ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ರಂಗು ರಂಗಿನ ಹಬ್ಬದ ಸಂಭ್ರಮ

By Mahesh
|
Google Oneindia Kannada News

ಬೆಂಗಳೂರು, ಮಾ.16: ದೇಶದೆಲ್ಲೆಡೆ ಬಣ್ಣದ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಜಾತಿ ಧರ್ಮದ ಸಂಕೋಲೆ ಬೇಲಿ ಕಳಚಿ ಹೋಳಿ ಹಬ್ಬವನ್ನು ಪ್ರತಿಯೊಬ್ಬರೂ ಭಾರತದಲ್ಲಿ ಆಚರಿಸಿದ್ದಾರೆ. ವಸಂತ ಮಾಸದ ಹುಣ್ಣಿಮೆಯ ಹೋಳಿದಿನದಂದು ಅಬಾಲವೃದ್ಧರಾದಿಯಾಗಿ ಎಲ್ಲರೂ ಸಂಭ್ರಮ ಸಡಗರದಿಂದ ಈ ಹಬ್ಬವನ್ನು ಆಚರಿಸಿದ್ದು ಕಂಡು ಬಂದಿದೆ.

ಹೋಳಿ ಹಬ್ಬದಂದು ವಿವಿಧ ಬಣ್ಣವನ್ನು ಎರಚುತ್ತಾ ಪಿಚಕಾರಿಯನ್ನು ಹೊಡೆಯುತ್ತಾ ಸಂತೋಷದಿಂದ ಹಬ್ಬದಲ್ಲಿ ಪಾಲ್ಗೊಳ್ಳುವುದನ್ನು ಎಲ್ಲೆಡೆ ನೋಡಬಹುದು. ಮನೆ, ವಠಾರ, ಗಲ್ಲಿ, ಬೀದಿ, ಕಾಲೋನಿ, ನಗರ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಅಷ್ಟೇ ಏಕೆ ಇಡೀ ವಿಶ್ವದ ಸದಸ್ಯರನ್ನು ಒಂದುಗೂಡಿಸುವ ಕಲರ್ ಫುಲ್ ಹಬ್ಬವಾಗಿ ಹೋಳಿ ಗುರುತಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ವಿದೇಶಿಯರು ರಂಗು ರಂಗಿನ ಹಬ್ಬದಲ್ಲಿ ಪಾಲ್ಗೊಂಡು ಬಣ್ಣದೋಕುಳಿಯಲ್ಲಿ ಮಿಂದೇಳುತ್ತಿದ್ದಾರೆ.

ಈ ವರ್ಷ ಹೆಚ್ಚೆಚ್ಚು ಸಾವಯವ ಬಣ್ಣಗಳ ಬಳಕೆ, ನೀರಿನ ಬಳಕೆ ಕಡಿಮೆ ಮಾಡುವುದರ ಬಗ್ಗೆ ಜನರು ಗಮನ ಹರಿಸಿದ್ದಾರೆ. ಆದರೆ, ಸಂಭ್ರಮಕ್ಕೇನು ಕಡಿಮೆಯಾಗಿಲ್ಲ. ಭೋಪಾಲ್ ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಲೇಪವಿರುವ ಪಿಚಕಾರಿಗಳು ಈ ವರ್ಷದ ಆಕರ್ಷಣೆಯಾಗಿದೆ ಎಂದರೆ ತಪ್ಪಾಗಲಾರದು. ಕಳೆದ ವರ್ಷ ದೆಹಲಿಯಲ್ಲಿ ಚಿನ್ನದ ಪಿಚಕಾರಿಯೊಂದು 80 ಲಕ್ಷ ರು. ಗಳಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ವಜ್ರಖಚಿತ ಪಿಚಕಾರಿಗಳು ಕೂಡಾ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಇದೆಲ್ಲದರ ನಡುವೆ ಜನ ಸಾಮಾನ್ಯರ ಗುಲಾಲ್ ಎರೆಚಾಟ ನಿರಂತರವಾಗಿ ಸಾಗಿದೆ. ಬಣ್ಣದ ಹಬ್ಬದ ರಂಗಿನ ಚಿತ್ರ ಸಂಪುಟ ನಿಮ್ಮ ಮುಂದಿದೆ.

