ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಸಂಸದರು ತೂಕಡಿಸೋದು ತಪ್ಪಾ !

By Mahesh
|
Google Oneindia Kannada News

ನವದೆಹಲಿ, ಜು.11: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಲೋಕಸಭೆಯಲ್ಲಿ ಬಜೆಟ್ ಭಾಷಣವನ್ನು ಓದುತ್ತಾ ಓದುತ್ತಾ ಬೆನ್ನು ಹಿಡಿದುಕೊಂಡು ಮೇಡಂ ಸ್ಪೀಕರ್ ಸ್ವಲ್ಪ ಬ್ರೇಕ್ ನೀಡುತ್ತೀರಾ ಎಂದು ಕೇಳಿಕೊಂಡರು. ಬೆನ್ನುನೋವಿನಿಂದ ಬಳಲುತ್ತಿರುವ ಅರುಣ್ ಜೇಟ್ಳಿ ಅವರು ಐದು ನಿಮಿಷ ರೆಸ್ಟ್ ತೆಗೆದುಕೊಂಡು ಮತ್ತೆ ಬಜೆಟ್ ಮಂಡಿಸಿದರು.

ಲೋಕಸಭೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎನ್ನಲಾಗುವಂರೆ 61 ವರ್ಷ ವಯಸ್ಸಿನ ಜೇಟ್ಲಿ ಅವರು ಬ್ರೇಕ್ ನಂತರ ನಿಲ್ಲಲಾಗದೆ ಕುಳಿತುಕೊಂಡು ಬಜೆಟ್ ಭಾಷಣ ಮುಂದುವರೆಸಿದರು. ಆನಂತರ ಅವರು ಸುಮಾರು ಎರಡು ತಾಸುಗಳ ಕಾಲ ಕುಳಿತುಕೊಂಡೇ ಬಜೆಟ್ ಭಾಷಣವನ್ನು ಓದಿದರು. ಆದರೆ ಭಾಷಣ ನಡುನಡುವೆ ಅವರು ನೀರು ಕುಡಿಯುತ್ತಿದ್ದು ಕಂಡುಬರುತ್ತಿತ್ತು. ಸದಸ್ಯರಾದರೇನು ದಣಿವು, ಬಾಯಾರಿಕೆ, ನಿದ್ದೆ ಮೀರಲು ಸಾಧ್ಯವಿಲ್ಲ.

ಸ್ವಲ್ಪ ಫ್ಲಾಶ್ ಬ್ಯಾಕಿಗೆ ಬರೋಣ ಸಂಸತ್ ನಲ್ಲಿ ಬೆಲೆ ಏರಿಕೆ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದ್ದಾಗ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಸಿಹಿನಿದ್ದೆಯಲ್ಲಿದ್ದರು ಎಂಬುದು ಕಳೆದೊಂದು ವಾರದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಅತಿ ಚರ್ಚೆಯಾದ ವಿಷಯವಾಗಿತ್ತು.

ರಾಹುಲ್ ಗಾಂಧಿ ನಂತರ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಸೆಂಟ್ರಲ್ ಹಾಲ್ ನಲ್ಲಿ ಕಣ್ಣೀರಿಟ್ಟ ಚಿತ್ರವನ್ನು ನಿದ್ದೆ ಮಾಡಿದ ಚಿತ್ರ ಎಂದು ತಪ್ಪಾಗಿ ತೂರಿ ಬಿಟ್ಟಿದ್ದರು. ರಾಹುಲ್ ಗೂ ಮುನ್ನ ಸಂಸತ್ತಿನಲ್ಲಿ ತೂಕಡಿಕೆಗೆ ಶರಣಾದ ಪ್ರಮುಖ ರಾಜಕಾರಣಿಗಳ ಚಿತ್ರ ಸರಣಿ ಇಲ್ಲಿದೆ, ಹ್ಯಾಪಿ ನ್ಯಾಪ್!

ರಾಹುಲ್ ನಿದ್ದೆಗೂ ಸಮರ್ಥನೆ ನೀಡಿದ ಕಾಂಗ್ರೆಸ್

ರಾಹುಲ್ ನಿದ್ದೆಗೂ ಸಮರ್ಥನೆ ನೀಡಿದ ಕಾಂಗ್ರೆಸ್

ರಾಹುಲ್‌ ಗಾಂಧಿ ಅವರ ನಿದ್ದೆ ಬಗ್ಗೆ ಕಾಂಗ್ರೆಸ್ ಸಮರ್ಥನೆ ನೀಡಿ, ಅವರು ತೂಕಡಿಸಿಯೇ ಇಲ್ಲ ಎಂದಿದೆ. ಇದಕ್ಕೆ ಬಿಜೆಪಿ, ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ್ದು ಇದನ್ನೇ ಎಂದು ಟಾಂಗ್ ನೀಡಿತ್ತು

ರಾಹುಲ್ ಸ್ಲೀಪ್ ಮಾಡುತ್ತಿರಲಿಲ್ಲ ಕಣ್ರೀ!

