ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸುಡುತ್ತಿದೆ, ಕೇರಳ, ಕರುನಾಡಿನಲ್ಲಿ ತಂಪು

By Mahesh
|
Google Oneindia Kannada News

ಬೆಂಗಳೂರು, ಜೂ.10: ಮುಂಗಾರಿನ ಅಭಿಷೇಕದಿಂದ ಮೆದುವಾಗಲು ದೆಹಲಿಯ ನೆಲ ಕಾದಿದೆ. ಸೂರ್ಯ ದಿನನಿತ್ಯ ಜನರ ನೆತ್ತಿ ಸುಡುತ್ತಿದ್ದಾನೆ. 45 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಜನ ಬೇಯುತ್ತಿದ್ದರೆ ಇತ್ತ ಕೇರಳ, ಕರ್ನಾಟಕ ಮೊದಲ ಮಳೆಯ ಪುಳಕದಲ್ಲಿ ಮಿಂದೆದ್ದಿದೆ.

ದೆಹಲಿಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಬಿರು ಬಿಸಿಲಿನ ಜತೆಗೆ ಬೆಳಗ್ಗಿನ ತೇವಾಂಶವು ಶೇ 20-25 ರಷ್ಟಿದ್ದು ಹವಾಮಾನ ಇಲಾಖೆ ಮಳೆಯ ನಿರೀಕ್ಷೆ ಸದ್ಯಕ್ಕೆ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಇದರ ಜತೆಗೆ ಸುಮಾರು 6 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಹೇರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಇತ್ತ ದಕ್ಷಿಣ ಭಾರತದಲ್ಲಿ ಕೇರಳ ಹಾಗೂ ಕರ್ನಾಟಕದಲ್ಲಿ ಸೋಮವಾರ ಅಧಿಕೃತವಾಗಿ ಮುಂಗಾರು ಮಳೆ ಪ್ರವೇಶಿಸಿದೆ. ಕೇರಳದ ಕೋಳಿಕ್ಕಾಡ್, ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಬಿದ್ದಿದೆ. ಕೇರಳಕ್ಕೆ ಪ್ರವೇಶಿಸಿರುವ ಮುಂಗಾರು ಮಳೆ ಕೇರಳದ ಎಲ್ಲಾ ಪ್ರದೇಶಗಳನ್ನು ವ್ಯಾಪಿಸಿದ್ದು ಅಲ್ಲಿ ಮಳೆಯಾಗುತ್ತಿದೆ. ಇದೀಗ ರಾಜ್ಯಕ್ಕೂ ಪ್ರವೇಶಿಸಿದ್ದು ದಕ್ಷಿಣ ಕನ್ನಡ, ಉಡುಪಿ, ಕೊಡಗು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಿದೆ.

ಉಡುಪಿ ಜಿಲ್ಲೆಗೆ ಇನ್ನೂ ಮುಂಗಾರು ಪೂರ್ಣವಾಗಿ ಕಾಲಿರಿಸಿಲ್ಲ. ಮಳೆ ಚದುರಿದಂತೆ ಸುರಿಯುತ್ತಿದ್ದು, ಉಡುಪಿ ತಾಲೂಕಿನಲ್ಲಿ ತೀರಾ ದುರ್ಬಲವಾಗಿದ್ದರೆ, ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಮಳೆ ಬಿರುಸಾಗಿದೆ. ಪಶ್ಚಿಮ ಘಟ್ಟ ತಪ್ಪಲು ಪ್ರದೇಶಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ ಎಂದು ತಿಳಿದು ಬಂದಿದೆ.

ಆದರೂ, ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋಗದಂತೆ ಹಾಗೂ ಈಗಾಗಲೇ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿರುವವರು ಕೂಡಲೇ ಮರಳು ವಂತೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾ ದೇವಿ ತಿಳಿಸಿದ್ದಾರೆ.

