ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟದ ಸ್ತ್ರೀ ಶಕ್ತಿಗಳ ಸಂಕ್ಷಿಪ್ತ ಪರಿಚಯ

By Mahesh
|
Google Oneindia Kannada News

ನವದೆಹಲಿ, ಮೇ.27 : 'ಮೀಸಲಾತಿ ನೀಡುವುದು ಸಮಸ್ಯೆಗಳಿಗೆ ಪರಿಹಾರವಲ್ಲ, ಅಭಿವೃದ್ಧಿಯೊಂದೇ ಸಮಸ್ಯೆಗೆ ಪರಿಹಾರ' ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಮಾತನಾಡಿದ ಮೋದಿ ಸಚಿವ ಸಂಪುಟದ ಹಿರಿಯ ಸಚಿವೆ ನಜ್ಮಾ ಹೆಫ್ತುಲ್ಲಾ ಹೇಳಿದ ಮಾತುಗಳಿವು. ಇದೇ ಮಾತುಗಳು ಮೋದಿ ಸಂಪುಟದಲ್ಲಿ ಮಹಿಳಾ ಮೀಸಲಾತಿಗೂ ಅನ್ವಯವಾಗಿದೆಯೋ ಗೊತ್ತಿಲ್ಲ. ಮೋದಿ ಸಂಪುಟದಲ್ಲಿ ಶೇ 25ರಷ್ಟು ಸ್ತ್ರೀ ಶಕ್ತಿ ತುಂಬಿಕೊಂಡಿದೆ.

ಮೋದಿ ಸಂಪುಟದಲ್ಲಿ 7 ಜನ ಮಹಿಳೆಯರಿಗೆ ಸ್ಥಾನ ಕಲ್ಪಿಸಲಾಗಿದ್ದು, ಎಲ್ಲರಿಗೂ ಉನ್ನತ ಮಟ್ಟದ ಸ್ಥಾನಗಳೇ ಲಭಿಸಿವೆ, ಮಹಿಳಾ ಸಬಲೀಕರಣ ಎಂಬ ವಿಪಕ್ಷಗಳ ಕೂಗಿಗೆ ಮೋದಿ ಈ ರೀತಿ ಉತ್ತರಿಸಿದ್ದಾರೆ. ಕಳೆದ ಯುಪಿಎ ಸರ್ಕಾರದಲ್ಲಿದ್ದ ಬೃಹತ್ ಮಂತ್ರಿ ಮಂಡಲದ 71 ಸಚಿವರ ಪೈಕಿ 7 ಜನ ಮಾತ್ರ ಮಹಿಳೆಯರಿದ್ದರು, ಗಿರೀಜಾ ವ್ಯಾಸ್ ಹಾಗೂ ಚಂದ್ರೇಶ್ ಕಟೋಚ್ ಮಾತ್ರ ಕ್ಯಾಬಿನೆಟ್ ದರ್ಜೆ ಪಡೆದಿದ್ದರು. ಮೀರಾ ಕುಮಾರ್ ಅವರನ್ನು ಸ್ಪೀಕರ್ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗ ಹಾಗೂ ಮಹಿಳೆಯರ ಮೆಚ್ಚುಗೆ ಪಡೆದಿದ್ದು ಬೇರೆ ಮಾತು.

ಈಗ ಮೋದಿ ಅವರು ತಮ್ಮ ಸಚಿವ ಸಂಪುಟದಲ್ಲಿ ಇನ್ನಷ್ಟು ಮಹಿಳೆಯರಿಗೆ ಸ್ಥಾನ ಕಲ್ಪಿಸಲಿ ಎಂಬ ಮಾತುಗಳು ಕೇಳಿ ಬಂದಿವೆ. ಜತೆಗೆ ಮಹಿಳಾ ಸಚಿವೆಯರಿಗೆ ಕೊಟ್ಟಿರುವ ಖಾತೆಗಳ ಬಗ್ಗೆ ಕೂಡಾ ಅಪಸ್ವರ ಎದ್ದಿದೆ. ಯಾರು ಯಾವ ಖಾತೆಯನ್ನು ಹೇಗೆ ನಿಭಾಯಿಸಬಲ್ಲರು ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಸದ್ಯಕ್ಕೆ ಏಳು ಸಚಿವೆಯರ ಸಂಕ್ಷಿಪ್ತ ವಿವರ ಇಲ್ಲಿದೆ ಓದಿ:

ಮೋದಿ ಸಂಪುಟದ ಏಳು ಸ್ತ್ರೀಶಕ್ತಿಗಳು

ಮೋದಿ ಸಂಪುಟದ ಏಳು ಸ್ತ್ರೀಶಕ್ತಿಗಳು

ಏಳು ಸಚಿವೆಯರ ಪೈಕಿ ಒಬ್ಬರು Cabinet Committee on Security (CCS) ಗೆ ಒಳಪಡಲಿದ್ದಾರೆ. ಪ್ರದೇಶವಾರು ಆಯ್ಕೆಯ ಪ್ರಕಾರವೂ ಮೋದಿ ಜಾಣ್ಮೆ ಮರೆದಿದ್ದಾರೆ. ಆದರೆ, ನಿರೀಕ್ಷೆಯಂತೆ ಉತ್ತರಪ್ರದೇಶ ಹೆಚ್ಚಿನ ಸ್ಥಾನ ಪಡೆದಿದೆ.

* ಸಂಸತ್ ಸದಸ್ಯೆಯಲ್ಲದಿದ್ದರೂ ನಿರ್ಮಲಾ ಸೀತಾರಾಮನ್(ಆಂಧ್ರ/ತಮಿಳುನಾಡು) ಗೆ ಮಣೆ ಹಾಕಲಾಗಿದೆ.
* ಗುಜರಾತ್ ರಾಜ್ಯಸಭಾ ಸದಸ್ಯೆ ಸ್ಮೃತಿ ಇರಾನಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ
* ಅಕಾಲಿದಳ ಮೈತ್ರಿ ಮನ್ನಿಸಿ ಸಂಸತ್ ಸದಸ್ಯೆ ಹರ್ಸಿಮತ್ ಕೌರ್ ಬಾದಲ್ (ಪಂಜಾಬ್)
* ಉತ್ತರಪ್ರದೇಶದಿಂದ ಮನೇಕಾ ಗಾಂಧಿಗೆ ಮನ್ನಣೆ.
* ಹಿರಿತನ ಹಾಗೂ ಏಕೈಕ ಮುಸ್ಲಿಂ ಪ್ರತಿನಿಧಿಯಾಗಿ ರಾಜ್ಯಸಭಾ ಸದಸ್ಯೆ ನಜ್ಮಾ ಹೆಫ್ತುಲ್ಲಾ
* ಉತ್ತರಪ್ರದೇಶದಿಂದ ಉಮಾಭಾರತಿ ಆಯ್ಕೆ.
* ಮಧ್ಯಪ್ರದೇಶದ ವಿದಿಶಾದಿಂದ ಸುಷ್ಮಾ ಸ್ವರಾಜ್ ಸ್ಥಾನ ಪಡೆದುಕೊಂಡಿದ್ದಾರೆ.
ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್

ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್

62 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್ ಅವರು ವಿದಿಶಾ ಕ್ಷೇತ್ರದಿಂದ ನಿರೀಕ್ಷೆಯಂತೆ ಜಯ ಗಳಿಸಿದ್ದು, ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರ ಖಾತೆ ಸಚಿವೆಯಾಗಿದ್ದಾರೆ. ಈ ಹಿಂದೆ ಮಾಹಿತಿ ಮತ್ತು ವಾರ್ತಾ, ದೂರ ಸಂಪರ್ಕ ಹಾಗೂ ಆರೋಗ್ಯ ಖಾತೆ ನಿಭಾಯಿಸಿದ್ದರು.