ರಾಹುಲ್ ಸ್ಲೀಪ್ ಮಾಡುತ್ತಿರಲಿಲ್ಲ ಕಣ್ರೀ! ಎಂದು ಹಾಸ್ಯಭರಿತ ವಿನೋದ್ ಮೆಹ್ತಾ ಟ್ವೀಟ್

ರಾಹುಲ್ ನಿದ್ದೆ ಬಗ್ಗೆ ರಮೇಶ್ ಟ್ವೀಟ್

ಜಗತ್ತಿನ ಆಗು ಹೋಗುಗಳ ಬಗ್ಗೆ ಕ್ಷಣಾರ್ಧದಲ್ಲಿ ಕುಚೋದ್ಯದ ಟ್ವೀಟ್ ಎಸೆಯುವ ರಮೇಶ್ ಅವರ ಟ್ವೀಟ್ ನಲ್ಲಿ ರಾಹುಲ್ ನಿದ್ದೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿದ್ದೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿದ್ದೆ ಮಾಡುತ್ತಿರುವ ಚಿತ್ರ ಕೂಡಾ ಕಾಂಗ್ರೆಸ್ ಪರ ಇರುವ ಅಭಿಮಾನಿಗಳಿಂದ ಹರಿದು ಬಂದಿತು.

ಅಯ್ಯೋ ರಾಮ ರಾಮ ನೋಡಲಾರೆ

ಅಯ್ಯೋ ರಾಮ ರಾಮ ನೋಡಲಾರೆ

ಅಯ್ಯೋ ರಾಮ ರಾಮ ನೋಡಲಾರೆ ಎಂದು ಸಂಸತ್ತಿನಲ್ಲಿ ಕಣ್ಮುಚ್ಚಿ ನಿದ್ರೆಗೆ ಜಾರಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಚಿತ್ರ. ಈ ಸರಣಿ ಮುಂದುವರೆಯಲಿದ್ದು, ಪಟ್ಟಿಯಲ್ಲಿ ನಮ್ಮ ದೇವೇಗೌಡ, ಮೊಯ್ಲಿ ಕೂಡಾ ಕಾಣಿಸಿಕೊಂಡಿದ್ದಾರೆ. ಸಂಸತ್ತಿನ ನಿದ್ರಾ ಸರಣಿಯಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಪಟ್ಟಿಯಿಂದ ಹೊರ ಜಿಗಿದಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್ ಸದಸ್ಯರಾಗಿ, ದೇಶದ ವಿತ್ತ ಸಚಿವರಾಗಿದ್ದ ಕಾಲದಲ್ಲಿ ಸಂಸತ್ ಕಲಾಪದ ವೇಳೆ ಬೆಕ್ಕಿನ ನಿದ್ದೆಗೆ ಜಾರಿದ್ದರು.

ಕರ್ನಾಟಕದ ಎಂ ವೀರಪ್ಪ ಮೋಯ್ಲಿ

ಕರ್ನಾಟಕದ ಎಂ ವೀರಪ್ಪ ಮೋಯ್ಲಿ

ಕರ್ನಾಟಕದ ಎಂ ವೀರಪ್ಪ ಮೋಯ್ಲಿ ಅವರು ಪೆಟ್ರೋಲಿಯಂ ಖಾತೆ ಸಚಿವರಾಗಿದ್ದಾಗ ಸಂಸತ್ ಕಲಾಪದ ವೇಳೆ ಅತ್ತ ವಿತ್ತ ಸಚಿವ ಪಿ ಚಿದಂಬರಂ ಅವರು ಭಾಷಣ ಮಾಡುವ ಮೋಯ್ಲಿ ಅವರು ತೂಕಡಿಸುತ್ತಿದ್ದರು.

ಪವನ್ ಕುಮಾರ್ ಬನ್ಸಾಲ್

ಪವನ್ ಕುಮಾರ್ ಬನ್ಸಾಲ್

ಮಾಜಿ ರೈಲ್ವೆ ಸಚಿವ, ಚಂದೀಗಢದ ಸಂಸದ ಪವನ್ ಕುಮಾರ್ ಬನ್ಸಾಲ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದ ವೇಳೆ ನಿದ್ದೆಗೆ ಜಾರಿದ್ದರು.