ಹೋಳಿ ಹಬ್ಬಕ್ಕೆ ಭಾರಿ ಬೆಲೆಯ ಪಿಚಕಾರಿಗಳು

ಹೋಳಿ ಹಬ್ಬಕ್ಕೆ ಭಾರಿ ಬೆಲೆಯ ಪಿಚಕಾರಿಗಳು

ಭೋಪಾಲ್ ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಲೇಪವಿರುವ ಪಿಚಕಾರಿಗಳು ಈ ವರ್ಷದ ಆಕರ್ಷಣೆಯಾಗಿದೆ

ಪಟಿಯಾಲದಲ್ಲಿ ಶಾಲಾ ಮಕ್ಕಳ ಹಬ್ಬ

ಪಟಿಯಾಲದಲ್ಲಿ ಶಾಲಾ ಮಕ್ಕಳ ಹಬ್ಬ

ಪಟಿಯಾಲದಲ್ಲಿ ಶಾಲಾ ಮಕ್ಕಳಿಂದ ಬಣ್ಣದ ಹಬ್ಬದ ಸಂಭ್ರಮಾಚರಣೆ

ಜಮ್ಮುವಿನಲ್ಲಿ ಯುವತಿಯಿಂದ ಹೋಳಿ ಹಬ್ಬ

ಜಮ್ಮುವಿನಲ್ಲಿ ಯುವತಿಯಿಂದ ಹೋಳಿ ಹಬ್ಬ

ಜಮ್ಮುವಿನ ಕಾಲೇಜಿನಲ್ಲಿ ಯುವತಿಯಿಂದ ಹೋಳಿ ಹಬ್ಬ ಆಚರಣೆ

ಜೋಧ್ ಪುರದಲ್ಲಿ ರಂಗೇರಿದ ವಿದೇಶಿ ಪ್ರವಾಸಿಗರು

ಜೋಧ್ ಪುರದಲ್ಲಿ ರಂಗೇರಿದ ವಿದೇಶಿ ಪ್ರವಾಸಿಗರು

ಜೋಧ್ ಪುರದಲ್ಲಿ ರಂಗೇರಿದ ವಿದೇಶಿ ಪ್ರವಾಸಿಗರು ಬಣ್ಣ ಬಳಿದು ಕೊಂಡು ನರ್ತಿಸಿದ್ದು ಹೀಗೆ

ಫಲ್ಗುಣ ಉತ್ಸವ ಶ್ರೀಕೃಷ್ಣನ ಆರಾಧನೆ

ಫಲ್ಗುಣ ಉತ್ಸವ ಶ್ರೀಕೃಷ್ಣನ ಆರಾಧನೆ

ನವದೆಹಲಿ : ಶ್ರೀ ಶ್ಯಾಮ ಫಲ್ಗುಣ ಉತ್ಸವದಲ್ಲಿ ಶ್ರೀಕೃಷ್ಣ ಹಾಗೂ ರಾಧೆಯ ಆರಾಧನೆ ಮಹೋತ್ಸವ

ಮೋದಿ ಅವರಿಂದ ಶುಭ ಹಾರೈಕೆ

ಹೋಳಿ ಹಬ್ಬಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರಿಂದ ಶುಭ ಹಾರೈಕೆ

ಸಚಿನ್ ಅಭಿಮಾನಿಗಳಿಂದ ಹೋಳಿ

ಸಚಿನ್ ಅಭಿಮಾನಿಗಳಿಂದ ಹೋಳಿ ಹಬ್ಬದ ಶುಭ ಹಾರೈಕೆ ಟ್ವೀಟ್

ಉತ್ತರಪ್ರದೇಶದಲ್ಲಿ ರವಿಶಂಕರ್ ಗುರೂಜಿ

ಉತ್ತರಪ್ರದೇಶದಲ್ಲಿ ರವಿಶಂಕರ್ ಗುರೂಜಿ

ಜಾನ್ ಪುರ್: ಆಧಾತ್ಮ ಗುರು ರವಿಶಂಕರ್ ಗುರೂಜಿ ಅವರು ಉತ್ತರಪ್ರದೇಶದಲ್ಲಿ ವಿಶೇಷ ಪಿಚಕಾರಿ ಹಿಡಿದುಕೊಂಡು ಭಕ್ತರೊಂದಿಗೆ ಹೋಳಿ ಆಚರಿಸಿದರು.