ಲೋಕಸಭೆಯಲ್ಲಿ ವಿಪಕ್ಷ ನಾಯಕಿಯಾಗಿ ಉತ್ತಮ ಕಾರ್ಯ ನಿರ್ವಹಣೆ, ಆರೆಸ್ಸೆಸ್ ಕಾರ್ಯಕರ್ತರೊಬ್ಬರ ಮಗಳಾಗಿರುವ ಸುಷ್ಮಾ ಅವರು ಪಕ್ಷದ ಹಿರಿಯ ನಾಯಕ ಎಲ್. ಕೆ ಅಡ್ವಾಣಿ ಅವರ ಪರಮ ಶಿಷ್ಯೆ. ಸ್ವದೇಶಿ ಚಿಂತನೆ ಉಳ್ಳ ಸುಷ್ಮಾ ವಿದೇಶಿ ನಾಯಕರ ಜತೆ ಮಾತನಾಡುವ ಕಲೆ ಹೊಂದಿದ್ದಾರೆ. ಏಳು ಬಾರಿ ಸಂಸದೆ, ಮೂರು ಬಾರಿ ಶಾಸಕಿ ಹಾಗೂ 25ನೇ ವರ್ಷಕ್ಕೆ ಹರ್ಯಾಣ ಸರ್ಕಾರದಲ್ಲಿ ಸಚಿವೆಯಾಗಿದ್ದ ಅನುಭವ ಹೊಂದಿದ್ದಾರೆ.

ಮುಸ್ಲಿಂ ಸಮುದಾಯದ ಪ್ರತಿನಿಧಿ ನಜ್ಮಾ

ಮುಸ್ಲಿಂ ಸಮುದಾಯದ ಪ್ರತಿನಿಧಿ ನಜ್ಮಾ

74 ವರ್ಷ ವಯಸ್ಸಿನ ನಜ್ಮಾ ಹೆಫ್ತುಲ್ಲಾ ಅವರು 1980 ರಿಂದ ಮಧ್ಯಪ್ರದೇಶದಿಂದ ರಾಜ್ಯ ಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಮೋದಿ ಸಂಪುಟದ ಹಿರಿಯ ನಾಯಕಿ ಹಾಗೂ ಏಕೈಕ ಮುಸ್ಲಿಂ ಪ್ರತಿನಿಧಿ. ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆ ಹೊಣೆ.

ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಅಜಾದ್ ವಂಶಸ್ಥೆಯಾಗಿರುವ ನಜ್ಮಾ ಅವರು ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅಣತಿಯಂತೆ ಬಿಜೆಪಿ ಸೇರ್ಪಡೆಗೊಂಡರು.

ಲೇಖಕಿಯಾಗಿ ಕೂಡಾ ನಜ್ಮಾ ಹೆಸರುವಾಸಿ. ಭೋಪಾಲ್ ಮೂಲದ ನಜ್ಮಾ ಅವರು ಪ್ರಾಣಿಶಾಸ್ತ್ರದಲ್ಲಿ ಪದವಿ ಹಾಗೂ ಕಾರ್ಡಿಯಾಕ್ ಅನಾಟಮಿ ವಿಷಯದಲ್ಲಿ ಡೆನ್ ವರ್ ವಿವಿಯಿಂದ ಪಿಎಚ್ಡಿ ಪಡೆದಿದ್ದಾರೆ.

ವಾಜಪೇಯಿ ಕಾಲದ ಅನುಭವಿ ಉಮಾ

ವಾಜಪೇಯಿ ಕಾಲದ ಅನುಭವಿ ಉಮಾ

55 ವರ್ಷ ವಯಸ್ಸಿನ ಉಮಾ ಭಾರ್ತಿ ಅವರು ಝಾನ್ಸಿ ಕ್ಷೇತ್ರದ ಸಂಸದೆ, ಜಲ ಸಂಪನ್ಮೂಲ ಖಾತೆ ಸಚಿವೆ. ದೇಶದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು, ಗಂಗಾ ನದಿ ಸ್ವಚ್ಛತೆ ಹೊಣೆ ಇವರ ಮೇಲಿದೆ.

ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಅವಧಿಯಲ್ಲಿ ಮಾನವ ಸಂಪನ್ಮೂಲ, ಪ್ರವಾಸೋದ್ಯಮ, ಯುವಜನಸೇನೆ ಮತ್ತು ಕ್ರೀಡೆ, ಕಲ್ಲಿದ್ದಲು ಮತ್ತು ಗಣಿ ಖಾತೆ ನಿರ್ವಹಿಸಿದ್ದರು. ರಾಮಜನ್ಮಭೂಮಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 2003ರಲ್ಲಿ ಮಧ್ಯಪ್ರದೇಶ ಮುಖ್ಯಂತ್ರಿಯಾಗಿದ್ದರು. ಫೈರ್ ಬ್ರ್ಯಾಂಡ್ ಮಾತಿಗೆ ಹೆಸರುವಾಸಿ. ಪಕ್ಷದಿಂದ ಮುನಿಸಿಕೊಂಡು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಏಕೈಕ 'ಗಾಂಧಿ' ಮನೆತನದ ಪ್ರತಿನಿಧಿ

ಏಕೈಕ 'ಗಾಂಧಿ' ಮನೆತನದ ಪ್ರತಿನಿಧಿ

ಫಿಲಿಬಿತ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ 57 ವರ್ಷ ವಯಸ್ಸಿನ ಏಳು ಬಾರಿ ಸಂಸದೆ ಮನೇಕಾ ಗಾಂಧಿ ಅವರು ಪರಿಸರ, ಪ್ರಾಣಿ ಪರ ಕಾಳಜಿ ಮೂಲಕ ದೇಶದೆಲ್ಲೆಡೆ ಜನಪ್ರಿಯತೆ ಗಳಿಸಿದ್ದಾರೆ. ಸಂಜಯ್ ಗಾಂಧಿ ಪತ್ನಿ ಮನೇಕಾ ಅವರು ವಿಶ್ವದಲ್ಲೇ ಪ್ರಥಮ ಎನ್ನಬಹುದಾದ ಪ್ರಾಣಿ ಕಲ್ಯಾಣ ಸಚಿವಾಲಯ ಸ್ಥಾಪನೆಗೆ ಕಾರಣಕರ್ತರು. ಮೋದಿ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾಗಿ ಕಾರ್ಯನಿರ್ವಹಣೆ.

ಅಟಲ್ ಬಿಹಾರಿ ವಾಜಪೇಯಿ ಸರಕರದಲ್ಲಿ ಪ್ರಾಣಿ ಕಲ್ಯಾಣ ಸಚಿವೆಯಾಗಿದ್ದರು. ಇಂದಿರಾಗಾಂಧಿ ಸೊಸೆಯಾಗಿರುವ ಮನೇಕಾ ಅವರು 2004ರಲ್ಲಿ ಬಿಜೆಪಿ ಸೇರಿದವರಾಗಿದ್ದಾರೆ.

ದೇಶದ ನೆಚ್ಚಿನ 'ಸೊಸೆ' ಗೆ ಹೆಚ್ಚಿನ ಜವಾಬ್ದಾರಿ

ದೇಶದ ನೆಚ್ಚಿನ 'ಸೊಸೆ' ಗೆ ಹೆಚ್ಚಿನ ಜವಾಬ್ದಾರಿ

ದೇಶದ ಕಿರುತೆರೆ ಜಗತ್ತಿನ ಜನಪ್ರಿಯ ಧಾರವಾಹಿ' ಸಾಸ್ ಭೀ ಕಬೀ ಬಹೂ ತೀ'ಯ ಪ್ರಮುಖ ಪಾತ್ರಧಾರಿಯಾಗಿದ್ದ ಸ್ಮೃತಿ ಇರಾನಿ ಈಗ ಮಾನವ ಸಂಪನ್ಮೂಲ ಖಾತೆ ಸಚಿವೆಯಾಗಿದ್ದಾರೆ. ಗುಜರಾತಿನ ಹಾಲಿ ರಾಜ್ಯಸಭಾ ಸದಸ್ಯೆ. ಅಮೇಥಿಯಲ್ಲಿ ರಾಹುಲ್ ವಿರುದ್ಧ ಸೆಣಸಿ ಸೋಲು ಕಂಡರೂ ಮೋದಿ ಸಂಪುಟದಲ್ಲಿ ಪ್ರಮುಖ ಖಾತೆ ಪಡೆಯುವಲ್ಲಿ ಯಶಸ್ವಿ..