ರಾಜೀವ್ ಶುಕ್ಲಾ

ರಾಜೀವ್ ಶುಕ್ಲಾ

ಐಪಿಎಲ್ ಮಾಜಿ ಮುಖ್ಯಸ್ಥ, ಸಂಸದೀಯ ವ್ಯವಹಾರ ಖಾತೆ ಮಾಜಿ ಸಚಿವ ರಾಜೀವ್ ಶುಕ್ಲಾ ಅವರು ಕೂಡಾ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದ ವೇಳೆ ನಿದ್ದೆಗೆ ಜಾರಿದ್ದರು.

ಕಮಲ್ ನಾಥ್

ಕಮಲ್ ನಾಥ್

ಸಂಸದೀಯ ವ್ಯವಹಾರ ಖಾತೆ ಮಾಜಿ ಸಚಿವ ಕಮಲ್ ನಾಥ್ ಅವರು ಸಂಸತ್ತಿನ ಬೋರಿಂಗ್ ಭಾಷಣದ ನಡುವೆ ಕಣ್ಣುಜ್ಜಿಕೊಂಡು ತೂಕಡಿಸಿದ್ದರು.

ಲಾಲೂ ಪ್ರಸಾದ್ ಯಾದವ್

ಲಾಲೂ ಪ್ರಸಾದ್ ಯಾದವ್

ಮಾಜಿ ರೈಲ್ವೆ ಸಚಿವ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಸಂಸತ್ ಹಾಲ್ ನ ಮೊದಲ ಸಾಲಿನಲ್ಲೇ ಕುಳಿತು ನಿದ್ದೆ ಮಾಡುತ್ತಿದ್ದರು. ಕೊನೆಗೆ ವಿಧಿ ಇಲ್ಲದೆ ಅಂದಿನ ಸ್ಪೀಕರ್ ಮೀರಾ ಕುಮಾರ್ ಅವರು 2011ರ ಸೆಪ್ಟೆಂಬರ್ ನ ಕಲಾಪದ ವೇಳೆ ಪಕ್ಕದ ಸಂಸದರೊಬ್ಬರಿಗೆ ಹೇಳಿ ಲಾಲೂ ಅವರನ್ನು ಎಚ್ಚರಗೊಳಿಸಬೇಕಾಯಿತು.

ಮುಲಾಯಂ ಸಿಂಗ್ ಯಾದವ್

ಮುಲಾಯಂ ಸಿಂಗ್ ಯಾದವ್

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ನಿದ್ರಾದೇವಿಗೆ ಶರಣಾಗುವ ಖಾಯಂ ಅತಿಥಿಯಾಗಿದ್ದಾರೆ.

ಎಚ್ ಡಿ ದೇವೇಗೌಡ

ಎಚ್ ಡಿ ದೇವೇಗೌಡ

ಜೆಡಿಎಸ್ ಸಂಸದ, ಮಾಜಿ ಪ್ರಧಾನಿ ದೇವೇಗೌಡ ಅವರು ಹತ್ತು ಹಲವು ಬಾರಿ ನಿದ್ದೆಗೆ ಜಾರಿದ ದೃಶ್ಯಗಳು ಲೋಕಸಭಾ ಟಿವಿ ಕೆಮರಾದಲ್ಲಿ ಸೆರೆಯಾಗಿವೆ.

ಸಂತೋಷ್ ಗಾಂಗ್ವರ್

ಸಂತೋಷ್ ಗಾಂಗ್ವರ್

ಬರೇಲಿಯ ಬಿಜೆಪಿ ಸಂಸದ ಹಾಗೂ ಜವಳಿ ಖಾತೆ ರಾಜ್ಯ ಸಚಿವ ಸಂತೋಷ್ ಗಾಂಗ್ವರ್ ಅವರು ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವಾಗ ನಿದ್ದೆಗೆ ಜಾರಿದ್ದರಂತೆ.

ದಿಗ್ವಿಜಯ್ ಸಿಂಗ್

ದಿಗ್ವಿಜಯ್ ಸಿಂಗ್

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ನಮ್ಮ ಸಿಎಂ ಸಿದ್ದರಾಮಯ್ಯ ಅವರಿಗೆ ತೂಕಡಿಸುವುದರಲ್ಲಿ ಸ್ಪರ್ಧಿಯಾಗಿದ್ದರಂತೆ.

English summary
As the Congress Vice President Rahul Gandhi took a catnap during the price rise debate in the Lok Sabha on Wednesday, he drew huge criticism from all the opposition parties and became a centre of attention on all social media websites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X