ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಸಾಧು ಲೂಸಿಯಾ ಟ್ಯಾಬ್ಲೆಟ್ ತಗೊಂಡಿದ್ನಾ?

By Prasad
|
Google Oneindia Kannada News

ಬೆಂಗಳೂರು, ಅ. 19 : "ಚಿನ್ನದ ನಿಕ್ಷೇಪದ ಕನಸು ಕಂಡಿದ್ದ ಸಾಧು ಲೂಸಿಯಾ ಟ್ಯಾಬ್ಲೆಟ್ ಏನಾದರೂ ತೆಗೆದುಕೊಂಡಿದ್ದನಾ?", "ರಾಹುಲ್ ಗಾಂಧಿಯಲ್ಲಿ ಹಿಡನ್ ಟ್ಯಾಲೆಂಟ್ ಹುಡುಕಲು ಸೋನಿಯಾ ಗಾಂಧಿ ಸಾಧುವನ್ನು ಕೇಳಬಹುದು!", "ನನ್ನ ಬಾಸ್ ಅಂಡಿನ ಕೆಳಗಡೆ 1 ಟನ್ ಚಿನ್ನ ಇದೆ ಎಂದು ಕನಸು ಬಿದ್ದಿತ್ತು, ಎಎಸ್ಐ ಪ್ಲೀಸ್ ಡಿಗ್ ಮಾಡಿ!"

ಸಾಧುವೊಬ್ಬ ಚಿನ್ನದ ನಿಕ್ಷೇಪವಿರುವುದರ ಬಗ್ಗೆ ಕಂಡ ಕನಸಿನ ಬೆನ್ನತ್ತಿ ಹೊರಟಿರುವ ಭಾರತೀಯ ಸರ್ವೇಕ್ಷಣ ಇಲಾಖೆಯ ನೆಲ ಅಗಿಯುವ ಕೆಲಸ ನಗೆಪಾಟಲಾಗುವ ಎಲ್ಲ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಎದ್ದುಬಿದ್ದು ನಗುವಂತಹ ಟ್ವೀಟ್ ಗಳು ಟ್ವಿಟ್ಟರಲ್ಲಿ ಹರಿದಾಡುತ್ತಿವೆ.

ಉತ್ತರಪ್ರದೇಶದ ಕಾನ್ಪುರದಲ್ಲಿ ಶನಿವಾರ ಆಯೋಜಿಸಲಾಗಿದ್ದ ನರೇಂದ್ರ ಮೋದಿ ಭಾಷಣದ ದಿಕ್ಕುತಪ್ಪಿಸಲು ಕೇಂದ್ರ ಯುಪಿಎ ಸರಕಾರ ಕಂಡುಕೊಂಡ ಹೊಸ ಉಪಾಯವೇ ಚಿನ್ನದ ನಿಕ್ಷೇಪದ ಉತ್ಖನನ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಸರ್ವೇಕ್ಷಣ ಇಲಾಖೆಯ ನಿರ್ದೇಶಕರೇ ದೌಡಿಯಾ ಖೇಡಾ ಕೋಟೆಯ ಆವರಣದಲ್ಲಿ ಚಿನ್ನದ ನಿಧಿ ಸಿಗುವುದು ಅನುಮಾನ ಎಂದು ಹೇಳಿ ಅಪಹಾಸ್ಯಕ್ಕೀಡಾಗಿದ್ದಾರೆ.

ಚಿನ್ನದ ನಿಕ್ಷೇಪ ಹುಡುಕುವ ಈ ಪ್ರಹಸನದ ಬಗ್ಗೆ ಟ್ವಿಟ್ಟಿಗರು ಏನು ಯೋಚಿಸುತ್ತಿದ್ದಾರೆ ಎಂಬುದರತ್ತ ಒಂದು ಗಮನ ಹರಿಸೋಣ ಬನ್ನಿ.