ಪಕ್ಷದ ಉಪಾಧ್ಯಕ್ಷೆ, ರಾಷ್ಟೀಯ ಮಹಿಳಾ ವಿಭಾಗದ ಅಧ್ಯಕ್ಷೆ ಪದವಿ ಅಲಂಕರಿಸಿದ ಅನುಭವ ಹೊಂದಿದ್ದಾರೆ.

ಪಂಜಾಬಿನ ಪ್ರಭಾವಿ ಲೀಡರ್

ಪಂಜಾಬಿನ ಪ್ರಭಾವಿ ಲೀಡರ್

47 ವರ್ಷ ವಯಸ್ಸಿನ ಬಟಿಂಡಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ. ಹರ್ ಸಿಮ್ರತ್ ಕೌರ್ ಶಿರೋಮಣಿ ಅಕಾಲಿ ದಳ ಪಕ್ಷದ ನಾಯಕಿ. ಪಂಜಾಬ್ ಉಪಮುಖ್ಯಮಂತ್ರಿ ಸುಖಭೀರ್ ಸಿಂಗ್ ಬಾದಲ್ ಅವರ ಪತ್ನಿ, ಪ್ರಕಾಶ್ ಸಿಂಗ್ ಬಾದಲ್ ಅವರ ಸೊಸೆ. ಎರಡನೇ ಬಾರಿಗೆ ಸಂಸತ್ ಪ್ರವೇಶ ಹಾಗೂ ಮೊದಲ ಬಾರಿಗೆ ಸಚಿವ ಸ್ಥಾನ. ಹೆಣ್ಣು ಶಿಶು ಸಂರಕ್ಷಣೆ ಹೋರಾಟ 'Nanhi Chhaan' ದಲ್ಲಿ ಮುಂಚೂಣಿ.ದೆಹಲಿ ವಿವಿಯಿಂದ ಟೆಕ್ಸ್ ಟೈಲ್ ವಿನ್ಯಾಸ ವಿಷಯದಲ್ಲಿ ಪದವಿ, ಆಭರಣಗಳ ಉದ್ಯಮಿ, ಟ್ರೈಡೆಂಟ್ ಹೋಟೆಲ್ ಒಡತಿ. ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣಾ ಖಾತೆ ಸಚಿವೆ

ಪಕ್ಷದ ವಕ್ತಾರೆಗೆ ಸಿಕ್ತು ಮನ್ನಣೆ

ಪಕ್ಷದ ವಕ್ತಾರೆಗೆ ಸಿಕ್ತು ಮನ್ನಣೆ

ತಮಿಳುನಾಡು ಮೂಲದ ನಿರ್ಮಲಾ ಸೀತಾರಾಮನ್ ಅವರು ಪಕ್ಷದ ಹಿರಿಯ ವಕ್ತಾರೆಯಾಗಿದ್ದರು. ಸಂಸತ್ ಸದಸ್ಯರಲ್ಲದಿದ್ದರೂ ಸಂಪುಟ ಸೇರಿದ ಅದೃಷ್ಟವಂತೆ. ರಾಜಕೀಯ ಪ್ರವೇಶಕ್ಕೂ ಮುನ್ನ ಅಂತಾರಾಷ್ಟ್ರೀಯ ಖ್ಯಾತಿ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ನಲ್ಲಿ ಮ್ಯಾನೇಜರ್ ಆಗಿದ್ದರು. ಬಿಬಿಸಿಯಲ್ಲೂ ಕಾರ್ಯನಿರ್ವಹಣೆ ಅನುಭವ. ಮೋದಿ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್ ಗೆ ವಾಣಿಜ್ಯ ಖಾತೆ(ಸ್ವತಂತ್ರ) ನೀಡಲಾಗಿದೆ.

English summary
As the newly- elected BJP government's council of ministers were sworn- in on Monday, along with the Prime Minister Narendra Modi, the important point to be noted is that women accounts for 25% in the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X