ಕೇರಳಕ್ಕೆ ಪ್ರವೇಶಿಸಿರುವ ಮುಂಗಾರು ಮಳೆ

ಕೇರಳಕ್ಕೆ ಪ್ರವೇಶಿಸಿರುವ ಮುಂಗಾರು ಮಳೆ

ಕೇರಳಕ್ಕೆ ಪ್ರವೇಶಿಸಿರುವ ಮುಂಗಾರು ಮಳೆ ಕೇರಳದ ಎಲ್ಲಾ ಪ್ರದೇಶಗಳನ್ನು ವ್ಯಾಪಿಸಿದ್ದು ಕೋಳಿಕ್ಕಾಡ್ ನ ಮಳೆ ಚಿತ್ರ ಇಲ್ಲಿದೆ.

ದೆಹಲಿ, ಕೋಲ್ಕತ್ತಾ ಮುಂತಾದೆಡೆ ಬಿಸಿಲು

ದೆಹಲಿ, ಕೋಲ್ಕತ್ತಾ ಮುಂತಾದೆಡೆ ಬಿಸಿಲು

ದೆಹಲಿ, ಕೋಲ್ಕತ್ತಾ ಮುಂತಾದೆಡೆ ಬಿಸಿಲಿನ್ ಝಳ ಮುಂದುವರೆದಿದ್ದು ವಿದ್ಯಾರ್ಥಿನಿಯರು ಮುಸುಕುಧಾರಿಗಳಾಗಿ ಓಡಾಡುತ್ತಿದ್ದಾರೆ. ಪಿಟಿಐ ಚಿತ್ರ

ಕೇರಳದ ಚಿಣ್ಣರಿಗೆ ಸಂಭ್ರಮವೋ ಸಂಭ್ರಮ

ಕೇರಳದ ಚಿಣ್ಣರಿಗೆ ಸಂಭ್ರಮವೋ ಸಂಭ್ರಮ

ಮುಂಗಾರು ಮಳೆ ನಿಜವಾದ ಆನಂದ ಅನುಭವಿಸುತ್ತಿರುವ ಕೇರಳದ ಚಿಣ್ಣರು

2014ರಲ್ಲಿ ಮುಂಗಾರು ಮಾರುತ

2014ರಲ್ಲಿ ಮುಂಗಾರು ಮಾರುತ

2014ರಲ್ಲಿ ಮುಂಗಾರು ಮಾರುತ ಎಲ್ಲಿಂದ ಎಲ್ಲಿಗೆ ಹೇಗೆ ಸಾಗುತ್ತಿದೆ ಎಂಬುದರ ಬಗ್ಗೆ ಪಿಟಿಐ ಗ್ರಾಫಿಕ್ಸ್

ದೆಹಲಿ ವಾಟರ್ ಪಾರ್ಕ್ ನಲ್ಲಿ

ದೆಹಲಿ ವಾಟರ್ ಪಾರ್ಕ್ ನಲ್ಲಿ

ದೆಹಲಿ:ಮಳೆ ಇಲ್ಲದ ಕಾರಣ ವಾಟರ್ ಪಾರ್ಕ್ ನಲ್ಲಿ ಕಾಲ ಕಳೆಯುತ್ತಿರುವ ಯುವಕರು. ಕೋಲ್ಕತ್ತಾ, ಅಗರ್ತಲ, ಹೈದರಾಬಾದಿನಲ್ಲಿ ಮುಂಗಾರಿಗೂ ಮುನ್ನ ಮಳೆ ಅಲ್ಲಲ್ಲಿ ಬಿದ್ದಿರುವ ವರದಿಯಾಗಿದೆ.

ಮಳೆರಾಯನಿಗಾಗಿ ವಿಶೇಷ ಪೂಜೆ

ಮಳೆರಾಯನಿಗಾಗಿ ವಿಶೇಷ ಪೂಜೆ

ಮುಂಬೈ: ಮಳೆ ದೇವತೆ ವರುಣನ ಪೂಜೆ ಮಾಡುತ್ತಿರುವ ಅರ್ಚಕರು, ಪರ್ಜನ್ಯ ಜಪ ಸಾಂಗವಾಗಿ ಸಾಗಿದೆ.

English summary
The barometer reads 45 degree Celsius, there is no power for hours and the people are swooning with the terrible heat that has grasped Delhi. Add to it the humidity, which is recorded at 20-50 per cent in the morning hours. The MeT department too has turned down any possibility of rains in the near future. Meanwhile Monsoon has arrived in Kerala and Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X