾರ ಅದು 1.35 ಲಕ್ಷವಿದೆ.

ಡಬ್ಲ್ಯುಎಚ್‌ಒ ವರದಿಯ ಪ್ರಮುಖ ಅಂಶಗಳು
ಡಬ್ಲ್ಯುಎಚ್‌ಒ ವರದಿ ಹೇಳುವಂತೆ ಪ್ರಪಂಚದಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಒಂದು ವರ್ಷದಲ್ಲಿ 8 ಲಕ್ಷ ಜನ ಆತ್ಮಹತ್ಯೆಗೆ ಶರಣಾಗುತ್ತಾರೆ ಎಂಬ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ಅಗ್ನೇಯ ಏಷ್ಯಾ ಭಾಗದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳಾಗುತ್ತಿವೆ. 2012ರ ಅಂಕಿ ಅಂಶದ ಪ್ರಕಾರ ಭಾರತದಲ್ಲೇ ಹೆಚ್ಚಿನ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದೆ.
ಆತ್ಮಹತ್ಯೆ ತಡೆ ಬಗ್ಗೆ ಯಾಔ ಕ್ರಮ ತೆಗೆದುಕೊಳ್ಳಬೇಕು? ಜನರಲ್ಲಿ ಹೇಗೆ ಜಾಗೃತಿ ಮೂಡಿಸಬೇಕು? ಎಂಬುದರ ಕುರಿತು ಹೆಚ್ಚಿನ ಗಮನ ಗಹರಿಸಲಾಗುತ್ತಿದೆ ಎಂದು ಡಬ್ಲ್ಯುಎಚ್‌ಒದ ಮಾನಸಿಕ ಆರೋಗ್ಯ ವಿಭಾಘದ ನಿರ್ದೇಶಕ ಶೇಖರ್‌ ಸಕ್ಸೇನಾ ಹೇಳಿದ್ದಾರೆ.

ಗಯಾನಾ, ದಕ್ಷಿಣ ಕೋರಿಯಾ, ಶ್ರೀಲಂಕಾ, ಲಿಥುವಾನಿಯಾ, ಥಾಂಜೆನೀಯಾ, ದಕ್ಷಿಣ ಸೂಡಾನ್‌ ರಾಷ್ಟ್ರಗಳಲ್ಲೂ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ವರದಿ ತಿಳಿಸಿದೆ.

English summary
India accounted for the highest estimated number of suicides in the world in 2012, according to a WHO report published in Thursday which found that one person commits suicide every 40 seconds globally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X