ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯ ಉದಯಿಸುವ ನಾಡಿನಿಂದ ಮೋದಿ ಭಾರತಕ್ಕೆ

By Mahesh
|
Google Oneindia Kannada News

ಟೋಕಿಯೊ, ಸೆ.3: ಪ್ರಧಾನಿ ನರೇಂದ್ರ ಮೋದಿಯವರು ಐದು ದಿನಗಳ ಜಪಾನ್ ಪ್ರವಾಸವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿ ಭಾರತಕ್ಕೆ ಬುಧವಾರ ಹಿಂತಿರುಗುತ್ತಿದ್ದಾರೆ. ಉತ್ಪಾದನೆಗೆ ಭಾರತವು ಸೂಕ್ತ ತಾಣ 'ಮೇಕ್ ಇನ್ ಇಂಡಿಯಾ' ನಮ್ಮ ಧ್ಯೇಯ ಎಂದಿರುವ ಮೋದಿ ಅವರು ಜಪಾನ್ನಿನಿಂದ 35 ಶತಕೋಟಿ ಡಾಲರ್ ಹೂಡಿಕೆ ನಿರೀಕ್ಷಿಸಿದ್ದಾರೆ.

"ಇದೊಂದು ಮಹತ್ವದ ಸಾಧನೆಯಾಗಿದೆ. ಜಪಾನ್ ನಮ್ಮ ಮೇಲೆ ನಂಬಿಕೆಯಿರಿಸಿರುವುದು ನನಗೆ ಅತ್ಯಂತ ಹೆಚ್ಚು ಸಂತಸ ತಂದ ವಿಷಯವಾಗಿದೆ" ಎಂದು ಜಪಾನ್ ಪ್ರವಾಸದ ತನ್ನ ಅಧಿಕೃತ ಕಾರ್ಯಕ್ರಮಗಳ ಕೊನೆಯಲ್ಲಿ ಮೋದಿ ನುಡಿದಿದ್ದಾರೆ.

ಮೇಕ್ ಇನ್ ಇಂಡಿಯಾ: ಜಪಾನ್ ಪ್ರವಾಸದ ನಾಲ್ಕನೇ ದಿನವಾದ ಮಂಗಳವಾರ ಟೋಕಿಯೊದಲ್ಲಿ ಏರ್ಪಡಿಸಲಾಗಿದ್ದ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಉತ್ಪಾದನೆಗೆ ಭಾರತವು ಸೂಕ್ತ ತಾಣ ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರು, 'ಮೇಕ್ ಇನ್ ಇಂಡಿಯಾ' ನಮ್ಮ ಧ್ಯೇಯವಾಗಿದೆ ಎಂದು ಹೇಳಿದ್ದಾರೆ.

Demand, Democracy and demography ಮಂತ್ರವನ್ನು ಪಠಿಸುವಂತೆ ಜಪಾನಿಯರಿಗೆ ಹೇಳಿದ ಮೋದಿ ಭಾರತದ ಸಾಫ್ಟ್ ವೇರ್ ಹಾಗೂ ಜಪಾನಿನ ಹಾರ್ಡ್ ವೇರ್ ಸೇರಿದರೆ ಜಗತ್ತನ್ನೇ ಬದಲಾಯಿಸಬಹುದು ಎಂದಿದ್ದಾರೆ. ಮೋದಿ ಪ್ರವಾಸದ ಆಯ್ದ ಚಿತ್ರಗಳು ಇಲ್ಲಿವೆ

ಪರಮಾಣು ಒಪ್ಪಂದದ ಬಗ್ಗೆ ಮಾತುಕತೆ

ಪರಮಾಣು ಒಪ್ಪಂದದ ಬಗ್ಗೆ ಮಾತುಕತೆ

ಶಾಂತಿ-ಅಹಿಂಸೆಗಳು ಭಾರತೀಯ ಸಮಾಜದ ನರ-ನಾಡಿಗಳಲ್ಲೇ ಬೆರೆತು ಬಂದಿದೆ. ಇದು ಯಾವುದೇ ಅಂತಾರಾಷ್ಟ್ರೀಯ ಅಣು ಒಪ್ಪಂದ ಅಥವಾ ಪ್ರಕ್ರಿಯೆಗಳಿಗೂ ಮೀರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಪಾನ್ ಜತೆ ಅಮೆರಿಕ ಮಾದರಿಯ ನಾಗರಿಕ ಪರಮಾಣು ಒಪ್ಪಂದ ಏರ್ಪಡಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಮೂಡಿರುವ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.
ಶಾಂತಿ ಅಹಿಂಸೆಯ ನಾಡು ಭಾರತ

ಶಾಂತಿ ಅಹಿಂಸೆಯ ನಾಡು ಭಾರತ

ಭಾರತವು ಬುದ್ಧ ಹುಟ್ಟಿದ ನಾಡು. ಬುದ್ಧ ಶಾಂತಿಗಾಗಿಯೇ ಬದುಕಿದ, ಶಾಂತಿಗಾಗಿಯೇ ಕಷ್ಟ ಕೂಟಲೆಗಳನ್ನು ಅನುಭವಿಸಿದ ಮತ್ತು ಬುದ್ಧನ ಆ ಶಾಂತಿ-ಅಹಿಂಸೆಯ ಸಂದೇಶ ಭಾರತದಲ್ಲಿ ಇಂದಿಗೂ ಮೊಳಗುತ್ತಿದೆ ಎಂದು ಪ್ರಧಾನಿ ಹೇಳಿದರು.

