ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಚುನಾವಣೆಯ ಅಂತಿಮ ಹಂತದ ಮತದಾನ

By Mahesh
|
Google Oneindia Kannada News

ನವದೆಹಲಿ, ಮೇ 12: ಲೋಕಸಭೆ ಚುನಾವಣೆಯ 9ನೇ ಹಾಗೂ ಅಂತಿಮ ಹಂತದ ಮತದಾನ ಸೋಮವಾರ ಜಾರಿಯಲ್ಲಿದೆ. ಮೂರೂ ರಾಜ್ಯಗಳ ಒಟ್ಟು 41 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಜಯ್ ‌ರಾಯ್, ಸಮಾಜವಾದಿ ಪಕ್ಷದ ನೇತಾರ ಮುಲಾಯಮ್ ‌ಸಿಂಗ್ ಯಾದವ್, ಯೋಗಿ ಆದಿತ್ಯನಾಥ್, ಜಗದಾಂಬಿಕೆ ಪಾಲ್ ಸೇರಿದಂತೆ ಅನೇಕರ ರಾಜಕೀಯ ಹಣೆಬರಹವನ್ನು ಮತದಾರ ಬರೆಯುತ್ತಿದ್ದಾನೆ.

ಉತ್ತರಪ್ರದೇಶ 17, ಪಶ್ಚಿಮ ಬಂಗಾಳ 18 ಹಾಗೂ ಬಿಹಾರದ 6 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ಜರುಗುತ್ತಿದೆ.ಬಿಜೆಪಿ, ಜೆಡಿಯು, ಆರ್ಜೆಡಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಬಿಹಾರದಲ್ಲಿ ಆರು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.

ಕಾಶಿಯಲ್ಲಿ ಜಿದ್ದಾಜಿದ್ದಿನ ಹೋರಾಟ

ಕಾಶಿಯಲ್ಲಿ ಜಿದ್ದಾಜಿದ್ದಿನ ಹೋರಾಟ

ಬಿಜೆಪಿ, ಎಸ್ ‌ಪಿ, ಬಿಎಸ್ ‌ಪಿ, ಕಾಂಗ್ರೆಸ್, ಎಎಪಿ ನಡುವಿನ ಜಿದ್ದಾಜಿದ್ದಿಗೆ ಕಾಶಿ ಸಾಕ್ಷಿಯಾಗಿದೆ. ವಾರಣಾಸಿಯಲ್ಲಿ ಸೋಮವಾರ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಮತದಾನ ಪ್ರಕ್ರಿಯೆ ನಿಧಾನಗತಿಯಿಂದ ಸಾಗಿದೆ.

ಬಂಗಾಳದ 18 ಲೋಕಸಭಾ ಕ್ಷೇತ್ರಗಳಲ್ಲಿ

ಬಂಗಾಳದ 18 ಲೋಕಸಭಾ ಕ್ಷೇತ್ರಗಳಲ್ಲಿ

ಟಿಎಂಸಿ, ಎಡಪಕ್ಷಗಳು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಸ್ಪರ್ಧೆಗೆ ಹಣಾಹಣಿ ವೇದಿಕೆಯಾಗಿರುವ ಪಶ್ಚಿಮದ ಬಂಗಾಳದ 18 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಬಂಗಾಳದ ಪ್ರಮುಖ ಅಭ್ಯರ್ಥಿಗಳು

ಬಂಗಾಳದ ಪ್ರಮುಖ ಅಭ್ಯರ್ಥಿಗಳು

ಉತ್ತರ ಕೋಲ್ಕತ್ತಾದಿಂದ ಸುದೀಪ್ ಬಂಡೋಪಾಧ್ಯಾಯ, ರೂಪಾ ಭಕ್ಷಿ ಮತ್ತು ಸುಮಿತ್ರ ನಡುವೆ ಭಾರೀ ಹಣಾಹಣಿ ಏರ್ಪಟ್ಟಿದೆ. ಇದೇ ರೀತಿ ದಕ್ಷಿಣ ಕೋಲ್ಕತ್ತಾದಿಂದ ನಂದಿನಿ ಮುಖರ್ಜಿ ಮತ್ತು ಸುಬ್ರತೋ ಭಕ್ಷಿ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಡಂಡಂ ಲೋಕಸಭಾ ಕ್ಷೇತ್ರದಲ್ಲಿ ಸುಗತಾರಾಯ್, ಅಸಿನ್ ‌ದಾಸ್ ಗುಪ್ತಾ ಹಾಗೂ ತಪನ್ ಸಿಗ್ಧರ್ ನಡುವೆ ಭಾರೀ ಹಣಾಹಣಿ ನಡೆದಿದೆ.

ಕೋಲ್ಕತ್ತಾದ ಮತದಾರರು

ಕೋಲ್ಕತ್ತಾದ ಮತದಾರರು

ಕೋಲ್ಕತ್ತಾದಲ್ಲಿ ಮಹಿಳಾ ಮತದಾರರು ಮತದಾನ ಮಾಡಿದ ನಂತರ ತಮ್ಮ ಗುರುತಿನ ಚೀಟಿ ಪ್ರದರ್ಶಿಸಿದರು.

ಮತದಾನ ಮಾಡಲು ಕ್ಯೂ

ಮತದಾನ ಮಾಡಲು ಕ್ಯೂ

ಮತದಾನ ಮಾಡಲು ಕ್ಯೂನಲ್ಲಿ ನಿಂತಿರುವ ಪಶ್ಚಿಮ ಬಂಗಾಳದ ಮತದಾರರು. ಪಿಟಿಐ ಚಿತ್ರ

ಬಂಗಾಳದ ರಾಜ್ಯಪಾಲ ನಾರಾಯಣನ್

ಬಂಗಾಳದ ರಾಜ್ಯಪಾಲ ನಾರಾಯಣನ್

ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ ನಾರಾಯಣನ್ ಅವರು ಮತದಾನ ಮಾಡಿದ ನಂತರ ಮಸಿ ಬಳಿದ ಬೆರಳನ್ನು ತೋರಿಸುತ್ತಿದ್ದಾರೆ. ಪಿಟಿಐ ಚಿತ್ರ.

ಗಂಗೂಲಿ ದಂಪತಿಯಿಂದ ಮತದಾನ

ಗಂಗೂಲಿ ದಂಪತಿಯಿಂದ ಮತದಾನ

ಕ್ರಿಕೆಟರ್ ಸೌರವ್ ಗಂಗೂಲಿ ದಂಪತಿಯಿಂದ ಮತದಾನ

ಮತದಾನಕ್ಕೆ ಬಿಗಿ ಭದ್ರತೆ

ಮತದಾನಕ್ಕೆ ಬಿಗಿ ಭದ್ರತೆ

9ನೇ ಹಾಗೂ ಅಂತಿಮ ಹಂತದ ಮತದಾನಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಬಿಸಿಲಿನ ನಡುವೆ ಮುಸ್ಲಿಂ ಮಹಿಳೆಯರು

ಬಿಸಿಲಿನ ನಡುವೆ ಮುಸ್ಲಿಂ ಮಹಿಳೆಯರು

ವಾರಣಾಸಿಯಲ್ಲಿ ಬಿಸಿಲಿನ ನಡುವೆಮುಸ್ಲಿಂ ಮಹಿಳೆಯರು ಮತದಾನದಲ್ಲಿ ಪಾಲ್ಗೊಂಡಿದ್ದರು.

English summary
The polling for the Final phase of elections, which will seal the fate of several heavyweights, is underway. Here’s a look images from across the country. Common people and many celebrities queued up at polling booths on Monday (May.12) casted their vote for the Lok Sabha Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X