ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಳಪು ಕಳೆದುಕೊಳ್ಳುತ್ತಿರುವ ಐಐಎಸ್‌ಸಿ ಬೆಂಗಳೂರು

|
Google Oneindia Kannada News

ಬೆಂಗಳೂರು, ಆ. 26 : ವಿಶ್ವದ ಅಗ್ರಗಣ್ಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ಪ್ರತಿವರ್ಷ ತನ್ನ ಹೊಳಪು ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ.

ಪ್ರಪಂಚದ 500 ಟಾಪ್‌ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಪಡೆದಿರುವ ಐಐಎಸ್‌ಸಿಯನ್ನು 2003ರಿಂದ ಪ್ರತಿ ವರ್ಷ ಕನಿಷ್ಠ 10 ಶಿಕ್ಷಣ ಸಂಸ್ಥೆಗಳು ಹಿಂದಿಕ್ಕುತ್ತಿವೆ. ಕಳೆದ 11 ವರ್ಷಗಳಲ್ಲಿ ಐಐಎಸ್‌ಸಿ 130 ಸ್ಥಾನಗಳ ಕುಸಿತ ಕಂಡಿದ್ದರೂ 2013ರ ವಿಶ್ವದ ಅತ್ಯುತ್ತಮ 500 ಶಿಕ್ಷಣ ಸಂಸ್ಥೆಗಳಲ್ಲಿ ಪಟ್ಟಿಯಲ್ಲಿ ಸ್ಥಾನ ಕಾಪಾಡಿಕೊಂಡಿದೆ. ಆದರೆ 2013ರಲ್ಲಿ 300ನೇ ಸ್ಥಾನದ ಸಮೀಪ ಇದ್ದ ಐಐಎಸ್‌ಸಿ ಈಗ 400 ಗಡಿಗೆ ಕುಸಿದಿದೆ. ಸುಮಾರು 50 ವಿಶ್ವವಿದ್ಯಾಲಯಗಳು ಐಐಎಸ್‌ಸಿಯನ್ನು ಹಿಂದಿಕ್ಕಿವೆ.

university

ಎಆರ್‌ಡಬ್ಲ್ಯೂಯು ಅಳತೆಗೋಲು ಏನು?
ಸಂಶೋಧನೆ ಮತ್ತು ವಾರ್ಷಿಕ ಸಾಧನೆ ಆಧಾರದಲ್ಲಿ ವಿಶ್ವದ ಎಲ್ಲ ಪ್ರಮುಖ ವಿಶ್ವವಿದ್ಯಾನಿಲಯಗಳಿಗೆ ನಿರ್ದಿಷ್ಟ ಸ್ಥಾನ ನೀಡುವ ಪ್ರಕ್ರಿಯೆಯನ್ನು ಎಆರ್‌ಡಬ್ಲ್ಯೂ ಮಾಡಿಕೊಂಡು ಬಂದಿದೆ. ಬಹುಮುಖ್ಯವಾಗಿ ಯಾವ ರೀತಿ ಸಂಶೊಧನಾ ಪ್ರಬಂಧ ಮಂಡಿಸಲಾಗಿದೆ. ವಿದ್ಯಾರ್ಥಿಗಳ ಸಾಧನೆ ಯಾವ ರೀತಿ ಇದೆ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

2003ರಲ್ಲಿ ಐಐಎಸ್‌ಸಿ ಮೊದಲ ಬಾರಿಗೆ ಎಆರ್‌ಡಬ್ಲ್ಯೂಯು ಪಟ್ಟಿಯಲ್ಲಿ ಸ್ಥಾನ ಪಡೆದಾಗ 270-275ರ ಆಸುಪಾಸಿನಲ್ಲಿತ್ತು. ಈಗ ಹತ್ತು ವರ್ಷದ ನಂತರ ಅವಲೋಕಿಸಿದಾಗ 130 ಸ್ಥಾನ ಕುಸಿದು 400ನೇ ಸ್ಥಾನಕ್ಕೆ ಬಂದು ನಿಂತಿದೆ.

ರಸಾಯನಶಾಸ್ತ್ರದಲ್ಲೂ ಕುಸಿತ
ಅಲ್ಲದೇ ಐಐಎಸ್‌ಸಿ ವಿಷಯಗಳ ಆಧಾರದಲ್ಲೂ ನಿರಂತರವಾಗಿ ತನ್ನ ಸ್ಥಾನ ಕಳೆದುಕೊಳ್ಳುತ್ತಲೇ ಸಾಗುತ್ತಿರುವುದು ಮಾಹಿತಿ ನೋಡಿದಾಗ ಸ್ಪಷ್ಟವಾಗುತ್ತದೆ. 2013ರ ವೇಳೆ ರಸಾಯನಶಾಸ್ತ್ರ ವಿಭಾಗದಲ್ಲಿ 43ನೇ ಸ್ಥಾನ ಗಳಿಸಿದ್ದ ಐಐಎಸ್‌ಸಿ ಈ ವರ್ಷ 51-75ರ ನಡುವಿನ ಸ್ಥಾನಕ್ಕೆ ಬಂದು ನಿಂತಿದೆ.