ಮಹಮ್ಮದ್ ಕೈಫ್ ರಿಂದ ಹಬ್ಬದಾಚರಣೆ

ಮಹಮ್ಮದ್ ಕೈಫ್ ರಿಂದ ಹಬ್ಬದಾಚರಣೆ

ಉತ್ತರ ಪ್ರದೇಶದ ಫುಲ್ ಪುರ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಲೋಕಸಭೆಗೆ ಸ್ಪರ್ಧಿಸಿರುವ ಮಾಜಿ ಕ್ರಿಕೆಟರ್ ಮಹಮ್ಮದ್ ಕೈಫ್ ಅವರಿಂದ ಹೋಳಿ ಹಬ್ಬದಾಚರಣೆ

ನಮ್ಮ ಯೋಧರಿಂದ ಹೋಳಿ ಆಚರಣೆ

ನಮ್ಮ ಯೋಧರಿಂದ ಹೋಳಿ ಆಚರಣೆ

ಅಗರ್ತಲ: ಗಡಿ ಭದ್ರತಾ ಪಡೆಯ ಯೋಧರು ಬಾಂಗ್ಲಾದೇಶ ಗಡಿಯಲ್ಲಿ ಹೋಳಿ ಹಬ್ಬ ಆಚರಿಸಿದರು.

ಅಮೃತಸರ್ ದಲ್ಲಿ ಪ್ರವಾಸಿಗರಿಂದ ಬಣ್ಣದೋಕುಳಿ

ಅಮೃತಸರ್ ದಲ್ಲಿ ಪ್ರವಾಸಿಗರಿಂದ ಬಣ್ಣದೋಕುಳಿ

ಅಮೃತಸರ್ ದ ದುರ್ಗಿಯಾನಾ ದೇಗುಲದಲ್ಲಿ ಬಣ್ಣದ ಹಬ್ಬ ಆಚರಣೆ

ಬೆಂಗಾಳಿಗಳಿಂದ ಬಣ್ಣ ಬಣ್ಣದ ಹೋಳಿ

ಬೆಂಗಾಳಿಗಳಿಂದ ಬಣ್ಣ ಬಣ್ಣದ ಹೋಳಿ

ಪಶ್ಚಿಮ ಬಂಗಾಳದ ದಿನಾಜ್ ಪುರ್ ಜಿಲ್ಲೆಯ ಬಲೂರ್ ಘಾಟ್ ನಲ್ಲಿ ಯುವತಿಯಿಂದ ಹೋಳಿ ಆಚರಣೆ

ಜೈಪುರದಲ್ಲಿ ಭಕ್ತರಿಂದ ಹೋಳಿ ಹಬ್ಬ

ಜೈಪುರದಲ್ಲಿ ಭಕ್ತರಿಂದ ಹೋಳಿ ಹಬ್ಬ

ಜೈಪುರದ ಗೋವಿಂದ್ ದೇವ್ ಜಿ ದೇಗುಲದಲ್ಲಿ ಭಕ್ತರಿಂದ ಹೋಳಿ ಹಬ್ಬ

ಶಾಂತಿನಿಕೇತನದಲ್ಲಿ ವಸಂತ ಉತ್ಸವ

ಶಾಂತಿನಿಕೇತನದಲ್ಲಿ ವಸಂತ ಉತ್ಸವ

ಬಿರ್ ಬಮ್ ನಲ್ಲಿ ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ವಸಂತ ಉತ್ಸವ

ವಾರಣಸಿಯಲ್ಲಿ ಹೋಳಿ ಸಂಭ್ರಮ

ವಾರಣಸಿಯಲ್ಲಿ ಹೋಳಿ ಸಂಭ್ರಮ

ವಾರಣಸಿಯಲ್ಲಿ ಪ್ರವಾಸಿಗರಿಂದ ಹೋಳಿ ಸಂಭ್ರಮಾಚರಣೆ

ಗುವಾಹಟಿಯಲ್ಲಿ ಹುಡುಗಿಯರಿಂದ ಹೋಳಿ

ಗುವಾಹಟಿಯಲ್ಲಿ ಹುಡುಗಿಯರಿಂದ ಹೋಳಿ

ಗುವಾಹಟಿಯಲ್ಲಿ ಹುಡುಗಿಯರಿಂದ ಹೋಳಿ ಹಬ್ಬದಲ್ಲಿ ರಂಗಿನ ಜತೆಗೆ ಟೋಮ್ಯಾಟೋ ಬಳಸಿ ಸಂಭ್ರಮಾಚರಣೆ

English summary
India is swooning in festive mood this Holi, Grand celebrations were held in many parts of the country on the occasion of Holi. Many foreigners too enthusiastically took part in the celebrations. Sections of people switched to organic colours which are safer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X