ವಿಶ್ವವೇ ಒಂದು ಕುಟುಂಬ

ವಿಶ್ವವೇ ಒಂದು ಕುಟುಂಬ

ಸಾವಿರಾರು ವರ್ಷಗಳಿಂದಲೂ ಭಾರತ ವಸುಧೈವ ಕುಟುಂಬಕಂ (ವಿಶ್ವವೇ ಒಂದು ಕುಟುಂಬ) ಎಂದು ನಂಬಿಕೊಂಡು, ಅದರಂತೆಯೇ ನಡೆಯುತ್ತಾ ಬಂದಿದೆ. ಇಡೀ ಜಗತ್ತೇ ಒಂದು ಕುಟುಂಬ ಎಂದು ಭಾವಿಸಿದ ಮೇಲೆ ಇನ್ನು ಕಲಹಕ್ಕೆ ಎಲ್ಲಿ ಅವಕಾಶ ಎಂದಿದ್ದಾರೆ.

ರಕ್ಷಣಾ ಕ್ಷೇತ್ರದ ಬಗ್ಗೆ ಚರ್ಚೆ

ರಕ್ಷಣಾ ಕ್ಷೇತ್ರದ ಬಗ್ಗೆ ಚರ್ಚೆ

ಜಪಾನಿನ ಪ್ರಧಾನಿ ಶಿಜು ಅಬೆ ಅವರ ಜೊತೆ ರಕ್ಷಣಾ ಕ್ಷೇತ್ರ ಬಲವರ್ಧನೆ ಕುರಿತಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಭಾರತ ಹಾಗೂ ಜಪಾನ್ ಬಾಂಧವ್ಯ

ಭಾರತ ಹಾಗೂ ಜಪಾನ್ ಬಾಂಧವ್ಯ

ಭಾರತ ಹಾಗೂ ಜಪಾನ್ ಆಧ್ಯಾತ್ಮಿಕ ಬಾಂಧವ್ಯ ಶತಮಾನಗಳಷ್ಟು ಹಳೆಯದ್ದು, ಈ ಬಾಂಧವ್ಯದ ಮೂಲಕ ಜಗತ್ತಿಗೆ ಶಾಂತಿ ಮಂತ್ರ ಸಾರಬಹುದು ಎಂದು ಮಕ್ಕಳೊಂದಿಗೆ ಕಲೆತು ಬೆರೆತು ಮೋದಿ ಹೇಳಿದರು.

 ಭಾರತೀಯ ಸಮುದಾಯದೊಡನೆ ಮೋದಿ

ಭಾರತೀಯ ಸಮುದಾಯದೊಡನೆ ಮೋದಿ

ಟೋಕಿಯೋದಲ್ಲಿರುವ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಸದಸ್ಯರು ಹಾಗೂ ಭಾರತೀಯ ಸಮುದಾಯದೊಡನೆ ಮೋದಿ

ರಾಯಭಾರಿ ಕಚೇರಿ ಬಳಿ ಮೋದಿ ಮೋಡಿ

ರಾಯಭಾರಿ ಕಚೇರಿ ಬಳಿ ಮೋದಿ ಮೋಡಿ

ರಾಯಭಾರಿ ಕಚೇರಿ ಬಳಿ ಮೋದಿ ಅವರ ಹಸ್ತಾಕ್ಷರಕ್ಕಾಗಿ ಮಕ್ಕಳು ಹಾತೊರೆಯುತ್ತಿದ್ದರು.

ಮೋದಿ ಮೇಲೆ ಸಂಗೀತ, ಸಾಹಿತ್ಯದ ಪ್ರಭಾವ

ಮೋದಿ ಮೇಲೆ ಸಂಗೀತ, ಸಾಹಿತ್ಯದ ಪ್ರಭಾವ

ಮೋದಿ ಮೇಲೆ ಜಪಾನಿನ ಸಂಗೀತ, ಸಾಹಿತ್ಯದ ಪ್ರಭಾವ ಬೀರಿದ್ದು, ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಹೆಚ್ಚಾಗಬೇಕು ಎಂದಿದ್ದಾರೆ

English summary
Prime Minister Narendra Modi today left for home after concluding his successful visit here during which Japan promised to give USD 35 billion to India over the next 5 years for developmental projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X