ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೊ : ಟೆಲಿವಿಷನ್ ಕಟಕಟೆಯಲ್ಲಿ ನರೇಂದ್ರ ಮೋದಿ

By Mahesh
|
Google Oneindia Kannada News

ನವದೆಹಲಿ, ಏ.13: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಪ್ರಚಾರದ ವೈಖರಿ, ಡ್ರೆಸ್ ಕೋಡ್, ಗುಜರಾತ್ ಅಭಿವೃದ್ಧಿ, ಬಾಲ್ಯದ ದಿನಗಳು, ಮುಸ್ಲಿಂ ಸಮುದಾಯ ಕುರಿತಂತೆ ನಿಲುವು, ಮುಂದಿನ ಯೋಜನೆಗಳನ್ನು ಕುರಿತಂತೆ ಇಂಡಿಯಾ ಟಿವಿಗೆ ವಿಶೇಷ ಸಂದರ್ಶನ ನೀಡಿದರು.

ಇಂಡಿಯಾ ಟಿವಿಯಲ್ಲಿ ಶನಿವಾರ ರಾತ್ರಿ 10 ಗಂಟೆಗೆ ಪ್ರಸಾರವಾದ 'ಆಪ್ ಕಿ ಅದಾಲತ್ ' ವಿಶೇಷ ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ಹಾಗೂ ಕಾರ್ಯಕ್ರಮದ ನಿರೂಪಕ ರಜತ್ ಶರ್ಮ ಅವರು ಹೀಗೆ ಪ್ರಶ್ನಿಸಿದರು. 'ಸಮಾರಂಭಗಳಲ್ಲಿ ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿದ್ದು ಏಕೆ? ಇದಕ್ಕೆ ಮೋದಿ ಕೊಟ್ಟ ಉತ್ತರ ಹೀಗಿತ್ತು.

'ನಾನು ಮುಸ್ಮಮಾನರ ಟೋಪಿ ಧರಿಸುವುದಿಲ್ಲ, ಆದರೆ ಅವರ ಟೋಪಿಯನ್ನು ಯಾರಾದರೂ ಉದುರಿಸಲು ಪ್ರಯತ್ನಿಸಿದರೆ ಅವರನ್ನು ದಂಡಿಸದೇ ಬಿಡುವುದಿಲ್ಲ'. 'ಮುಸಲ್ಮಾನ ಬಾಂಧವರ ಒಂದು ಕೈಯಲ್ಲಿ ಕುರಾನ್ ಇರಲಿ, ಮತ್ತೊಂದು ಕೈಗೆ ಕಂಪ್ಯೂಟರ್ ಸಿಗುವಂತಾಗಲಿ' ಎಂದು ಶಿಕ್ಷಣದ ಮಹತ್ವದ ಬಗ್ಗೆ ಹೇಳಿದರು.

I don't believe in sporting caps: Modi says in Aap Ki Adalat

ತಮ್ಮನ್ನು ತಾವು ಜಾತ್ಯತೀತರೆಂದು ಕರೆದುಕೊಳ್ಳುತ್ತಾ ದಶಕಗಳಿಂದ ಮುಸಲ್ಮಾನರಿಗೆ ಟೋಪಿ ಹಾಕುತ್ತಿರುವ ರಾಜಕಾರಣಿಗಳ ಪೈಕಿ ನಾನಲ್ಲ. ಮಹಾತ್ಮ ಗಾಂಧೀಜಿ ಹಾಗೂ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರು ಎಂದಿಗೂ ಆ ರೀತಿ ಟೋಪಿ ಧರಿಸಿರಲಿಲ್ಲ.ಆ ರೀತಿ ಟೋಪಿ ಧರಿಸಿ ಜನರನ್ನು ಓಲೈಸಿಕೊಳ್ಳಬೇಕಾಗಿಲ್ಲ. ದೇಶದ ಎಲ್ಲಾ ಅಲ್ಪಸಂಖ್ಯಾತರು, ಮುಸ್ಲಿಂರು, ಕ್ರೈಸ್ತರಿರಲಿ ಯಾರೇ ಆಗಲಿ ನರೇಂದ್ರ ಮೋದಿಗೆ ಸಿಗುವ ಹಕ್ಕು ಎಲ್ಲರಿಗೂ ಸಿಗಬೇಕಿದೆ. ಹಾಗೂ ಬಿಜೆಪಿ ಸರ್ಕಾರ ಎಲ್ಲರಿಗೂ ಸಮಾನ ಹಕ್ಕು ಸಿಗುವಂತೆ ನೋಡಿಕೊಳ್ಳಲಿದೆ ಎಂದರು.

ಮೋದಿ ಅವರು ಸಮಾವೇಶಗಳ ಸಂದರ್ಭದಲ್ಲಿ ಆಯಾ ರಾಜ್ಯದ ಪೇಟ ಧರಿಸಿತ್ತಾರೆ ಆದರೆ, ಮುಸ್ಲಿಂ ಟೋಪಿ ಧರಿಸುವುದಿಲ್ಲ ಏಕೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಅವರು ಈ ಹಿಂದೆ ಪ್ರಶ್ನಿಸಿದ್ದರು.

ಉಳಿದವರು ತಮ್ಮನ್ನು ತಾವು ಜಾತ್ಯತೀತರೆಂದು ಕರೆದುಕೊಳ್ಳುತ್ತಾ ದಶಕಗಳಿಂದ ಮುಸಲ್ಮಾನರಿಗೆ ಟೋಪಿ ಹಾಕುತ್ತಿರುವಾಗ, ಸಮುದಾಯದ ನಿಜವಾದ ಅಭಿವೃದ್ದಿಯ ಕನಸು ಕಾಣುತ್ತಿರುವ ಮೋದಿಯವರಿಗೆ ಮುಸಲ್ಮಾನರು ಸೇರಿದಂತೆ ಎಲ್ಲರ ಬೆಂಬಲ ದೊರೆಯಲಿ. ನಮ್ಮೆಲ್ಲರ ನಾಳಿನ ಭವಿಷ್ಯ ಉಜ್ವಲವಾಗಿರಲಿ, ಕತ್ತಲೆ ಕಳೆಯಲಿ, ಮೋದಿಯೆಂಬ ಬೆಳಕು ಮೂಡಲಿ ಎಂದು ಮೋದಿ ಪರ ಅಭಿಮಾನಿಗಳು ಜಯಘೋಷ ಹಾಕಿದರು.

ಭಾರಿ ಚರ್ಚೆಗೆ ಒಳಗಾಗಿರುವ ಆಪ್ ಕಿ ಅದಾಲತ್ ನಲ್ಲಿ ಮೋದಿ ಸಂದರ್ಶನದ ಸಂಪೂರ್ಣ ಪ್ರಶ್ನೋತ್ತರ ಪಠ್ಯಇಲ್ಲಿದೆ ಓದಿ...
ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಕೆಳಗಿದೆ ವೀಕ್ಷಿಸಿ:

English summary
Modi, who was annointed as the PM candidate in September last year, said he didn't believe in sporting any type of caps on his head, unlike the so-called secular politicians. Modi was speaking in an exclusive interview to Aap Ki Adalat, a popular television show hosted by senior journalist Rajat Sharma on India TV
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X