ಸಾಧು ಲೂಸಿಯಾ ಟ್ಯಾಬ್ಲೆಟ್ ತಗೊಂಡಿದ್ನಾ

ಕನ್ನಡ ಸೂಪರ್ ಹಿಟ್ ಚಿತ್ರ ಲೂಸಿಯಾ ಕಥೆ ಎಲ್ಲರಿಗೂ ಗೊತ್ತಿರುವ ವಿಚಾರವೆ. ಉತ್ತರಪ್ರದೇಶದ ಸಾಧು ಸರ್ಕಾರ್ ಕೂಡ ನಿದ್ದೆ ಬಾರದೆ ಲೂಸಿಯಾ ಟ್ಯಾಬ್ಲೆಟ್ ಏನಾದ್ರೂ ತಗೊಂಡಿದ್ನಾ ಅಂತ ಇಲ್ಲಿ ಟ್ವಿಟ್ಟಿಗರೊಬ್ಬರಿಗೆ ಡೌಟ್ ಬಂದಿದೆ. ನಿಮಗೆ?

ಡಿಗ್-ವಿಜಯ್ ಸಿಂಗ್

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕುರಿತು ಒಂದು ಹಾಸ್ಯ ಚಟಾಕಿ.

ಈ ಸುದ್ದಿ ಖಂಡಿತ ನಿಜವಲ್ಲ

ರಾಹುಲ್ ಒಳಗೆ ಹುಡುಗಿರುವ ಪ್ರತಿಭೆಯನ್ನು ಹೊರತೆಗೆಯಲು ಅವರ ಅಮ್ಮ ಸಾಧುವನ್ನು ಕೇಳಿದ್ದಾರಂತೆ!

ಇದು ಏಪ್ರಿಲ್ ಫೂಲ್ ಅಲ್ಲ ತಾನೆ

ಎಲ್ಲೆಡೆ ಫೂಲ್ (ಮೂರ್ಖರೇ) ತುಂಬಿರುವಾಗ ಏಪ್ರಿಲ್ ಫೂಲ್ ಆಚರಣೆಯ ಅಗತ್ಯವೇ ಇರುವುದಿಲ್ಲ.

ನಾನೊಂದ ಕನಸ ಕಂಡೆ

ನನ್ನ ಬಾಸ್ ಬುಡದಲ್ಲಿ ಚಿನ್ನದ ನಿಕ್ಷೇಪ ಇದೆಯಂತೆ ಕನಸು ಬಿದ್ದಿದೆಯಂತೆ ಇಲ್ಲೊಬ್ಬರಿಗೆ. ಕಾಲಾಯ ತಸ್ಮೈನಃ.

ನಾಚ್ ಬಂದರ್ ನಾಚ್

ಮತ್ತೊಂದೆಡೆ ಭೂಮಿಯಲ್ಲಿ 2500 ಟನ್ ನಷ್ಟು ಚಿನ್ನ ಹುದುಗಿದೆಯಂತೆ. ಭಾರತೀಯ ಸರ್ವೇಕ್ಷಣ ಇಲಾಖೆ ಅಲ್ಲಿಯೂ ನೆಲ ಅಗಿಯಲು ಸಖತ್ ತಯಾರಿ ನಡೆಸಿದೆಯಂತೆ!

ಇನ್ಮುಂದೆ ತೆರಿಗೆ ಯಾಕೆ ಕಟ್ಟಬೇಕು?

ಹೀಗೇ ನೆಲ ಅಗಿಯುತ್ತ ಚಿನ್ನ ಸಿಗುತ್ತಿದ್ದರೆ ಸರಕಾರಕ್ಕೆ ತೆರಿಗೆ ಏಕೆ ಕಟ್ಟಬೇಕು? ಟ್ವಿಟ್ಟಿಗರೊಬ್ಬರ ಅಮಾಯಕ ಪ್ರಶ್ನೆ!

ಕನಸು ಕಾಣಿರಣ್ಣೋ

ಕನಸು ಕಾಣುವುದು ಹೇಗೆ ಅಂತ ಈ ಸಾಧು ಸರ್ಕಾರ್ ನಿಂದ ಕಲಿಯಬೇಕು. ಕನಸು ಕಾಣುವುದು ಕೂಡ ಒಂದು ಕಲೆ ಅಂತ ಆತ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ.

English summary
Digging of land in Daudia Kheda in Uttar Pradesh by Archaeological Survey of India has become a subject of mockery. Tweeples are lambasting this waste attempt to find hidden gold, which a sadhu is believed to have dreamt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X