2009ರಲ್ಲಿ 76-101ರ ನಡುವೆ ಇದ್ದ ರಸಾಯನಶಾಸ್ತ್ರ ವಿಭಾಗ 2010ರಲ್ಲೂ ಅದೇ ಸ್ಥಾನ ಕಾಪಾಡಿಕೊಂಡಿತ್ತು. ನಂತರ 2011ರಲ್ಲಿ 49ನೇ ಸ್ಥಾನಕ್ಕೆ ಜಿಗಿದಿತ್ತು. 2012ರಲ್ಲಿ 45 ಮತ್ತು 2013ರಲ್ಲಿ 43ನೇ ಸ್ಥಾನಕ್ಕೇರಿ ಸಾಧನೆ ಮಾಡಿತ್ತು. ಆದರೆ ಈ ವರ್ಷ 51-75ರ ನಡುವಿನ ಸ್ಥಾನಕ್ಕೆ ಕುಸಿದಿದೆ.

ಕಂಪ್ಯೂಟರ್‌ ಸೈನ್ಸ್‌ ಮತ್ತು ಇಂಗ್ಲಿಷ್‌ನಲ್ಲೂ ಕಳಪೆ ಪ್ರದರ್ಶನ
ಕಂಪ್ಯೂಟರ್‌ ಸೈನ್ಸ್‌ಗೆ ಸಂಬಂಧಿಸಿ 2013ರಲ್ಲಿ 51-75ರ ನಡುವಿನ ಸ್ಥಾನದಲ್ಲಿದ್ದ ಐಐಎಸ್‌ಸಿ ಈ ವರ್ಷ 101-150ರ ನಡುವಿನ ಸ್ಥಾನಕ್ಕೆ ಕುಸಿದಿದೆ. 2009ರಲ್ಲಿ 76-100ರ ನಡುವೆ ಸ್ಥಾನ ಪಡೆದಿದ್ದ ಇಂಗಿಷ್‌ ಈ ಬಾರಿ 101-150ಕ್ಕೆ ಇಳಿದಿದೆ. ಆದರೆ ನೈಸರ್ಗಿಕ ವಿಜ್ಞಾನದಲ್ಲಿ 151-200ರ ನಡುವಿನ ಸ್ಥಾನ ಕಾಪಾಡಿಕೊಂಡಿದೆ.

ಐಐಎಸ್‌ಸಿ ನಿರ್ದೇಶಕ ಅನುರಾಗ್‌ ಕುಮಾರ್‌ ಹೇಳುವಂತೆ, ಸಂಸ್ಥೆಯ ಸಾಧನೆಯಲ್ಲಿ ಯಾವುದೇ ಹಿನ್ನಡೆಯಾಗಿಲ್ಲ. ಇತರ ವಿಶ್ವವಿದ್ಯಾಲಯಗಳು ಉತ್ತಮ ಸಾಧನೆ ಮಾಡಿರುವುದರಿಂದ ಕುಸಿತವಾದಂತೆ ಕಂಡುಬಂದಿದೆ. ಇನ್ನಷ್ಟು ಶ್ರಮ ವಹಿಸಿ ಮತ್ತೆ ಹಿಂದಿನ ದಶಕದ ಸ್ಥಾನ ಪಡೆದುಕೊಳ್ಳಲು ಶ್ರಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ವಿಶ್ವವಿದ್ಯಾಲಯದ ಶಿಕ್ಷಣದ ಗುಣಮಟ್ಟದಲ್ಲಿ ಕೊರತೆಯಾಗಿದೆ ಎಂಬ ಆರೋಪಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೂ ಕೆಲವೊಂದು ಗೊಂದಲಗಳು ಕಾಡುತ್ತಿರುವುದು ಸತ್ಯ. ಇದೆಲ್ಲವನ್ನು ಬಗೆಹರಿಸಿ ಹಳೆಯ ಲಯಕ್ಕೆ ಮರಳಲು ಸಂಬಂಧಿಸಿದವರೊಡನೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ' ಎಂದು ಅನುರಾಗ್‌ ಕುಮಾರ್‌ ವಿವರಿಸಿದ್ದಾರೆ.

ವಿಶ್ವವಿದ್ಯಾಲಯ ಯಾವಾಗಲೂ ಗುಣಮಟ್ಟ ಕಾಯ್ದುಕೊಂಡು ಬಂದಿದೆ. ಸಂಸ್ಥೆಯ ವಿವಿಧ ಸಮಿತಿಗಳುಈ ಬಗ್ಗೆ ಚರ್ಚಿಸುತ್ತಿವೆ. ಏಳು-ಬೀಳು ಸಾಮಾನ್ಯವಾದರೂ ಲೋಪವಿದ್ದಲ್ಲಿ ಹುಡುಕಿ ಸರಿಮಾಡಲಾಗುವುದು ಎಂದು ತಿಳಿಸಿದ್ದಾರೆ.

English summary
On an average, at least 10 institutions have overtaken Indian Institute of Science (IISc) every year in the global ratings since 2003, even though it continues to be the only one from India in the top 500. It has dropped 130 ranks in 11 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X